ಹೊಸ ಮನೆ ಕಟ್ಟಿದ ಮೇಲೆ ಆ ಮನೆಯಲ್ಲಿ ಸುಖಶಾಂತಿ ನೆಲೆಸಲು ಸೂಕ್ತವಾದ ವಾಸ್ತು ಗಿಡಗಳನ್ನು ಬೆಳೆಸಿದರೆ ಉತ್ತಮ ಎಂದು ತಜ್ಞರು ಅಭಿಪ್ರಾಯ, ಅದರಲ್ಲಿ ಪ್ರಮುಖ ವಾಸ್ತು ಗಿಡಗಳ ಮಾಹಿತಿ ಇಲ್ಲಿ ನೀಡಲಾಗಿದೆ.
ತುಳಸಿ ಗಿಡ :
ವಾಸ್ತು ಪ್ರಕಾರ ತುಳಸಿ ಗಿಡ ಹಿಂದೂ ಪುರಾಣದ ಪ್ರಕಾರ ಮನೆಯಲ್ಲಿ ಇರಬೇಕಾದ ಪವಿತ್ರವಾದ ಗಿಡ, ಇದು ಹೆಚ್ಚಿನ ಧನಾತ್ಮಕ ಶಕ್ತಿಯನ್ನು ಹೊಂದಿರುತ್ತದೆ. ತುಳಸಿ ಗಿಡವನ್ನು ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದು ಮನೆಯಲ್ಲಿರುವವರ ಆರೋಗ್ಯ ಸುಧಾರಣೆಗೂ ಸಹಾಯಕವಾಗುತ್ತದೆ.
ಬಿದಿರಿನ ಗಿಡ :
ಅದೃಷ್ಟದ ಗಿಡವೆಂದರೆ ಬಿದಿರು ಎಂದು ಕರೆಯುತ್ತಾರೆ. ಈ ಗಿಡವು ದುಷ್ಟಶಕ್ತಿಗಳನ್ನು ನಿವಾರಣೆ ಮಾಡುವ ಗಿಡವೆಂದು ಹೇಳುತ್ತಾರೆ.
ಈ ಗಿಡವನ್ನು ಪೂರ್ವ ದಿಕ್ಕಿನಲ್ಲಿಟ್ಟರೆ ಆರೋಗ್ಯ ಸುಧಾರಣೆಯಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿಟ್ಟರೆ ಹಣಕಾಸು ಅಭಿವೃದ್ಧಿಯಾಗುತ್ತದೆ.
ಅಲೋವೆರಾ :
ವಾಸ್ತು ತಿಳಿದವರು ಮನೆಗಳಲ್ಲಿ ಮನೆಯ ಡೋರಿನ ಮೇಲ್ಭಾಗದಲ್ಲಿ ಅಲೋವೆರಾ ಗಿಡವನ್ನು ನೇತುಹಾಕಿರುತ್ತಾರೆ, ಅಲೋವೆರಾ ಅಥವಾ ಲೋಳೆಸರ ಗಿಡವೂ ವಾಸ್ತು ಗಿಡಗಳ ಸಾಲಿನಲ್ಲಿದೆ. ಇದರಲ್ಲಿ ಸೌಂದರ್ಯವರ್ಧಕ ಗುಣ ಹಾಗೂ ಸಾಕಷ್ಟು ಔಷಧೀಯ ಗುಣಗಳೂ ಇವೆ.
ಮನಿ ಪ್ಲಾಂಟ್ :
ಮನಿ ಪ್ಲಾಂಟ್ ಗಿಡವನ್ನು ಹೆಚ್ಚಿನವರು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇದು ಶುದ್ಧಗಾಳಿ ನೀಡುವ ಗಿಡವಾಗಿದೆ. ವಿಕಿರಣಗಳನ್ನು ಹೀರುವ ಶಕ್ತಿಯಿರುವುದರಿಂದ ಈ ಗಿಡಗಳನ್ನು ಟೀವಿ, ಕಂಪ್ಯೂಟರ್ ಪಕ್ಕ ಇಡಬಹುದು. ಇದು ಮನೆಯ ಗಾಳಿಯನ್ನು ಉತ್ತಮಪಡಿಸಿ ಮನೆಯಲ್ಲಿರುವವರು ಉದ್ವೇಗ, ಒತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ವಾಸ್ತು ಪ್ರಕಾರ ಈ ಗಿಡವನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿಡಬೇಕು.
ನೆಲ ನೈದಿಲೆ :
ವಾಸ್ತು ಗಿಡಗಳಲ್ಲಿ ಲಿಲ್ಲಿ ಪ್ಲಾಂಟ್ ಅಥವಾ ನೆಲ ನೈದಿಲೆಗೂ ಪ್ರಮುಖ ಸ್ಥಾನವಿದೆ. ಇದು ವಾತಾವರಣದಲ್ಲಿರುವ ಋಣಾತ್ಮಕ ಅಂಶಗಳನ್ನು ತೊಡೆದುಹಾಕುತ್ತದೆ, ಮನೆಯಲ್ಲಿ ನಿರ್ಮಲ ವಾತಾವರಣಕ್ಕೆ ಮತ್ತು ಅಭಿವೃದ್ಧಿಗೂ ಸಹಕಾರಿ ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಆರ್ಕಿಡ್ಸ್ :
ಮನೆಯ ಶ್ರೇಯೋಭಿವೃದ್ಧಿಗಾಗಿ ಆರ್ಕಿಡ್ಸ್ ಗಿಡಗಳನ್ನು ಬೆಳೆಸಿದರೆ ಉತ್ತಮ. ಅನೇಕ ಬಣ್ಣಗಳಲ್ಲಿ ದೊರಕುವ ಈ ಗಿಡವು ಮನೆಯ ಅಂದವನ್ನೂ ಹೆಚ್ಚಿಸುತ್ತದೆ. ಈ ಗಿಡವನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಬೆಳೆಸಿದರೆ ಒಳ್ಳೆಯದು.
ಕಮಲ :
ಕಮಲ ಅಥವಾ ತಾವರೆಯೂ ಲಕ್ಷ್ಮಿ ದೇವಿಯ ಅವತಾರ ಇದು ಪವಿತ್ರವಾದದ್ದು. ಇದು ಸುಖ, ಶಾಂತಿ, ಐಶ್ವರ್ಯದ ಸಂಕೇತವೂ ಹೌದು.
ಮಲ್ಲಿಗೆ :
ಮಲ್ಲಿಗೆ ಗಿಡದ ಸುವಾಸನೆಯು ಮನೆಯ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ಆರೋಗ್ಯ ವೃದ್ಧಿಸಲೂ ಸಹಕಾರಿ. ಇದನ್ನು ಪೂರ್ವ, ಉತ್ತರ, ಈಶಾನ್ಯದ ಬಾಗಿಲ ಬಳಿ ಅಥವಾ ದಕ್ಷಿಣಾಭಿಮುಖವಾಗಿ ಇರುವ ಕಿಟಕಿಯ ಬಳಿ ಬೆಳೆಸಿದರೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಪಿಯೋನಿ ಪ್ಲಾಂಟ್ :
ಮನೆ ಮಂದಿಯಲ್ಲಿ ಆಶಾಭಾವನೆ ಬೆಳೆಸಲು, ಮನೆಯ ಘನತೆ ಹೆಚ್ಚಿಸಲು, ಸಂಬಂಧ ಒಂದುಗೂಡಿಸಲು, ಧನಾತ್ಮಕ ವಾತಾವರಣಕ್ಕೆ ಪಿಯೋನಿ ಪ್ಲಾಂಟ್ ಕೂಡ ಸಹಕಾರಿ. ನಿಂಬೆಗಿಡ, ಸೇವಂತಿಗೆ ಗಿಡ, ರಬ್ಬರ್ ಪ್ಲಾಂಟ್ ಇತ್ಯಾದಿ ಹಲವು ಗಿಡಗಳು ವಾಸ್ತು ಗಿಡಗಳಾಗಿ ಜನಪ್ರಿಯ.
ಮನೆಯಲ್ಲಿ ಬೆಳೆಸಬಾರದ ಗಿಡಗಳು :
ವಾಸ್ತು ಪ್ರಕಾರ ಕೆಲವು ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹುಣಸೆ ಹಣ್ಣಿನ ಗಿಡ, ಅಕೇಶಿಯಾ ಗಿಡ, ಆಲದ ಮರ, ಹತ್ತಿ ಗಿಡ, ರಬ್ಬರ ಗಿಡಗಳನ್ ನುಮನೆಯಲ್ಲಿ ನೆಡಬಾರದು. ಬೋನ್ಸಾಯ್ ಹಾಗೂ ಕುಬ್ಜಗಿಡಗಳನ್ನು ಬೆಳೆಸಿದರೆ ಮನೆಯ ಅಭಿವೃದ್ಧಿ ಕುಬ್ಜವಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಮಾವು, ನಿಂಬೆ, ಬಾಳೆಹಣ್ಣು ಮತ್ತು ಪಪ್ಪಾಯಿ ಮರಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡಬಾರದು.
ತೆಂಗಿನಕಾಯಿ ಮತ್ತು ನಿಂಬೆ ಮರಗಳನ್ನು ಉದ್ಯಾನದ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆಡಬೇಕು.