ಇತ್ತೀಚಿನ ದಿನಗಳಲ್ಲಿ ಸ್ಟೈನ್ಲೆಸ್ ಸ್ಟೀಲ್ ಈಗ ಕಿಚನ್ ನಲ್ಲಿ ಹೊಸ ರೂಪ ನೀಡುತ್ತಿದೆ.
ಅಡುಗೆ ಮನೆಗೆ ಹೊಳಪು ನೀಡುವ ಜೊತೆಗೆ ಗಟ್ಟಿತನವನ್ನೂ ಹೊಂದಿದೆ, ಇತ್ತೀಚಿನ ಕೆಲವು ದಿನಗಳಲ್ಲಿ ಅಡುಗೆ ಮನೆ ಇಂಟೀರಿಯರ್ ನಲ್ಲಿ ಸ್ಟೀಲ್ ಬಳಕೆ ಮತ್ತು ಮಹತ್ವ ಹೆಚ್ಚುತ್ತಿದೆ. ದೀರ್ಘ ಬಾಳಿಕೆಯ ಜೊತೆಗೆ ಸುಲಭವಾಗಿ ನಿರ್ವಹಣೆ ಮಾಡುವುದು ಇದರ ಕೊಡುಗೆ. ಮುಖ್ಯವಾಗಿ ಕಲೆ, ಕೊಳೆಯಿಂದ ಇದು ಮುಕ್ತವಾಗಿರುತ್ತದೆ. ಆದರೆ ಬಳಕೆ ಮಾಡುವಾಗ ಕೆಲವೊಮ್ಮೆ ಇದಕ್ಕೆ ಪಾಲಿಶ್ ಮಾಡಬೇಕಾಗುತ್ತದೆ. ಇದನ್ನು ಹೊರತು ಪಡಿಸಿದರೆ ನೀರಿನಿಂದ ಇದು ಹಾಳಾಗುವುದಿಲ್ಲ, ಹುಳಗಳಿಂದ ಕೂಡ ಇದಕ್ಕೆ ಹಾನಿ ಹಾಗುವುದಿಲ್ಲ. ನಿಯಮಿತವಾಗಿ ಒದ್ದೆ ಬಟ್ಟೆಯಿಂದ ಕ್ಲೀನ್ ಮಾಡುವ ಮೂಲಕ ಬಹಳ ದಿನಗಳವರೆಗೆ ಇದನ್ನು ಹೊಸದಾಗಿ ಕಾಣುವಂತೆ ನೋಡಿಕೊಳ್ಳಬಹುದು.
ಇದರಿಂದ ಆಗುವ ಲಾಭಗಳು :
ಗ್ಯಾಜೆಟ್, ಡೆಕೊರೇಶನ್ ಐಟಂ ಮತ್ತು ಸ್ಟೋರೇಜ್ ಕಬೋರ್ಡ್ ಆಗಿ ಕೂಡ ಸ್ಟೈನ್ಲೆಸ್ ಸ್ಟೀಲ್ ಬಳಕೆಯಲ್ಲಿದೆ. ಸಾಮಾನ್ಯವಾಗಿ ನಮ್ಮಲ್ಲಿ ಅಡುಗೆಯಲ್ಲಿ ನೀರಿನ ಬಳಕೆ ಹೆಚ್ಚು. ಹೀಗಾಗಿ ತುಕ್ಕು ಹಿಡಿಯದಂತಹ ಸ್ಟೀಲ್ ಬಳಕೆ ಹೆಚ್ಚುತ್ತಿದೆ. ಜೊತೆಗೆ ಈಗಿನ ಮಾರುಕಟ್ಟೆಯಲ್ಲಿ ಮರ ದುಬಾರಿಯಾಗಿರುವುದು ಮತ್ತು ಅದರ ನಿರ್ವಹಣೆ ಕೂಡ ತುಂಬಾ ಕಷ್ಟ ಇದರಿಂದ ಸ್ಟೀಲ್ ಬಳಕೆ ಹೆಚ್ಚು ಜನಪ್ರಿಯವಾಗಲು ಕಾರಣವಾಗಿದೆ.
ವೈವಿಧ್ಯಮಯ ಬಳಕೆ:
ಕೌಂಟರ್ ಟಾಪ್ ಕ್ಯಾಬಿನೆಟ್, ವೈರ್ ಬಾಸ್ಕೆಟ್, ಸಿಂಕ್, ಚಿಮಿಣಿ ಹೀಗೆ ನಾನಾ ವಿಧದಲ್ಲಿ ಸ್ಟೀಲ್ ಬಳಕೆಯಾಗುತ್ತಿದೆ. ಸ್ಟೀಲ್ ಜೊತೆಗೆ ಗ್ರಾನೈಟ್, ಸೆರಾಮಿಕ್, ಮರ ಮತ್ತು ಗ್ಲಾಸ್ ಚೆನ್ನಾಗಿ ಜೋಡಣೆಯಾಗುತ್ತಿದ್ದು, ಈ ಮೂಲಕ ಕಿಚನ್ ಗೆ ಸ್ಟೀಲ್ ಶೈನಿಂಗ್ ಲುಕ್ ನೀಡುತ್ತದೆ.
ಅಲಂಕಾರಕ್ಕೆ ಬಳಕೆ :
ಸ್ಟೀಲ್ ಐಲ್ಯಾಂಡ್ ಅಡುಗೆ ಮನೆಯ ಅಲಂಕಾರಕ್ಕೆ ಅತ್ಯಾಧುನಿಕ ಸೌಂದರ್ಯದ ಸ್ಪರ್ಶ ನೀಡುವಲ್ಲಿ ನೆರವಾಗುತ್ತದೆ. ಹೀಗಾಗಿ ಕೇವಲ ಕೆಲಸ ಮಾತ್ರವಲ್ಲ ಅಂದದ ವಿಷಯದಲ್ಲೂ ಸ್ಟೀಲ್ ಪ್ರತ್ಯೇಕವಾಗಿ ಕಾಣುತ್ತದೆ. ಡೈನಿಂಗ್ ಡೇಬಲ್, ಫ್ಲೋಟಿಂಗ್ ಶೆಲ್ಫ್ಗಳಾಗಿ ಕೂಡ ಸ್ಟೀಲ್ ಬಳಕೆಯಲ್ಲಿದೆ. ಇನ್ನು ಸ್ಟೀಲ್ ಸಾಮಗ್ರಿಗಳು ಅದರ ಸಹಜ ಬಣ್ಣದಲ್ಲೇ ಇರಬೇಕೆಂದೇನೂ ಇಲ್ಲ. ಉದಾಹರಣೆಗೆ ಗೋಡೆ ಅಥವಾ ಫ್ಲೋರಿಂಗ್ ಬಣ್ಣವನ್ನು ಕಿಚನ್ ನಲ್ಲಿರುವ ಸ್ಟೀಲ್ ಐಟಂಗಳಿಗೆ ಬಳಿಯಬಹುದು. ಆಗ ಅವು ಸಮತೋಲಿತವಾಗಿ ಮಿಶ್ರಣವಾಗಿ ಅದರ ಅಂದ ಮತ್ತಷ್ಟು ಹೆಚ್ಚುತ್ತದೆ. ಸ್ಟೀಲ್ ಬಾಕ್ಪ್ಲಾಶ್ ಇಡೀ ಕಿಚನ್ ಶೈನಿಂಗ್ ಆಗುತ್ತದೆ. ಜೊತೆಗೆ ಈ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಲು ಕೂಡ ನೆರವಾಗುತ್ತದೆ. ಒಮ್ಮೆ ಇದು ಆರಾಮದಾಯಕ ಎಂದೆನಿಸಿದರೆ ಬಳಿಕ ಕಿಚನ್ ಇತರ ಪ್ರದೇಶಗಳಲ್ಲೂ ಇದರ ಬಳಕೆಗೆ ನೀವು ಮನ ಮಾಡುವುದು ನಿಶ್ಚಿತ ಎಂಬಷ್ಟು ಪ್ರಭಾವವನ್ನು ಸ್ಟೀಲ್ ಬೀರುವುದರಲ್ಲಿ ಸಂದೇಹವಿಲ್ಲ.