- ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು.
- ಬೇರೆಯವರು ಮಾತನಾಡುವಾಗ ಅರ್ಧಕ್ಕೆ ಮಾತನಾಡಬಾರದು.
- ಬೇರೆಯವರ ಮಾತನ್ನು ಕೇಳುವ ಸಹನೆ ಇರಬೇಕು.
- ನಿಮ್ಮ ಮಾತಿನ ಅಗತ್ಯ ಮತ್ತು ಅನಿವಾರ್ಯ ಇದ್ದರೆ ಮಾತ್ರ ಮಾತನಾಡಬೇಕು. ಕೊನೆ ಪಕ್ಷ ನಿಮ್ಮ ಮಾತಿಗೆ ಗೌರವ ಮನ್ನಣೆಗಳಾದರೂ ಇರಬೇಕು.
- ವ್ಯಕ್ತಿಗತ ಟೀಕೆ, ನಿಂದನೆ ಸಲ್ಲದು.
- ಆಡುವ ಮಾತು ಬೇರೆಯವರನ್ನು ನೋಯಿಸದಂತೆ ಇರಬೇಕು.
- ಮಾತನಾಡುವಾಗ ಸಮಯಪ್ರಜ್ಞೆ ಅವಶ್ಯಕ.
- ಸಂದರ್ಭಕ್ಕೆ ತಕ್ಕಂತೆ ಮಾತನಾಡಬೇಕು. ಅನಾವಶ್ಯಕ ಮಾತುಗಳು ಬೇಡ.
- ಮಾತು ಸ್ಪಷ್ಟವಾಗಿರಬೇಕು.
- ಮಾತನಾಡುವಾಗ ಉಳಿದವರ ಪ್ರತಿಕ್ರಿಯೆ ಹೇಗಿರುತ್ತದೆಂದು ಗಮನಿಸಬೇಕು.
- ಮುಖ ಗಂಟಿಕ್ಕಿ ಮಾತನಾಡಬಾರದು.
- ಮಾತು ವಾದಮಾಡುವಂತಿರಬಾರದು. ಮಾತಿನಲ್ಲಿ ಅಹಂ ಇರಬಾರದು.
- ಮಾತನಾಡುವಾಗ ಸಂಕುಚಿತ ಮನೋಬಾವ ಬಿಟ್ಟು ಹೃದಯ ಶ್ರೀಮಂತಿಕೆ ತೋರಿಸಬೇಕು.
- ಮಾತು ತಿಳಿಹಾಸ್ಯದಿಂದ ಕೂಡಿದ್ದು ಸ್ನೇಹ ಪೂರ್ವಕವಾಗಿರಬೇಕು.
- ಆಡುವ ಪ್ರತಿ ಮಾತಿನಲ್ಲಿ ಆತ್ಮವಿಶ್ವಾಸವಿರಬೇಕು. ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಎಂತಹವರು ಸ್ನೇಹ ಬೇಕಾದರೂ ಸಂಪಾದಿಸಬಹುದು.ಅಲ್ಲದೆ ಒಳ್ಳೆಯ ಮಾತುಗಾರರೂ ಆಗಬಹುದು.