ಮಾಡಲು ಬೇಕಾಗುವ ಸಾಮಗ್ರಿಗಳು :
ಎಣ್ಣೆ : 2-3 ಚಮಚ (ಒಗ್ಗರಣೆಗೆ)
ಜೀರಿಗೆ : ಅರ್ಧ ಚಮಚ
ಸಾಸಿವೆ : ಅರ್ಧ ಚಮಚ
ಅರಿಶಿಣ ಪುಡಿ: ಚಿಟಿಕೆ
ಕರಿಬೇವು: ಒಂದು ಚಮಚ
ಒಣಮೆಣಸು : ಒಂದು ಚಮಚ
ಮೆಂತೆ: ಒಂದು ಚಮಚ
ಬೆಲ್ಲ : ಸ್ವಲ್ಪ
ಉಪ್ಪು : ರುಚಿಗೆ ತಕ್ಕಷ್ಟು
ಹುಣಸೇ ರಸ : 3 ಚಮಚ
ತೆಂಗಿನ ಕಾಯಿ ತುರಿ: ಅರ್ಧ ಕಪ್
ಸಾಂಬಾರ್ ಪುಡಿ : ಒಂದು ಚಮಚ
ಮೆಣಸಿನ ಪುಡಿ: ಒಂದು ಚಮಚ
ಮಾಡುವ ವಿಧಾನ ಹೇಗೆ ?
ಒಗ್ಗರಣೆಗೆ ಎಲ್ಲಾ ಸಾಮಗ್ರಿಗಳನ್ನು ಹಾಕಿಕೊಂಡು ಸಾಸಿವೆ ಸಿಡಿಸಿದ ನಂತರ ಮೆಂತೆ ಹಾಕಿ ಘಂ ಎನ್ನುವವರೆಗೆ ಬಿಡಿ. ನಂತರ ನೀರು ಹಾಕಿ, ಬೆಲ್ಲ, ಉಪ್ಪು, ಹುಣಿಸೇ ರಸ ಸೇರಿಸಿ ಕುದಿಸಿ. ಮೆಂತೆ ಕಾಳು ಬೆಂದ ನಂತರ ಕಾಯಿ ತುರಿ, ಸಾಂಬಾರ್ ಪುಡಿ, ಮೆಣಸಿನ ಪುಡಿ ನುಣ್ಣನೆ ರುಬ್ಬಿ ಸೇರಿಸಿ ಚೆನ್ನಾಗಿ ಕುದಿಸಿ ಇಳಿಸಿ ನಂತರ ಮೆಂತೆ ಕಾಳು ಸಾರು ಸವಿಯಲು ರೆಡಿ.