ನೀವು ಕಟ್ಟುವ ಮನೆಯು ಪೂರ್ವಾಭಿಮುಖವಾಗಿದ್ದರೆ ಕೆಲವು ವಿಷಯಗಳನ್ನು ನೀವು ಪಾಲಿಸಬೇಕಾಗುತ್ತದೆ. ನಿವೇಶನವು ಪೂರ್ವಾಭಿಮುಖವಾಗಿದ್ದರೆ ಮುಖ್ಯ ದ್ವಾರವನ್ನಂತೂ ಪೂರ್ವದ ಕಡೆಗೆ ಮಾಡಿರುತ್ತೀರಿ, ಆಗ ಈಶಾನ್ಯ ದಿಕ್ಕಿನ ಜಾಗದಲ್ಲಿ ಕೋಣೆ ಅಥವಾ ಮತ್ತೇನನ್ನೂ ಕಟ್ಟದೆ ಖಾಲಿ ಬಿಡಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ಮೂಲೆಯಲ್ಲಿ ಏನನ್ನೂ ಕಟ್ಟುವಂತಿಲ್ಲ. ಹೀಗಿರುವಾಗ ಜಾಗ ವೇಸ್ಟ್ ಆಗುತ್ತದೆ ಎಂದು ಚಿಂತಿಸಬೇಡಿ, ಆ ಜಾಗದಲ್ಲಿ ಬಾಲ್ಕನಿ ಅಥವಾ ಸಿಟೌಟ್ ರೀತಿ ಮಾಡಿಸಿ. ಆಗ ಖಾಲಿ ಬಿಟ್ಟಂತೆಯೂ ಆಗುತ್ತದೆ ಹಾಗು ನಿಮ್ಮ ಉಪಯೋಗಕ್ಕೂ ಬರುತ್ತದೆ. ಮತ್ತೊಂದು ವಿಚಾರವೇನೆಂದರೆ ಬಾಲ್ಕನಿಗೆ ಹೋಗಲು ಒಂದು ಬಾಗಿಲು ಇರುವುದರಿಂದ ಪೂರ್ವಾಭಿಮುಖದ ಮುಖ್ಯ ದ್ವಾರದೊಂದಿಗೆ ಪೂರ್ವ ದಿಕ್ಕಿನೆಡೆಗೆ ಮತ್ತೊಂದು ಬಾಗಿಲು ಮಾಡಿಸಿದಂತಾಗುತ್ತದೆ. ವಾಸ್ತು ಪ್ರಕಾರ ಇದರಿಂದ ಅನೇಕ ರೀತಿಯ ಶುಭ ಫಲಗಳು ದೊರೆಯುತ್ತವೆ.