ಪ್ರೇಮದಲಿ ಹಾಡುವನು
ರಾಮರಾಗವ ಚೌಡ
ಸೀಮೆ ದಾಟುವನು ಲಿಂಗದೊಳು ❙
ಶಿವಪೂಜೆ ನೇಮಾಯ್ತು ನಿತ್ಯ ಬೆಳಗಿನಲಿ ❙❙
ಲಿಂಗಪೂಜೆಗೆ ರಾಗ ಸಂಗಜೋಡಣೆಯಾಗಿ
ಲಿಂಗದೊಳು ಅಂಗ ಬೆರೆತಂತೆ ❙
ಚೌಡನಿಗೆ ಅಂಗಲಿಂಗಾಯ್ತು ಈ ರಾಗ ❙❙
- ಬಹುರೂಪಿ ಚೌಡಯ್ಯ
ಆಶೆಯೇ ದಾಸತ್ವ, ನಿರಾಶೆಯೇ ಈಶತ್ವ
ನಿರಾಶೆಯಾಗಿಪ್ಪುದೆ ಈಶಪದವಯ್ಯ
ಉರಿಲಿಂಗಪೆದ್ದಿ ಪ್ರಿಯ ವಿಶ್ವೇಶ್ವರಾ !
- ಉರಿಲಿಂಗ ದೇವ