ನಮ್ಮ ದೇಹದಲ್ಲಿ ಎರಡು ರೀತಿಯ ರಕ್ತನಾಳಗಳಿವೆ. ಒಂದು ಹೃದಯದಿಂದ ದೇಹದ ಎಲ್ಲ ಭಾಗಗಳಿಗೆ ಶುದ್ಧ ರಕ್ತವನ್ನು ಸಾಗಿಸುವ ರಕ್ತನಾಳಗಳು ಮತ್ತು ಎರಡನೇಯದು ಇದಕ್ಕೆ ವಿರುದ್ಧವಾಗಿ ದೇಹದ ವಿವಿಧ ಭಾಗಗಳಿಂದ ಅಶುದ್ಧ ರಕ್ತವನ್ನು ಹೃದಯಕ್ಕೆ ತರುವ ಮಲಿನ ರಕ್ತನಾಳಗಳು. ಚರ್ಮಕ್ಕೆ ಅಂಟಿಕೊಂಡಂತೆ ಕಾಣುವ ಮಲಿನಗಳನ್ನು ಬಾಹ್ಯ ಮಲಿನ ರಕ್ತನಾಳಗಳೆಂದೂ, ಇನ್ನೂ ದೇಹದ ಕೊಂಚ ಆಳದಲ್ಲಿರುವ ಮಲಿನ ರಕ್ತನಾಳಗಳನ್ನು ಆಳದ ಮಲಿನ ರಕ್ತನಾಳಗಳೆಂದೂ ಕರೆಯುತ್ತಾರೆ.
ಪಾದ, ಕಾಲು, ತೊಡೆ ಭಾಗಗಳಿಂದ ಅಶುದ್ಧ ರಕ್ತವನ್ನು ಹೃದಯಕ್ಕೆ ಸಾಗಿಸುವ ಮಲಿನ ರಕ್ತನಾಳಗಳು ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸಬೇಕಾದ್ದರಿಂದ ಹೆಚ್ಚು ಕಾರ್ಯ ಜವಾಬ್ದಾರಿ ಹೊಂದಿರುತ್ತವೆ. ಅಲ್ಲದೆ ಈ ನಾಳಗಳಲ್ಲಿನ ಬಾಗಿಲುಗಳು ರಕ್ತ ಕಾಲುಗಳ ಕಡೆಗೆ ಜಾರಿಹೋಗದಂತೆ ತಡೆಯಲು ಹೆಚ್ಚು ಬಲಿಷ್ಠವಾಗಿರಬೇಕಾಗುತ್ತದೆ. ಹೀಗೆ ಹೆಚ್ಚಿನ ಕಾರ್ಯದ ಜವಾಬ್ದಾರಿ ಇರಬೇಕಾದ ಬಾಗಿಲುಗಳು ಕೆಲವು ಕಾರಣಗಳಿಂದ ತಮ್ಮ ರಕ್ತ ಕಳೆದುಕೊಂಡಾಗ, ಹೃದಯದ ಕಡೆಗೆ ಹೋಗಬೇಕಾದ ರಕ್ತ ವಿರುದ್ಧ ದಿಕ್ಕಿನಲ್ಲಿ ಜಾರುತ್ತದೆ. ಹೀಗಾದಾಗ ಕಾಲುಗಳಲ್ಲಿನ ಮಲಿನ ರಕ್ತನಾಳಗಳು ವಕ್ರವಾಗಿ, ಊದಿಕೊಂಡಂತೆ ಕಾಣಿಸುತ್ತವೆ. ಈ ಸ್ಥಿತಿಗೆ ‘ವೆರಿಕೋಸ್ ವೇನ್’ ಎಂದು ಕರೆಯುತ್ತಾರೆ.
ಚಿಕಿತ್ಸೆ ಹೇಗೆ :
ಬೆಳ್ಳುಯ ಆರು ದಳ ಜಜ್ಜಿ, ಒಂದು ಕಿತ್ತಳೆ ಹಣ್ಣಿನ ರಸ ಹಿಂಡಿ 2 ಚಮಚ ಆಲೀವ್ ಎಣ್ಣೆ ಹಾಕಿ ಮಿಕ್ಸ್ ಮಾಡಿ 12 ಗಂಟೆಗಳ ಕಾಲ ಇಟ್ಟು ಮತ್ತೊಮ್ಮೆ ಮಿಕ್ಸ್ ಮಾಡಿ ಹತ್ತಿಯಿಂದ ಒತ್ತಡ ಹಾಕದೆ ಹಚ್ಚಬೇಕು. ಎರಡು ದಿನಕ್ಕೆ ಒಮ್ಮೆ ಹೊಸದಾಗಿ ತಯಾರಿಸಿಕೊಂಡು ಗುಣ ಆಗುವವರೆಗೆ ಹಚ್ಚಬೇಕು. ರಾತ್ರಿ ಮಲಗುವಾಗ ಊಟ ಆದ ಅರ್ಧ ಗಂಟೆ ನಂತರ ಪಪ್ಪಾಯ ಹಣ್ಣು ತಿನ್ನಬೇಕು. ಒಂದು ಲೋಟ ನೀರಿಗೆ 20 ಒಂದೆಲಗ (ಬ್ರಾಹ್ಮೀ), ಒಂದು ಏಲಕ್ಕಿ ಸಿಪ್ಪೆ ಸಮೇತ ಜಜ್ಜಿ ಹಾಕಿ ಮತ್ತು ಅರ್ಧ ಚಮಚ ಜ್ಯೇಷ್ಠ ಮಧು ಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಅರ್ಧ ಲೋಟ ಆಗುವವರೆಗೆ ಕುದಿಸಿ ತಣ್ಣಗಾದ ಮೇಲೆ ಅರ್ಧ ಚಮಚ ಜೇನುತುಪ್ಪ ಸೇರಿಸಿ ತಕ್ಷಣ ಕುಡಿಯಬೇಕು. ಪ್ರತಿದಿನ ಹೊಸದಾಗಿ ಮಾಡಿ 15 ದಿನ ಸೇವಿಸಿದರೆ ಪರಿಹಾರವಾಗುತ್ತದೆ.