ಇತ್ತೀಚೆಗೆ ಮನೆಗಳನ್ನು ವಾಸ್ತು ಪ್ರಕಾರ ಕಟ್ಟಲು ಹೆಚ್ಚು ಬೇಡಿಕೆಗಳಾಗುತ್ತಿವೆ. ಮನೆ ಕಟ್ಟಿಸುವವರು ಮನೆಯ ಪ್ರತಿಯೊಂದು ಕೋಣೆ ಹಾಗೂ ಮೂಲೆಯನ್ನು ವಾಸ್ತು ಪ್ರಕಾರ ಕಟ್ಟಿಸಿ ಕೊಳ್ಳಲು ಅದರಲ್ಲೂ ಅಡುಗೆ ಮನೆ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.
ಆರೋಗ್ಯ ಮತ್ತು ದೈಹಿಕ ಶಕ್ತಿಗೆ ಆಹಾರ ಪ್ರಮುಖವಾದದ್ದು. ಇದರ ಜೊತೆಗೆ ನಮ್ಮ ಆರೋಗ್ಯ ಮತ್ತು ಸಮೃದ್ಧಿಗೆ ಅಡುಗೆ ಮನೆಯ ವಾಸ್ತುವೂ ಉತ್ತಮವಾಗಿರಬೇಕು. ಅಡುಗೆ ಮನೆಯಲ್ಲಿ ಪಂಚಭೂತಗಳಿಗೆ ಮಹತ್ವದ ಸ್ಥಾನ ನೀಡಿ. ಮುಂದೆ ನೀವು ಹೊಸ ಮನೆ ಕಟ್ಟುವಾಗ ಅಡುಗೆ ಮನೆಯ ವಾಸ್ತುವಿನ ಕಡೆಗೂ ಗಮನ ನೀಡಿ. ಅಡುಗೆ ಮನೆಯ ವಾಸ್ತುವಿಗೆ ಸಂಬಂಧಪಟ್ಟಂತೆ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಪೂರ್ವ ದಿಕ್ಕಿಗೆ ಅಭಿಮುಖವಾಗಿ ನಿಂತು ಅಡುಗೆ ಮಾಡುವಂತೆ ಗ್ಯಾಸ್ ಒಲೆ ಇರಬೇಕು.
ಮನೆಯ ಅಡುಗೆ ಕೋಣೆಯು ಪೂರ್ವ ಮತ್ತು ಆಗ್ನೇಯ ದಿಕ್ಕಿಗೆ ಆಗಿದ್ದರೆ ಅನುಕೂಲಕರವಾಗಿರುತ್ತದೆ. ಯಾವಾತ್ತೂ ಅಡುಗೆ ಮನೆ ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಇರಬಾರದು.
ಹಸಿರು ಮರದ ಎಲೆಗಳ ಬಣ್ಣವು ಗಾಳಿಯ ಅಂಶವನ್ನು ಸಮತೋಲನಗೊಳಿಸುತ್ತದೆ. ಹೀಗಾಗಿ ಅಡುಗೆ ಮನೆಯ ಚಪ್ಪಡಿ ಕಲ್ಲು ಹಸಿರು ಬಣ್ಣದಾಗಿದ್ದರೆ ಉತ್ತಮ.
ನೀರಿನ ದಿಕ್ಕು ಉತ್ತರ. ಹೀಗಾಗಿ ಕುಡಿಯುವ ನೀರನ್ನು ಉತ್ತರ ದಿಕ್ಕಿನಲ್ಲಿಯೇ ಇಡಬೇಕು.
ಸಿಂಕ್ ಕೂಡ ಉತ್ತರ ದಿಕ್ಕಿನಲ್ಲಿ ಇದ್ದರೆ ಉತ್ತಮ. ಸಿಂಕ್ ಈಶಾನ್ಯ ದಿಕ್ಕಿನಲ್ಲಿ ಇದ್ದರೂ ಪರವಾಗಿಲ್ಲ. ಯಾವುದೇ ಸಮಸ್ಯೆ ಇಲ್ಲ, ಆದರೆ ಸಿಂಕ್ ಯಾವಾಗಲೂ ಸ್ವಚ್ಛವಾಗಿರಬೇಕು ಸಿಂಕ್ ನಲ್ಲೇ ಪಾತ್ರೆ ಸಾಮಾನುಗಳು ಬೆಳಗ್ಗೆಯಿಂದ ರಾತ್ರಿಯವರಿಗೂ ಇಟ್ಟುಕೊಳ್ಳಬಾರದು.
ಸಿಂಕ್ ಮತ್ತು ಅಡುಗೆ ಅನಿಲ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಇರಬಾರದು. ಇವೆರಡೂ ತುಂಬಾ ಹತ್ತಿರದಲ್ಲಿರುವುದೂ ಬೇಡ. ಇವೆರಡು ಅಕ್ಕಪಕ್ಕದಲ್ಲಿದ್ದರೆ ಮಧ್ಯದಲ್ಲಿ ಶಿಲಾ ಕಪ್ಪು ಇಟ್ಟರೆ ಒಳ್ಳೆಯದು.
ಅಡುಗೆ ಮನೆಯಲ್ಲಿ ಫ್ರಿಡ್ಜ್ ಪಶ್ಚಿಮ ದಿಕ್ಕಿನಲ್ಲಿ ಇರಲಿ ಒಳ್ಳೆಯದು.