ವೃದ್ಧ , ಅತಿವೃದ್ಧ , ಬಲಹೀನ ಹಾಗೂ ವ್ಯಾಗ್ರಸ್ಥ ಎಂದರೆ 3 ವರ್ಷದಿಂದ 100 ವರ್ಷದವರೆಗಿನ ಎಲ್ಲರೂ ಯೋಗ ಮಾಡಬಹುದು ! ದೈಹಿಕ, ಮಾನಸಿಕ ಆರೋಗ್ಯ, ನೆಮ್ಮದಿ ತಮ್ಮದಾಗಿಸಿಕೊಳ್ಳಬಹುದು.
ಯೋಗ ಮಾಡುವಾಗ ಕೆಲವೊಂದು ಆವಶ್ಯಕ ಸೂಚನೆಗಳನ್ನು ಪಾಲಿಸಿಬೇಕು :
- ಯೋಗಾಭ್ಯಾಸವನ್ನು ಬೆಳಿಗ್ಗೆ ಅಥವಾ ಸಂಜೆ ಮಾಡಿದರೆ ಒಳ್ಳೆಯದು.
- ಬೆಳಗಿನ ಹೊತ್ತು ಸ್ನಾನಮಾಡಿದ ನಂತರ ತಿಂಡಿ ಸೇವನೆಗಿಂತ ಮುಂಚೆ ಮಾಡುವುದು ಉತ್ತಮ.
- ಸಂಜೆ ಹೊತ್ತಿನಲ್ಲಿ ಯೋಗಾಭ್ಯಾಸ ಮಾಡಬೇಕಾದಲ್ಲಿ ಸಂಜೆಯ ಊಟಕ್ಕಿಂತ ಕನಿಷ್ಠ 45 ನಿಮಿಷಗಳ ಮುಂಚೆ ಮಾಡುವುದು ಸೂಕ್ತ.
- ಯೋಗಾಭ್ಯಾಸ ಪ್ರಾರಂಭ ಮಾಡುವುದಕ್ಕೆ ಮುನ್ನ ಬಾಯಿಯನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಒಳ್ಳೆಯದು ಹಾಗೂ ಶೌಚಾದಿಗಳಿಂದ ಮುಗಿಸಿರಬೇಕು.
- ಯೋಗಾಸನಗಳನ್ನು ಮಾಡಿದ ತಕ್ಷಣ ಸ್ನಾನ ಮಾಡುವುದು ಒಳ್ಳೆಯ ಲಕ್ಷಣವಲ್ಲ.
- ಯೋಗಾಸನದ ನಂತರ ಪ್ರಾಣಾಯಾಮ, ಪ್ರಾಣಾಯಾಮದ ನಂತರ ಧ್ಯಾನ ಮಾಡಿದರೆ ಉತ್ತಮ.
- ಸಾಮಾನ್ಯವಾಗಿ ಯೋಗಾಭ್ಯಾಸವನ್ನು ದಿನಕ್ಕೆ ಒಂದು ಬಾರಿ ಮಾತ್ರ ಮಾಡಿದರೆ ಸಾಕು.
- ವಿಶೇಷ ಸಂದರ್ಭದಲ್ಲಿ ದಿನಕ್ಕೆ ಎರಡು ಬಾರಿ ಮಾಡಬಹುದು.
- ಅಂಗಾಂಗಗಳನ್ನು ಸರಾಗವಾಗಿ ಆಡಿಸಲು ಅನುಕೂಲವಾಗಲು ಸಡಿಲವಾದ ಉಡುಪನ್ನು ಧರಿಸಿದರೆ ಒಳ್ಳೆಯದು.
- ನೆಲದ ಮೇಲೆ ಒಂದು ಜಮಖಾನೆಯನ್ನು ಹಾಸಿ ಬೆಳಗಿನ ಸಮಯದಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮತ್ತು ಸಂಜೆ ಸಮಯದಲ್ಲಿ ಪಶ್ಚಿಮ ಅಥವಾ ಉತ್ತರ ದಿಕ್ಕಿಗೆ ಅಭಿಮುಖವಾಗಿ ಕುಳಿತುಕೊಂಡು ಯೋಗಾಭ್ಯಾಸ ಮಾಡಬಹುದು.
- ಕಣ್ಣು ಮುಚ್ಚಿ ಒಂದು ನಿಮಿಷ ಮೌನ ಪ್ರಾರ್ಥನೆಯ ನಂತರ ಪ್ರಾರಂಭ ಮಾಡಬೇಕು, ಅನಂತರ ನಿಧಾನವಾಗಿ ಕಣ್ಣುಗಳನ್ನು ತೆರೆದು ಯೋಗಾಸನಗಳನ್ನು ಸೂಚಿಸಿರುವ ಕ್ರಮದಲ್ಲಿ ಮಾಡಬೇಕು.
- ಪ್ರತಿ ಒಂದು ಬಾರಿಯೂ ಅಂಗಾಂಗಗಳ ಚಲನೆಯು ನಿಧಾನವಾಗಿರ ಬೇಕಲ್ಲದೆ ತ್ವರಿತ ಚಾಲನೆಯನ್ನು (ಜರ್ಕ್) ನಿಗ್ರಹಿಸಬೇಕು.
- ಯಾವುದಾದರೂ ಯೌಗಿಕ ಚಲನೆಯು ಯಾವುದೇ ಹಂತದಲ್ಲಿ ಕಷ್ಟ ಎನಿಸಿದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾತ್ರ ಬಾಗಿಸಬೇಕು. ಖಂಡಿತ ಬಲವಂತವಾಗಿ ಬಗ್ಗಿಸುವ ಯತ್ನ ಮಾಡಬಾರದು.
- ನಿಮ್ಮ ಆಹಾರ ನಿಮ್ಮ ದೇಹಕ್ಕೆ ಸರಿಯಾಗಿದ್ದರೆ ಅದನ್ನು ಬದಲಾಯಿಸುವ ಅಗತ್ಯವಿಲ್ಲ.
- ಯಾವುದೇ ಪಾನೀಯವನ್ನು ಸೇವಿಸಿದ ಅರ್ಧ ಗಂಟೆಯ ನಂತರ ಅಭ್ಯಾಸವನ್ನು ಪ್ರಾರಂಭಿಸಬೇಕು.
- ಲಘು ಉಪಾಹಾರ ಸೇವಿಸಿದಲ್ಲಿ 2 ಗಂಟೆಗಳ ಕಾಲ ತಡೆಯಿರಿ. ಊಟದ ನಂತರ ಕನಿಷ್ಠ 4 ಗಂಟೆಗಳ ಕಾಲ ತಡೆಯಿರಿ.
- ಸಮಸ್ಥಿತಿಯ ನಂತರ ಮೊದಲ ಹಂತವನ್ನು ಎಚ್ಚರಿಕೆಯಿಂದ ಗಮನಿಸಿ.
- ಪ್ರತಿಯೊಂದು ವಿನ್ಯಾಸ ಅಥವಾ ಹಂತವನ್ನು ಎಚ್ಚರಿಕೆಯಿಂದ ಗಮನಿಸಿ
- ಶ್ವಾಸವನ್ನು ಎಂದರೆ ಉಸಿರು ಬಿಡುವುದು ಮತ್ತು ತೆಗೆದುಕೊಳ್ಳುವುದು
- ಪ್ರತಿ ಹಂತದಲ್ಲೂ ಗಮನಿಸಬೇಕು (ಅನುಲೋಮ-ವಿಲೋಮ)
- ಯೋಗಾಸನದ ಅಂತಿಮ ಹಂತವನ್ನು ಎಚ್ಚರಿಕೆಯಿಂದ ಕರಗತ ಮಾಡಿಕೊಳ್ಳಬೇಕು ಮತ್ತು ಈ ಸ್ಥಿತಿಯಲ್ಲಿ ಸರಿಯಾದ ಉಸಿರಾಟವನ್ನು 5 ಬಾರಿ ಮಾಡಬೇಕು.
- ಯೋಗಾಸನದ ಅಂತಿಮ (ಆಸನ) ಸ್ಥಿತಿಯಲ್ಲಿ ಸರಿಯಾದ ದಷ್ಟಿಯನ್ನು ಗಮನವಿಟ್ಟು ತಿಳಿದುಕೊಳ್ಳಬೇಕು.
- ಶ್ರದ್ಧಾಭಕ್ತಿಯಿಂದ ಯೋಗಾಭ್ಯಾಸ ಮಾಡುವವರಿಗೆ ಖಂಡಿತ ಪೂರ್ಣ ಫಲ ದೊರೆಯುವುದು.