ಮನೆಯ ವಿನ್ಯಾಸದ ಬಗ್ಗೆ ವಿಶೇಷ ಕಾಳಜಿ ಹೊಂದಿರುವವರು ಅಲಂಕಾರಕ್ಕೆ ಹೆಚ್ಚು ಒತ್ತು ನೀಡುವವರು ಕಡಿಮೆ ದರದಲ್ಲಿ ತಮ್ಮಿಷ್ಟದ ವಿನ್ಯಾಸದಿಂದ ಗೋಡೆಗಳನ್ನು ಅಲಂಕರಿಸಬಹುದು. ಮನೆಕಟ್ಟಿದ ನಂತರ ಗೋಡೆಗಳಿಗೆ ಯಾವ ಬಣ್ಣ ಬಳಿಸಬೇಕು, ಗೋಡೆ ಅಂದಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಕನಸಿನ ಮನೆಯ ಗೋಡೆಗಳ ಅಂದ ಹೆಚ್ಚಿಸಲು ಆಕರ್ಷಕ ‘3ಡಿ ವಾಲ್ ಪೇಪರ್’
3ಡಿ ಸಿನಿಮಾ ಮಾದರಿಯಲ್ಲೇ 3ಡಿ ವಾಲ್ ಪೇಪರ್. ಗೋಡೆಗೆ ಅಂಟಿಸಿದಾಗ ತ್ರಿಕೋನಗಳಲ್ಲಿ ಆ ಚಿತ್ರಗಳು ಗೋಚರಿಸುತ್ತವೆ. ಮೊದಲು ಚಿತ್ರಮಂದಿರಗಳು, ಕಚೇರಿ, ಕೆಫೆ, ಹೋಟೆಲ್, ಆಸ್ಪತ್ರೆಗಳಲ್ಲಿ ಬಳಕೆಯಾಗುತ್ತಿತ್ತು. ಅದರೆ ಈಗ ಮನೆಯ ಒಳಾಂಗಣ ವಿನ್ಯಾಸದಲ್ಲಿ ವಾಲ್ ಪೇಪರ್ ಮಹತ್ವದ ಪಾತ್ರ ವಹಿಸಿದೆ. 3ಡಿ ಬಂದ ನಂತರವಂತೂ ಬೇಡಿಕೆ ಹೆಚ್ಚಾಗಿದೆ.
ಆಕರ್ಷಕ ಚಿತ್ರಗಳು
ಜನರು ಅಭಿರುಚಿ, ಆಸಕ್ತಿಗೆ ಅನುಗುಣವಾಗಿ ಇಂದಿನ ಡಿಜಿಟಲ್ ಯುಗದಲ್ಲಿ ಆಕರ್ಷಕ ಚಿತ್ರಗಳ 3ಡಿ ವಾಲ್ ಪೇಪರ್ಗಳು ದೊರೆಯುತ್ತದೆ. ಹಾಲ್, ಬೆಡ್ ರೂಮ್, ಬಾತ್ ರೂಮ್ ಸೇರಿ ಮನೆಯ ಎಲ್ಲ ಕೊಠಡಿಗಳಿಗೂ, ಕಟ್ಟಡಗಳ ಒಳಗೋಡೆಗಳಿಗೆ ಅನುಗುಣವಾಗಿ ಪರಿಸರ, ಪ್ರಾಣಿ, ಪಕ್ಷಿಗಳು, ಗೊಂಬೆಗಳು, ಮಕ್ಕಳ ಚಿತ್ರಗಳು ಹೀಗೆ ಹಲವು ಬಗೆಯ ಚಿತ್ರಗಳಿರುವ ವಾಲ್ ಪೇಪರ್ ಲಭ್ಯವಿದೆ.
ನೀರಿನಿಂದ ತೊಳೆಯಬಹುದು :
ಇಂದು ಗೋಡೆಗಳ ಅಂದ ಹೆಚ್ಚಿಸಲು ಮಾರುಕಟ್ಟೆಗೆ ತರಹೇವಾರಿ ಬಣ್ಣಗಳು ಬಂದಿದ್ದು, ಗೋಡೆಗಳು ಕೊಳೆಯಾದರೆ ಪದೇ ಪದೇ ಬಣ್ಣ ಬಳಿಸಬೇಕು. ಆದರೆ ವಾಲ್ ಪೇಪರ್ ದರ ಕಡಿಮೆ ಮತ್ತು ಕೊಳೆಯಾದರೆ ನೀರಿನಿಂದ ತೊಳೆದುಕೊಳ್ಳಬಹುದು ಇದರ ಜತೆಗೆ ತಮಗೆ ಬೇಕಾದ ವಿನ್ಯಾಸದಿಂದ ಗೋಡೆಯ ಅಂದ ಹೆಚ್ಚಿಸಬಹುದು.
ವಾಲ್ ಪೇಪರ್ ಗಳನ್ನು ಗೋಡೆಗೆ ಅಂಟಿಸುವುದೂ ಸುಲಭ, ಬೇಡವೆನಿಸಿದಾಗ ತೆಗೆಯುವುದೂ ಸುಲಭ. ಒಂದೇ ಮಾದರಿ ವಿನ್ಯಾಸ ಬೇಡ ಎನ್ನಿಸಿದಾಗ ಬೇರೆ ವಾಲ್ ಪೇಪರ್ ಅನ್ನು ಸುಲಭವಾಗಿ ಅಂಟಿಸಿಕೊಳ್ಳಬಹುದು. ಕಡಿಮೆ ದರದ ವಾಲ್ ಪೇಪರ್ ಬಳಸುವುದರಿಂದ ಆಗಾಗ್ಗೆ ಮಾದರಿಗಳನ್ನು ಬದಲಾಯಿಸಬಹುದು
ಮಾರುಕಟ್ಟೆಯಲ್ಲಿ ಹಲವಾರು ವಾಲ್ ಪೇಪರ್ ಕಂಪನಿಗಳಿವೆ. ದೀರ್ಘಕಾಲ ಬಾಳಿಕೆ ಬರುವ ವಾಲ್ ಪೇಪರ್ಗಳು ಲಭ್ಯ. ಇವು ಗೋಡೆಯನ್ನು ಗೀರುಗಳು ಬೀಳದಂತೆ, ಕಲೆಗಳು ಉಳಿದಂತೆ ತೊಳೆಯಬಹುದಾದ ವಾಲ್ ಪೇಪರ್ಗಳು. 3ಡಿ ಹೊದಿಕೆಯು ಗೋಡೆಯ ಅಂದ ಹೆಚ್ಚಿಸುವುದರೊಂದಿಗೆ ವಿಶೇಷ ಎಫೆಕ್ಟ್ ಸಹ ನೀಡುತ್ತವೆ.