ಗರಿಗರಿಯಾದ ರುಚಿಯಾದ ಪ್ರೊಟೀನ್‌ಯುಕ್ತ ಆಂಬೊಡೆ ಮಾಡಲು ಶುರು ಮಾಡಿ.
ಬೇಕಾಗುವ ಸಾಮಗ್ರಿಗಳು :
ಕಡಲೆಬೇಳೆ - 1 ಕಪ್ (6 ಗಂಟೆಗಳ ಕಾಲ ನೆನೆಸಿದ್ದು)
ಅಕ್ಕಿಹಿಟ್ಟು - 2 ಟೇಬಲ್ ಚಮಚ
ಕೊತ್ತಂಬರಿ ಸೊಪ್ಪು - 1/4 ಕಪ್,
ತೆಂಗಿನ ತುರಿ - 2 ಚಮಚ
ಹಸಿ ಮೆಣಸು - 4ರಿಂದ 5
ಶುಂಠಿ - 1 ಇಂಚು (ಚಿಕ್ಕದಾಗಿ ಹೆಚ್ಚಿಕೊಂಡಿದ್ದು)
ಕರಿಬೇವು - 4 (ಸಣ್ಣದಾಗಿ ಹೆಚ್ಚಿಕೊಂಡಿದ್ದು)
ಇಂಗು - ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಕರಿಯಲು
ಆಂಬೊಡೆ ತಯಾರಿಸುವ ವಿಧಾನ :
ಬಾಣಲೆಯಲ್ಲಿ ಎಣ್ಣೆ ಹಾಕಿ ಸ್ವಲ್ಪ ಬಿಸಿಯಾಗಲು ಇಡಿ. ಮಿಕ್ಸರ್‌ಗೆ ನೆನೆದಿರುವ ಬೇಳೆ, ತೆಂಗಿನತುರಿ, ಶುಂಠಿ, ಹಸಿಮೆಣಸು, ಚಿಟಿಕೆ ಇಂಗು, ಉಪ್ಪು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ನೀರು ಜಾಸ್ತಿ ಸೇರಿಸಬಾರದು. ಪಾತ್ರೆಯೊಂದಕ್ಕೆ ರುಬ್ಬಿದ ಮಿಶ್ರಣ ಹಾಕಿ ನಂತರ ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು, ಎರಡು ಚಮಚ ಅಕ್ಕಿಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನಿಂಬೆಹಣ್ಣಿನ ಗಾತ್ರದ ಉಂಡೆ ಮಾಡಿ ಅದನ್ನು ಆಂಬೊಡೆ ಆಕಾರಕ್ಕೆ ಕೈಯಲ್ಲೇ ತಟ್ಟಿಕೊಂಡು. ಕಾದ ಎಣ್ಣೆಗೆ ನಿಧಾನವಾಗಿ ಬಿಡಿ. ಬಣ್ಣ ಬದಲಾಗುವತನಕ ಕರಿದಾಗ ಆಂಬೊಡೆ ತಿನ್ನಲು ರೆಡಿಯಿರುತ್ತದೆ, ಇದನ್ನು ಚಟ್ನಿಯ ಜೊತೆ ತಿನ್ನಲು ರುಚಿಕರವಾಗಿರುತ್ತದೆ.