ಹೊಟ್ಟೆ ತುಂಬಾ ಊಟ ಮಾಡಿಕೊಂಡೇ ಮೈ ತೂಕ ಇಳಿಸಿಕೊಂಡು ಸ್ಲಿಮ್ಮಾಗಿ ಕಾಣುವ ಸಿಂಪಲ್ ಉಪಾಯ ಇಲ್ಲಿದೆ.
ಅದುವೇ “ಕ್ಯಾರೆಟ್ ಥೆರಪಿ'. ಇದನ್ನು ಪ್ರತಿ ದಿನ ರೂಢಿಸಿಕೊಂಡರೆ ಆದಷ್ಟು ಬೇಗನೆ ತೂಕವನ್ನು ಇಳಿಸಿಕೊಳ್ಳಬಹುದು.
- ಪೋಷಕಾಂಶಯುಕ್ತ ತರಕಾರಿಯೆಂದರೆ ಕ್ಯಾರೆಟ್, ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಸೂಪ್, ಸಲಾಡ್ ಮತ್ತು ಜ್ಯೂಸ್ ರೂಪದಲ್ಲಿಯೂ ಸೇವಿಸಬಹುದಾಗಿದೆ.
- “ಕ್ಯಾರೇಟ್‌ನಲ್ಲಿ ಶೇ. 10ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಇದ್ದು ಶಕ್ತಿವರ್ಧನೆಗೆ" ಸಹಕಾರಿಯಾಗಿದೆ.
ಅಲ್ಲದೇ ಇದು ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಹಾಗೂ ಆಸ್ಕಾಬಿಕ್ ಆಮ್ಲವನ್ನು ಹೊಂದಿರುವುದರಿಂದ ಹಲವು ಆರೋಗ್ಯಕಾರಿ ಪ್ರಯೋಜನವನ್ನು ಹೊಂದಿದೆ. - ಕ್ಯಾರೇಟಿನಲ್ಲಿ ಕೆರೋಟಿನ್ ಅಂಶವಿದ್ದು. ಇದು ದೇಹವನ್ನು. ಶುದ್ಧವಾಗಿರಿಸಲು ಸಹಾಯಕವಾಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.
- ನಿಯಮಿತವಾದ ಕ್ಯಾರೆಟ್ ಸೇವನೆಯು ಹೃದಯ ಸಂಬಂಧಿ ಸಮಸ್ಯೆಗಳಿಗೆ ಸೂಕ್ತ ಮದ್ದಾಗಿದೆ.
- ಮಂದದೃಷ್ಟಿಯುಳ್ಳವರಿಗೆ ಕ್ಯಾರೆಟ್ ದಿವ್ಯೌಷಧವಾಗಿದೆ. ಕ್ಯಾರೆಟ್‌ನಲ್ಲಿರುವ ಅಯೋಡಿನ್ ಹಾಗೂ ನಾರಿನಂಶವು ತೂಕ ಇಳಿಸಲು ಸಹಕಾರಿಯಾಗಿದೆ.
- ಮಧ್ಯಾಹ್ನ ಹಾಗೂ ರಾತ್ರಿ ಊಟದ ನಂತರ ಕ್ಯಾರೆಟ್ ಅನ್ನು ಹಸಿಯಾಗಿಯೇ ತಿನ್ನುವುದರಿಂದ ದೇಹದ ತೂಕ ಇಳಿಸಲು
ಸಹಕಾರಿಯಾಗಬಲ್ಲದು.