ರಾಷ್ಟ್ರೀಯ ಪಿಂಚಣಿ ಯೋಜನೆ (NPS)- ಇದು ವ್ಯಕ್ತಿಗಳ ನಿವೃತ್ತಿ ಬದುಕಿಗೆ ನೆರವಾಗುವ ಯೋಜನೆ.
ಇದರಲ್ಲಿ ಎರಡು ವಿಧಗಳಿವೆ.
ಟೈರ್-1: ಇದರಲ್ಲಿ ಹೂಡಿಕೆ ಮಾಡಲಾದ ಮೊತ್ತವನ್ನು 60 ವರ್ಷ ನಂತರವಷ್ಟೇ ಹಿಂಪಡೆಯಬಹುದು. ಆರಂಭದಲ್ಲಿ ರೂ.500 ಹೂಡಿಕೆ ಮಾಡಿ ಖಾತೆ ತೆರೆಯಬಹುದು. ವಾರ್ಷಿಕ ಕನಿಷ್ಠ ಹೂಡಿಕೆ ರೂ. 1000 ಮತ್ತು ಗರಿಷ್ಠ ಹೂಡಿಕೆ 1.5 ಲಕ್ಷ ರೂಪಾಯಿ. ಹೂಡಿಕೆಗೆ ಆದಾಯ ತೆರಿಗೆ ಸೆಕ್ಷನ್ ಕಾಯಿದೆ 80 ಸಿಸಿಡಿ (1) ಅಡಿ ತೆರಿಗೆ ವಿನಾಯಿತಿ ಇದೆ. ನಿವೃತ್ತಿ ಸಮಯದಲ್ಲಿ ಹಿಂಪಡೆಯುವ ಮೊತ್ತಕ್ಕೆ ತೆರಿಗೆ ಇರುವುದಿಲ್ಲ.
ಟೈರ್-2: ಇಲ್ಲಿ ಹೂಡಿಕೆ ಮಾಡಲಾದ ಮೊತ್ತಕ್ಕೆ ತೆರಿಗೆ ವಿನಾಯಿತಿ ಇರುವುದಿಲ್ಲ. ಆದರೆ ಯಾವುದೇ ಸಮಯದಲ್ಲಾದರೂ ನೀವು ಹೂಡಿಕೆ ಮಾಡಿದ ಮೊತ್ತವನ್ನು ಹಿಂಪಡೆಯಬಹುದು. ಇದೇ ಈ ಯೋಜನೆಯ ವಿಶೇಷತೆ.
ದೀರ್ಘಾವಧಿ ಹೂಡಿಕೆಯಲ್ಲಿ ಲಾಭ ಹೆಚ್ಚು. ಹೀಗಾಗಿ ನಿವೃತ್ತಿ ದೃಷ್ಟಿಯಿಂದ ಟೈರ್-1 ಒಳ್ಳೆಯದು. ನಿವೃತ್ತಿಗೂ ಮೊದಲೇ ಹಣ ಹಿಂಪಡೆಯುವ ಅಥವಾ ನಿವೃತ್ತಿ ಹೊರತಾಗಿ ಬೇರೆ ಉದ್ದೇಶಗಳಿಗೆ ಅಂದರೆ ಮನೆ ನಿರ್ಮಾಣ, ಮಕ್ಕಳ ಶಿಕ್ಷಣ, ಮಕ್ಕಳ ಮದುವೆ ಇತ್ಯಾದಿ...
ಹೂಡಿಕೆ ಮಾಡುವ ಉದ್ದೇಶವಿದ್ದರೆ ಟೈರ್-2 ಒಳ್ಳೆಯದು. ನಿಮ್ಮ ಅಗತ್ಯ ಮತ್ತು ಆದ್ಯತೆ ಏನಿದೆ ಎನ್ನುವುದನ್ನು ನಿರ್ಧರಿಸಿಕೊಂಡು ಹೂಡಿಕೆ ಮಾಡಬಹುದು.