ಧೂಮಪಾನದಿಂದ ಆಗುವ ಹಾನಿಗಳು :
1. ರಕ್ತದ ಆಮ್ಲಜನಕ ಧಾರಣ ಶಕ್ತಿಯನ್ನು ಕಡಿಮೆಗೊಳಿಸುತ್ತದೆ.
2. ಹೃದಯದ ರಕ್ತನಾಳಗಳಲ್ಲಿ ಅಡಚಣೆಯನ್ನುಂಟುಮಾಡುತ್ತದೆ.
ಸಲಹೆ : ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು.
ರಕ್ತದ ಏರೊತ್ತಡದಿಂದ ಆಗುವ ತೊಂದರೆಗಳು :
1.ರಕ್ತನಾಳಗಳಲ್ಲಿರುವ ಹೆಚ್ಚಿನ ಒತ್ತಡವನ್ನು ಮೀರಿ ಹೃದಯವು ಕೆಲಸ ಮಾಡಬೇಕಾಗುವುದರಿಂದ ಅದು ಬೇಗ ನಿತ್ರಾಣಗೊಳ್ಳುತ್ತದೆ.
2. ಹೃದಯದ ರಕ್ತನಾಳಗಳಲ್ಲಿ ಅಡಚಣೆಯನ್ನೂ ಉಂಟುಮಾಡುತ್ತದೆ.
ಸಲಹೆ : ಧೂಮಪಾನ ಬಿಟ್ಟು ಉಪ್ಪು ಜಿಡ್ಡು ಕಡಿಮೆಯಿರುವ ಸೌಮ್ಯ ಆಹಾರವನ್ನು ಸೇವಿಸಬೇಕು.
ವ್ಯಾಯಾಮ ರಹಿತ ಜಡ ಜೀವನದಿಂದ ಆಗುವ ಸಮಸ್ಯೆ :
1. ಹೃದಯದ ರೋಗಗಳನ್ನು ಹುಟ್ಟುಹಾಕುತ್ತದೆ.
ಸಲಹೆ : ಪ್ರತಿನಿತ್ಯ ಯಾವುದಾದರೂ ಸಣ್ಣ ವ್ಯಾಯಾಮವನ್ನು ಆದರೂ ಮಾಡಬೇಕು ಅಥವಾ ವಾಕಿಂಗ್ ಮಾಡಿದರೂ ತೊಂದರೆಯಲ್ಲ
ಬೊಜ್ಜಿನಿಂದ ಆಗುವ ಆಗುವ ತೊಂದರೆಗಳು :
1. ಬೊಜ್ಜಿನ ಕಣಗಳಿಗೂ ಹೃದಯವು ರಕ್ತವನ್ನು ಪೂರೈಸಬೇಕಾಗುತ್ತದೆ. ಹೃದಯದ ಸೋಲು ಉಂಟಾಗುತ್ತದೆ.
ಸಲಹೆ : ಜಿಡ್ದು ಸಿಹಿತಿಂಡಿಗಳನ್ನು ತ್ಯಜಿಸಿ. ಪ್ರತಿನಿತ್ಯ 2 ಕಿ.ಮೀ. ನಡೆಯಬೇಕು.
ಆತಂಕ ಭರಿತ ಜೀವನದಿಂದ ಆಗುವ ತೊಂದರೆಗಳು :
1. ಹೃದಯ ಬಡಿತದ ವೇಗ ಮತ್ತು ಬಿ.ಪಿ. ಏರುತ್ತದೆ.
ಸಲಹೆ : ಸಮಾಧಾನಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಶಾಂತ ರೀತಿಯಿಂದ ವರ್ತಿಸುವುದನ್ನು ರೂಢಿಮಾಡಿಕೊಳ್ಳಬೇಕು.
ಸಿಹಿ ರಕ್ತ ರೋಗದಿಂದ ಆಗುವ ಸಮಸ್ಯೆ :
1.ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸಿ ರಕ್ತನಾಳಗಳನ್ನು ಹಾಳುಗೆಡವುತ್ತದೆ.
ಸಲಹೆ : ಔಷಧಿ, ವ್ಯಾಯಾಮದ ಮೂಲಕ ವ್ಯಾಧಿಯನ್ನು ಹತೋಟಿಗೆ ತರಬೇಕು.