ಇಂದಿನ ಯುವಜನತೆ ಫ್ಯಾಷನ್ ಪ್ರಿಯರು. ಎಲ್ಲವೂ ಪರ್ಫೆಕ್ಟ್ ಆಗಿರಲೇ ಬೇಕು ಎಂದು ಇಷ್ಟ ಪಡುತ್ತಾರೆ. ಕಣ್ಣಿನ ಗುಡ್ಡೆಗಳ ಬಣ್ಣ ಕೂಡ ಇವರ ಫ್ಯಾಷನ್. ಅದಕ್ಕಾಗಿ ಹಲವು ಮಾದರಿಯ ಬಣ್ಣ ಬಣ್ಣದ ಲೆನ್ಸ್ ಖರೀದಿಗೆ ಮೊರೆ ಹೋಗುತ್ತಾರೆ. ಈಗಿನ ಮಾರುಕಟ್ಟೆಯಲ್ಲಿ ಹಲವು ಬಗೆಯ ಬಣ್ಣದ ಲೆನ್ಸ್ ಗಳು ದೊರೆಯುತ್ತವೆ.
ಕಾಸ್ಟೂಮ್ ಅಂಗಡಿ ಅಥವಾ ಆನ್‌ಲೈನ್ ಮೂಲಕ ಖರೀದಿ ಮಾಡುವ ಮುಂಚೆ ಡಾಕ್ಟರ್ ಅನುಮತಿ ಇಲ್ಲದೇ, ಕಣ್ಣಿನ ತಪಾಸಣೆಗೆ ಒಳಗಾಗದೆ ಉಪಯೋಗಿಸುವ ಲೆನ್ಸ್ ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲಾ. ಸರಿಯಾದ ಆಳತೆ, ಜೋಡಣೆ, ಸ್ವಚ್ಚತೆ ಮತ್ತು ಮುನ್ನೆಚ್ಚರಿಕೆ ಇಲ್ಲದೆ ಇರುವ ಲೆನ್ಸ್ ಉಪಯೋಗಿಸುವುದರಿಂದ ದೃಷ್ಟಿಯನ್ನು ಕಳೆದುಕೊಳ್ಳುವ ಸಂಭವವೇ ಜಾಸ್ತಿ.
ನಿಮಗೆ ನಿಸರ್ಗದತ್ತವಾಗಿ ಬಂದ ಕಣ್ಣಿನ ಬಣ್ಣವನ್ನು ಬದಲಾಯಿಸಿಕೊಳ್ಳಲೇ ಬೇಕು ಅಂತ ಅನ್ನಿಸಿದ್ದೇ ಆದರೆ ವೃತ್ತಿನಿರತ ನೇತ್ರ ತಜ್ಞರನ್ನು ಮೊದಲು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಿ. ಅವರ ಸಲಹೆ ಸೂಚನೆ ಮೇರೆಗೆ ನಿಮಗೆ ಬೇಕಾದ ಲೆನ್ಸ್ ಹಾಕಿಸಿಕೊಳ್ಳಿ ನಿಮ್ಮ ಕಣ್ಣಿಗೂ ಮತ್ತು ಆರೋಗ್ಯಕ್ಕೂ ಒಳ್ಳೆಯದು.