ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಅರ್ಧ ಚಮಚ ಕಾಳು ಮೆಣಸು, ಅರ್ಧ ಚಮಚ ಶುದ್ಧ ಅರಿಶಿನದ ಪುಡಿ ಮತ್ತು ಕಲ್ಲು ಸಕ್ಕರೆಯನ್ನು ಪುಡಿ ಮಾಡಿ ಸೇರಿಸಿ ಮಕ್ಕಳಿಗೆ ಕುಡಿಯಲು ಕೊಡಿ. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅನೇಕ ರೋಗಗಳ ವಿರುದ್ಧ ಹೋರಾಡಲು ಕಾಳು ಮೆಣಸು ಶರೀರಕ್ಕೆ ಶಕ್ತಿಯನ್ನು ಕೊಡುತ್ತದೆ. ಅರಿಶಿನವು ದೇಹದಲ್ಲಿ ರೋಗ ಪ್ರತಿಬಂಧಕದಂತೆ ಕೆಲಸ ಮಾಡುತ್ತದೆ. ವಿಶೇಷವಾಗಿ ಶೀತ ವಾತಾವರಣವಿರುವ ಮಳೆಗಾಲ ಮತ್ತು ಚಳಿಗಾಲದಲ್ಲಿ ಇದು ರಕ್ಷಣೆ ನೀಡುತ್ತದೆ. ಕೇವಲ ಮಕ್ಕಳಿಗಷ್ಟೇ ಅಲ್ಲದೇ ದೊಡ್ಡವರಿಗೂ ಇದು ಪ್ರಯೋಜನಕಾರಿ.