ಬೇಕಾಗುವ ಸಾಮಗ್ರಿಗಳು :
ಓಟ್ಸ್ - 1 ಕಪ್
ಹೆಸರು ಬೇಳೆ - 1/2 ಕಪ್
ಬೆಲ್ಲ - 3/4 ಕಪ್
ಹಾಲು - 1 ಕಪ್
ಏಲಕ್ಕಿ ಪುಡಿ ಸ್ವಲ್ಪ
ಒಣ ಕೊಬ್ಬರಿ - 1/2 ಕಪ್
ತುಪ್ಪ - 4 ಚಮಚ
ದ್ರಾಕ್ಷಿ - 10
ಗೋಡಂಬಿ - 10
ಮಾಡುವ ವಿಧಾನ :
ಬಾಣಲೆಗೆ ಹೆಸರು ಬೇಳೆಯನ್ನು ಹುರಿದುಕೊಂಡು ನೀರಿನಲ್ಲಿ ಬೇಯಿಸಿಟ್ಟು ಕೊಳ್ಳಿ ನಂತರ ಓಟ್ಸ್‌ಅನ್ನು ಸಣ್ಣ ಹುರಿಯಲ್ಲಿ ಹುರಿದುಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ಕಾಯಿಸಿದ ನಂತರ ದ್ರಾಕ್ಷಿ, ಗೋಡಂಬಿ ಹಾಕಿ ಕೆಂಪಾಗುವ ಹಾಗೆ ಹುರಿದುಕೊಳ್ಳಿ ನಂತರ ಇದಕ್ಕೆ ಹಾಲನ್ನು ಹಾಕಿ ಕುದಿಯಲು ಇಡಿ. ಇದಕ್ಕೆ ಓಟ್ಸ್‌ಅನ್ನು ಹಾಕಿ ಬೇಯಿಸಿಕೊಂಡು ನಂತರ ಬೆಂದ ಹೆಸರು ಬೇಳೆಯನ್ನು ಸೇರಿಸಿ. ಇದಾದ ನಂತರ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಕುದಿ ಕುದಿಸಿ, ಗಟ್ಟಿಯಾಗಿದ್ದರೆ ಸ್ವಲ್ಪ ಹಾಲನ್ನು ಸೇರಿಸಬಹುದು. ಒಣಕೊಬ್ಬರಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಬಾಣಲೆಯನ್ನು ಒಲೆಯಿಂದ ಕೆಳಗಿಳಿಸಿ, ನಂತರ ದ್ರಾಕ್ಷಿ, ಗೋಡಂಬಿ ಹಾಗೂ ಕೊಬ್ಬರಿ ತುರಿಯಿಂದ ಅಲಂಕರಿಸಿ ಮನೆಯವರೆಲ್ಲರಿಗೂ ಸವಿಯಲು ಬಿಸಿ ಬಿಸಿ ಓಟ್ಸ್ ಸಿಹಿ ಪೊಂಗಲ್ ನೀಡಿ.