ಪ್ರತಿಯೊಬ್ಬರೂ ಪ್ರತಿನಿತ್ಯ ಬೆಳಿಗ್ಗೆ ಅಥವಾ ಸಂಜೆ ಸ್ವಲ್ಪ ಕಾಲ ನಡಿಗೆ ಮಾಡುವುದನ್ನು ರೂಢಿಸಿಕೊಂಡರೆ ಅರೋಗ್ಯ ಬಹಳಷ್ಟು ಸುಧಾರಣೆಯಾಗಬಹುದು. ವಾಕಿಂಗ್ ಅಥವಾ ನಡಿಗೆ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯವನ್ನು ಕೊಡುವುದು.
ವಾಕಿಂಗ್ ನಿಂದ ಉತ್ತಮ ವ್ಯಾಯಾಮ :
ಯಾವುದೇ ರೀತಿಯ ವ್ಯಾಯಾಮವಾಗಲಿ ಅದು ಕ್ಯಾಲೋರಿಗಳನ್ನು ದಹಿಸುತ್ತದೆ, ರಕ್ತ ಪರಿಚಲನೆಯನ್ನು ಉದ್ದೀಪನಗೊಳಿಸುತ್ತದೆ ಹಾಗೂ ಕೊಲೆಸ್ಟೆರಾಲ್ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ನಿಮಗೆ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ, ದಿನ ನಿತ್ಯ ವಾಕಿಂಗ್ ಮಾಡಿ. ಅದು ನಿಮಗೆ ಉತ್ತಮ ವ್ಯಾಯಾಮದ ಜೊತೆಗೆ ಅರೋಗ್ಯವೂ ಸಿಗುವುದು.
ಡಯಾಬಿಟಸ್ ನಿಯಂತ್ರಣ :
ಪ್ರತಿ ವಾರ 150 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ನಿಮ್ಮ ದೇಹದ ತೂಕದಲ್ಲಿ ಡಯಾಬಿಟಿಸ್ ಕಡಿಮೆ ಮಾಡಬಹುದು.
ಮೆದುಳಿಂದ ಉತ್ತಮ ಕಾರ್ಯ :
ವಾರದಲ್ಲಿ ಕನಿಷ್ಟ 15 ಗಂಟೆಯಷ್ಟು ವಾಕಿಂಗ್ ಮಾಡುವ ಮಹಿಳೆಯರಲ್ಲಿ ಮೆದುಳಿನ ಅರಿವಿನ ಕಾರ್ಯ ಉತ್ತಮವಾಗಿ ಕಾರ್ಯ ನಿರ್ವಹಿಸುವುದನ್ನು ಸಂಶೋಧಕರು ಕ೦ಡುಕೊಂಡಿದ್ದಾರೆ.
ಖಿನ್ನತೆ ನಿರ್ಮೂಲನೆಗೆ ಸಹಕಾರಿ :
ವಾರದಲ್ಲಿ ಮೂರರಿಂದ ಐದು ಬಾರಿಯಂತೆ 12 ವಾರಗಳ ಕಾಲ 30 ನಿಮಿಷಗಳು ವಾಕಿಂಗ್ ಮಾಡಿದರೆ ಖಿನ್ನತೆಯ ಚಿಹ್ನೆಗಳು ಶೇ.47 ರಷ್ಟು ಕಡಿಮೆಯಾಗುತ್ತದೆ.
ಫಿಟ್‌ನೆಸ್ ಸುಧಾರಣೆ :
ವಾರದಲ್ಲಿ ಮೂರರಿಂದ ಐದು ಬಾರಿಯಂತೆ 12 ವಾರಗಳ ಕಾಲ 30 ನಿಮಿಷಗಳು ವಾಕಿಂಗ್ ಮಾಡಿದರೆ ಕಾರ್ಡಿಯೋರೆಸ್ಪಿರೇಟರಿ ಫಿಟ್‌ನೆಸ್‌ನ್ನು ಹೆಚ್ಚಿಸುತ್ತದೆ.
ಬೊಜ್ಜು ನಿವಾರಣೆ :
ಲಘುವಾದ ಬಿರುಸು ನಡಿಗೆ (ಬಿಸ್ಕ್ ವಾಕಿಂಗ್) ಬೊಜ್ಜು ನಿವಾರಣೆಗೆ ಸಹಕಾರಿ ಎಂಬುದು ಧೃಡ ಪಟ್ಟಿದೆ. ಪ್ರತಿ ದಿನ ಮೂರು ಬಾರಿ 10 ನಿಮಿಷಗಳ ಬಿಸ್ಕ್ ವಾಕಿಂಗ್ ದೇಹದ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ.