ಮಳೆಗಾಲದ ಸಮಯದಲ್ಲಿ ಸಾಮಾನ್ಯ ಜ್ವರ, ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ ಮೊದಲಾದ ಸಾಂಕ್ರಾಮಿಕ ರೋಗಗಳೂ ಆರಂಭವಾಗುತ್ತವೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳಿಂದ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಬಹುದು. ಮುಖ್ಯವಾಗಿ ಈ ಋತುವಿನಲ್ಲಿ ಕೊಂಚ ಅನಾರೋಗ್ಯ ಕಾಣಿಸಿಕೊಂಡರೂ ತಡ ಮಾಡದೇ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
ರೋಗ ಪ್ರಸರಣ ತಡೆಯಲು ಹೀಗೆ ಮಾಡಿ :
- ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಿ
- ಸೋಂಕಿತರ ಬಳಿ ಹೋಗುವಾಗ ಮಾಸ್ಕ್ ಧರಿಸಿ
- ಸೋಂಕಿತರ ಸಂಪರ್ಕಕ್ಕೆ ಬರುವವರು ಸಾಧ್ಯವಾದಷ್ಟು ಕೈಗವಸು ಬಳಸಿ
- ಆಗಾಗ ಸಾಬೂನು ಅಥವಾ ಹ್ಯಾಂಡ್ ವಾಷ್ ನಿಂದ ಕೈ ತೊಳೆದುಕೊಳ್ಳಿ
- ಸೋಂಕಿತರು ಇರುವ ಕೊಠಡಿಯನ್ನು ಶುದ್ದೀಕರಿಸಿ
ಇವನ್ನು ಮಾಡಬೇಡಿ :
- ಸೋಂಕಿನ ಲಕ್ಷಣ ಕಾಣಿಸಿಕೊಂಡಾಗ ಉದಾಸೀನ ಮಾಡಬೇಡಿ
- ಸೋಂಕಿತರ ವಸ್ತ್ರಗಳನ್ನು ಬರಿಗೈಯಿಂದ ಮುಟ್ಟಬೇಡಿ
- ಸೋಂಕಿತರ ಜತೆ ಒಂದೇ ಹಾಸಿಗೆಯಲ್ಲಿ ಮಲಗಬೇಡಿ
- ಸೋಂಕಿತರ ಹಾಸಿಗೆ ವಸ್ತ್ರಗಳನ್ನು ಒಗೆಯದೇ, ಬಿಸಿಲಿನಲ್ಲಿ ಒಣಗಿಸದೆ ಬಳಸಬೇಡಿ