ಆರ್ ಟಿಸಿಯನ್ನು ಪಡೆಯುವ ಮಾಹಿತಿ ಇಲ್ಲಿ ನೀಡಲಾಗಿದೆ
- 2000 ಇಸವಿಯಲ್ಲಿ ಕರ್ನಾಟಕ ರಾಜ್ಯ ಸರಕಾರ ಭೂ ದಾಖಲೆಗಳ ನಿರ್ವಹಣೆಯ ಒಂದು ಪ್ರಮುಖ ಭೂಮಿ ಯೋಜನೆಯನ್ನು ಆರಂಭಿಸಿತು
- ಈ ಯೋಜನೆಯ ಮೂಲಕ ಎಲ್ಲಾ ಕೈಬರಹದ ಪಹಣಿಗಳನ್ನು ಡೇಟಾಗಳನ್ನು ಸ್ಕಾನ್ ಮಾಡಿಸಿ ಕಂಪ್ಯೂಟರ್ ಮೂಲಕ ಕಿಯಾಸ್ಕ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ವಿತರಿಸಲು ಸಿಗುವಂತೆ ಕಾರ್ಯಾರಂಭ ಮಾಡಿತು.
- ಭೂ ದಾಖಲೆಗಳ ದತ್ತಾಂಶ ಉಪಯೋಗಿಸಿ ಪಹಣಿಯಲ್ಲಾಗುವ ಮಾಲಿಕತ್ವ ಬದಲಾವಣೆ ಮತ್ತು ಇನ್ಯಾವುದೋ ಬದಲಾವಣೆಗಳನ್ನು ಮ್ಯುಟೇಶನ್ ಮುಖಾಂತರ ನಿರ್ವಹಿಸಲು ಆರಂಭಿಸಿತು
- ಇದಕ್ಕಾಗಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಭೂಮಿ ಬ್ಯಾಕ್ ಆಫೀಸುಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಬ್ಯಾಕ್ ಆಫೀಸ್ ಗಳಲ್ಲಿ ಎಲ್ಆರ್ ಕಿಯಾಸ್ಕ್ ಮತ್ತು ಅರ್ಜಿ ಕಿಯಾಸ್ಕ್ ಸೆಂಟರ್ ಗಳನ್ನು ಸ್ಥಾಪಿಸಲಾಯಿತು.
- ಸಾರ್ವಜನಿಕರು ಪಹಣಿಯನ್ನು ಆನ್ ಲೈನ್ ಮೂಲಕ 10 ರೂಪಾಯಿಯನ್ನು ಪಾವತಿಸಿ ಎಲ್ಲಿಂದ ಬೇಕಾದರೂ ಯಾವುದೇ ಸಮಯದಲ್ಲಿ ಬೇಕಾದರೂ ಮೂಲ ಆರ್ ಟಿಸಿಯನ್ನು ಪಡೆಯಬಹುದು.
- ಪಹಣಿಯನ್ನು ಆನ್ ಲೈನ್ ಮೂಲಕ ಪಡೆಯುವ ಒಂದು ವಿಶಿಷ್ಟ ಯೋಜನೆಯನ್ನು ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ಸರಕಾರವು ಪ್ರಾರಂಭಿಸಿತು
- ಆರ್ ಟಿಸಿ ಪಡೆಯುವುದಕ್ಕಾಗಿ ತಾಲೂಕು ಕಚೇರಿ ಅಥವಾ ನಾಡ ಕಚೇರಿಗಳನ್ನು ಸುತ್ತ ಬೇಕಿಲ್ಲ. ನಿಮ್ಮ ಮನೆಯಲ್ಲಿ ಕಂಪ್ಯೂಟರ್ ಇದ್ದರೆ ಅದನ್ನು ಪಡೆಯಬಹುದಾಗಿದೆ.
- ಈ ಯೋಜನೆ ಬರುವುದಕ್ಕೆ ಮೊದಲು ಭೂಮಿಯ ಪಹಣಿ ಪಡೆಯಲು ದಿನವಿಡೀ ಕಾದು ನಿಲ್ಲಬೇಕಿತ್ತು. ತಾಲೂಕು ಕಚೇರಿಯಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಅಲ್ಲಿ ಮಧ್ಯವರ್ತಿಗಳಿಗೆ ಲಂಚ ನೀಡುವ ಕಾಟವೂ ಇರುತ್ತಿತ್ತು. ಆನ್ ಲೈನ್ ಬಂದ ನಂತರ ಈ ಪ್ರಕ್ರಿಯೆ ಹೆಚ್ಚು ಸರಳವಾಗಿದೆ.
ಆನ್ ಲೈನ್ ನಲ್ಲಿ ಪಹಣಿ ಪಡೆಯಲು ವೆಬ್ ಸೈಟಿನ ವಿಳಾಸ:
www.landrecords.karnataka.gov.in