Date: 14 Nov 2024 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜ್ಯೋತಿಷ್ಯ » ಆಧ್ಯಾತ್ಮಿಕ

ಸವದತ್ತಿಯ ಮುನವಳ್ಳಿ ಗ್ರಾಮದಲ್ಲಿ ಪರಶಿವನು ಪಂಚಲಿಂಗೇಶ್ವರನಾಗಿ ನೆಲೆಸಿರುವ ಮಹಾಪುಣ್ಯಕ್ಷೇತ್ರ


12 Jul 2022

ಬಯಲುಸೀಮೆಯ ಸುಂದರ ಹಸಿರು ಪರಿಸರದಲ್ಲಿ, ಮಲಪ್ರಭಾ ನದಿಯ ದಂಡೆಯ ಮೇಲೆ ನೆಲೆಸಿರುವ ಪಂಚಲಿಂಗೇಶ್ವರ ದೇವಾಲಯ ಇರುವುದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದಲ್ಲಿ.  ಈ ದೇವಾಲಯದಲ್ಲಿ ಒಂದೇ ಪಾಣಿಪೀಠದ ಮೇಲೆ ಐದು ಲಿಂಗಗಳು ಪ್ರತಿಷ್ಠಾಪನೆಗೊಂಡಿರುವುದು ವಿಶೇಷ. ಸ್ಕಂಧ ಪುರಾಣದ ಪ್ರಕಾರ ಅಗಸ್ತ್ಯ ಋಷಿಗಳು ಈ ಲಿಂಗಗಳನ್ನು ಇಲ್ಲಿ ಪ್ರತಿಷ್ಠಾಪಿಸಿದರೆಂದು ತಿಳಿದುಬರುತ್ತದೆ. ಇದಕ್ಕೆ ಪುಷ್ಠಿ ನೀಡುವಂತೆ ಪಂಚಲಿಂಗೇಶ್ವರ ದೇಗುಲದ ಗರ್ಭಗುಡಿಯಲ್ಲಿನ ಪಂಚಲಿಂಗಗಳ ಹಿಂಭಾಗದಲ್ಲಿ ಅಗಸ್ತ್ಯ ಮುನಿಗಳು ತಪೋಭಂಗಿಯಲ್ಲಿರುವ ಕಪ್ಪು ಶಿಲೆಯ ಸುಂದರ ಮೂರ್ತಿಯನ್ನು ಕಾಣಬಹುದು.



ಪಂಚಲಿಂಗೇಶ್ವರ ದೇವಸ್ಥಾನವು ವಿಶಾಲ ಆವರಣ ಹೊಂದಿದ್ದು, ದೇಗುಲದ ಸಂಕೀರ್ಣದಲ್ಲಿ ಬನಶಂಕರಿ, ಮೂರು ಲಿಂಗಗಳ ಗುಡಿ, ತಾರಕೇಶ್ವರ, ಮಲ್ಲಿಕಾರ್ಜುನ , ರೇಣುಕಾದೇವಿ, ಶ್ರೀ ರುದ್ರಮುನೀಶ್ವರ ಸ್ವಾಮಿ ಗದ್ದುಗೆ ಇತರ ಎಂಟು ಗುಡಿಗಳಿವೆ. ದೇಗುಲದ ಪ್ರಾಂಗಣದಲ್ಲಿ ಪುರಾತನ ಬಾವಿ ಹಾಗೂ ಜೋಡಿ ನಾಗದೇವರ ಮೂರ್ತಿಗಳನ್ನು ಕಾಣಬಹುದು. ಪಂಚಲಿಂಗೇಶ್ವರ ದೇವಸ್ಥಾನದ ವಿಶೇಷತೆಯೆಂದರೆ ಪರಶಿವನ ಐದು ರೂಪಗಳಾದ ಸದ್ಯೋಜಾತ, ವಾಮದೇವ, ಈಶಾನ, ತತ್ಪುರುಷ ಮತ್ತು ಅಘೋರ ಮೂರ್ತಿಗಳ ದರುಶನ ಒಂದೇ ಸ್ಥಳದಲ್ಲಿ ಪ್ರಾಪ್ತವಾಗುವುದು. ಇನ್ನು ಭೂಮಿ, ವಾಯು, ಅಗ್ನಿ, ಜಲ, ಆಕಾಶದಂತ ಪಂಚಭೂತಗಳು ಇಲ್ಲಿ ಪಂಚಲಿಂಗ ರೂಪದಲ್ಲಿ ಅವಿರ್ಭವಿಸಿವೆ.

ಈ ದೇಗುಲದ ಆವರಣದಲ್ಲಿ ಮೂರು ಲಿಂಗಗಳ ಗುಡಿಯಿದೆ. ಇದು ಹೊಯ್ಸಳರ ಕಾಲದ ತ್ರಿಕೂಟಾಚಲ ದೇವಾಲಯವಾಗಿದ್ದು, ಪ್ರತಿ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಕ್ರಿ.ಶ. 1223 ರ ಯಾದವ ಸಿಂಘಣನ ಶಾಸನದಲ್ಲಿ ಈ ದೇವಾಲಯದ ಉಲ್ಲೇಖವಿದೆ. ಈ ಶಾಸನದಲ್ಲಿ ಇಲ್ಲಿಯ ಸ್ಥಳಪುರಾಣವನ್ನು ವಿವರಿಸಲಾಗಿದೆ. ದೇವಾನುದೇವತೆಗಳ ಗುಡಿಗಳ ಸಮುಚ್ಚಯವೇ ಇರುವ ಈ ದೇವಾಲಯದ ಗೋಪುರದ ಒಂದು ಭಾಗದಲ್ಲಿ ಹೊಯ್ಸಳ ಅರಸರ ಲಾಂಛನವಾದ ಸಳನು ಹುಲಿಯನ್ನು ಕೊಲ್ಲುವ ರಾಜಲಾಂಛನವನ್ನು ಕಾಣಬಹುದು. ಇದರಿಂದಾಗಿ ಮುನವಳ್ಳಿಯು ಹೊಯ್ಸಳರು, ರಾಷ್ಟ್ರಕೂಟರು, ಸವದತ್ತಿಯ ರಟ್ಟರ ಆಳ್ವಿಕೆಗೆ ಒಳಪಟ್ಟ ಪ್ರಾಂತದ ಒಂದು ಮಹತ್ವದ ಪ್ರದೇಶವಾಗಿತ್ತೆಂದು ಗುರುತಿಸಬಹುದು.


ಇಲ್ಲಿನ ಸ್ಥಳಪುರಾಣದ ಪ್ರಕಾರ ಜಮದಗ್ನಿ,  ಅತ್ರಿ, ವಸಿಷ್ಠ ಮುನಿಗಳು ತಪಸ್ಸು ಮಾಡಿದ ಪವಿತ್ರ ಸ್ಥಳ ಇದಾಗಿದೆ. ಸ್ಕಂಧ ಪುರಾಣದ ಪ್ರಕಾರ ಅಗಸ್ತ್ಯ ಮುನಿಗಳ ಕನಸ್ಸಿನಲ್ಲಿ ಶಿವನು ಬಂದು "ವಸಿಷ್ಠಾದಿ ಮುನಿಗಳು ಮಲಪ್ರಭಾ ನದಿ ತೀರದಲ್ಲಿ ನೆಲೆಸಿದ್ದು, ನೀನು ಅಲ್ಲಿಗೆ ತೆರಳು. ಪಂಚಲಿಂಗೇಶ್ವರ ಸ್ವರೂಪದಲ್ಲಿ ನಾನು ದರುಶನ ನೀಡುವೆ." ಎಂದು ಆಜ್ಞಾಪಿಸಿದರು. ಶಿವನ ಆಜ್ಞೆಯಂತೆ ಮುನವಳ್ಳಿಯ ಮಲಪ್ರಭಾ ನದಿ ದಂಡೆಗೆ ತೆರಳಿದ ಅಗಸ್ತ್ಯರು ಅಲ್ಲಿ ತಪಸ್ಸನ್ನಾಚರಿಸಿ, ಪಂಚಲಿಂಗಗಳನ್ನು ಪ್ರತಿಷ್ಠಾಪಿಸಿದರು. ಅಂದಿನಿಂದ ಈ ಸ್ಥಳವು ಪವಿತ್ರ, ಪುಣ್ಯಕ್ಷೇತ್ರವಾಯಿತು.

ಯುಗಾದಿ ಪಾಡ್ಯದ ದಿನ ಮುಂಜಾನೆ ಸೂರ್ಯನ ಕಿರಣಗಳು ನೇರವಾಗಿ ಪಂಚಲಿಂಗಗಳ ಮೇಲೆ ಬೀಳುತ್ತದೆ. ಈ ದೇಗುಲದ ಆವರಣದಲ್ಲಿ ಇರುವ ನಗ್ನ ಸ್ವರೂಪದ ಭೈರವನ ಶಿಲ್ಪವು ಚಾಲುಕ್ಯರ ಕಾಲದ ಒಂದು ಶ್ರೇಷ್ಠ ಕಲಾಕೃತಿಯಾಗಿದೆ. ಪ್ರತಿ ಸೋಮವಾರ ವಿಶೇಷ ದಿನವಾಗಿದ್ದು, ಪ್ರತಿದಿನ ರುದ್ರಾಭಿಷೇಕ, ಅಮಾವಾಸ್ಯೆಯಂದು ವಿಶೇಷ ಪೂಜೆ ಪ್ರಸಾದ ವಿನಿಯೋಗವಿರುತ್ತದೆ. ಶಿವರಾತ್ರಿಯಂದು ಜಾತ್ರೆ, ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಕಾರ್ತಿಕೋತ್ಸವ, ಶ್ರಾವಣ ಮಾಸದ ಪೂಜೆ, ಪಲ್ಲಕ್ಕಿ ಉತ್ಸವ ಇಲ್ಲಿನ ವಿಶೇಷವಾಗಿದೆ. ಭಕ್ತರಿಗೆ ಉಳಿದುಕೊಳ್ಳಲು ಸುಸಜ್ಜಿತ ಕೊಠಡಿಗಳ ಸೌಲಭ್ಯವಿದೆ. ದಾಸೋಹ ಭವನ ಅಚ್ಚುಕಟ್ಟಾಗಿದೆ.  ದೇಗುಲದ ಟ್ರಸ್ಟ್ ನವರು ದೇವಾಲಯದ ಸ್ವಚ್ಛತೆ ಕಾಪಾಡಿಕೊಂಡು ಬಂದಿದ್ದು, ಜೀರ್ಣೋದ್ಧಾರ ಕಾರ್ಯದಲ್ಲಿ ದೇವಾಲಯದ ಶಿಲ್ಪಗಳು, ಕಂಬಗಳು ಒಟ್ಟಾರೆ ದೇಗುಲದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕಾಯ್ದುಕೊಂಡಿದ್ದಾರೆ.



ಉತ್ತರ ಹಾಗೂ ಪೂರ್ವ ದಿಕ್ಕಿನ ಮಹಾದ್ವಾರಗಳನ್ನು ಹೊಂದಿರುವ ಈ ದೇವಾಲಯ ಅನೇಕ ದೇವರ ಮೂರ್ತಿಗಳೊಂದಿಗೆ ಆಕರ್ಷಕ ದೀಪಸ್ತಂಭ ಹಾಗೂ ಶಿಲಾಶಾಸನಗಳನ್ನು ಒಡಲಲ್ಲಿರಿಸಿಕೊಂಡಿದೆ. ಮೂಳೆ ಹಾಗೂ ಸಂಧಿವಾತ ಸಂಬಂಧಿತ ರೋಗಿಗಳು ಈ ದೇವಾಲಯದ ಆವರಣದಲ್ಲಿರುವ ಚಳಕೇಶ್ವರ ಗುಡಿಗೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಪಂಚಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದರೆ ಜ್ಯೋತಿರ್ಲಿಂಗಗಳ ದರುಶನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ. ಶಾಸನಗಳಲ್ಲಿ ಮುನಿಪುರ, ಮುನೀಂದ್ರವಳ್ಳಿ, ಶಿಂಧೆ ಮುನೋಳಿ, ಮುನೋಳಿ ಎಂದು ಉಲ್ಲೇಖಿಸಲಾಗಿರುವ ಮುನವಳ್ಳಿಯಲ್ಲಿ ಕೊಲ್ಲಾಪುರದ ಶಿಂಧೆ ಸರದಾರ ಕಟ್ಟಿಸಿರುವ ವಿಶಾಲವಾದ ಕೋಟೆಯಿದೆ. ಕೋಟೆ ಪ್ರದೇಶದಲ್ಲಿ ಉಡಚಮ್ಮ, ಆಂಜನೇಯ, ದ್ಯಾಮವ್ವ, ದುರ್ಗಾದೇವಿ ಗುಡಿ ಇದೆ.

ತಾಲೂಕು ಕೇಂದ್ರ ಸವದತ್ತಿಯಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಮುನವಳ್ಳಿ ಗ್ರಾಮವು ಜಿಲ್ಲಾ ಕೇಂದ್ರ ಬೆಳಗಾವಿಯಿಂದ ಸುಮಾರು 80 ಕಿ.ಮೀ. ಅಂತರದಲ್ಲಿದೆ. ಬೆಂಗಳೂರಿನಿಂದ 485 ಕಿ.ಮೀ. ದೂರದಲ್ಲಿದೆ. ಮುನವಳ್ಳಿಗೆ ಬಂದಾಗ ಸಮೀಪದ ನವಿಲುತೀರ್ಥ ಹಾಗೂ ಶಿರಸಂಗಿಯ ಕಾಳಿಕಾ ಮಾತೆಯ ದೇಗುಲಕ್ಕೂ ಭೇಟಿ ನೀಡಬಹುದು.

ತಲುಪುವ ಬಗೆ:
ಮುನವಳ್ಳಿ ಗ್ರಾಮವು ತಾಲೂಕು ಕೇಂದ್ರ ಸವದತ್ತಿಯಿಂದ ಸವದತ್ತಿ-ಗೋಕಾಕ್ ರಸ್ತೆ ಮಾರ್ಗವಾಗಿ ಸುಮಾರು 14 ಕಿ.ಮೀ. ದೂರದಲ್ಲಿದೆ. ಸವದತ್ತಿ ಸರಕಾರಿ ಬಸ್ ನಿಲ್ದಾಣದಿಂದ ಅರ್ಧ ಕಿ.ಮೀ. ದೂರದಲ್ಲಿದೆ.

ಲೇಖಕರು: ಪ್ರಶಾಂತ್ ಕೆ. ಶಿಂಗೆ

Share on:

City Information

(Private)