ಮಾಡಲು ಬೇಕಾಗುವ ಸಾಮಗ್ರಿಗಳು :
ಟೊಮೆಟೊ - 1
ಶುಂಠಿ - 1/2 ಇಂಚು
ಬೆಳ್ಳುಳ್ಳಿ - 4 ಎಸಳು
ಹಸಿಮೆಣಸು - 2
ಗೋಡಂಬಿ - 10
ಎಣ್ಣೆ, ಜೀರಿಗೆ - 1/4 ಚಮಚ
ಹಸಿಮೆಣಸು - 3
ಉಪ್ಪು - ರುಚಿಗೆ
ಮೆಣಸಿನಪುಡಿ - 1/2 ಚಮಚ
ಬಟಾಣಿ - 1/2 ಕಪ್
ಅಣಬೆ - 1/4 ಕೆಜಿ
ಕಸೂರಿ ಮೇಥಿ - ಸ್ವಲ್ಪ
ಮಶ್ರೂಮ್ (ಅಣಬೆ) ಬಟಾಣಿ ಕರಿ ತಯಾರಿಸುವ ವಿಧಾನ :
ಟೊಮೆಟೊ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಹಾಗೂ ಗೋಡಂಬಿ ಎಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಪಾತ್ರೆಗೆ ಎಣ್ಣೆ ಹಾಕಿ ಸ್ವಲ್ಪ ಬಿಸಿಯಾದ ಮೇಲೆ ಜೀರಿಗೆ, ಕತ್ತರಿಸಿದ ಹಸಿಮೆಣಸು ಹಾಗೂ ರುಬ್ಬಿಕೊಂಡ ಪೇಸ್ಟ್ ಹಾಕಿ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಉಪ್ಪು, ಮೆಣಸಿನಪುಡಿ ಹಾಗೂ ಗರಂಮಸಾಲ ಸೇರಿಸಿ ನಂತರ ನೆನೆಸಿಟ್ಟುಕೊಂಡ ಬಟಾಣಿ ಸೇರಿಸಿ 5 ನಿಮಿಷ ಬೇಯಿಸಿರಿ, ಕತ್ತರಿಸಿದ ಅಣಬೆಯನ್ನು ಸೇರಿಸಿ ಬೇಯಿಸಿ. ಅದರ ಮೇಲೆ ಕಸೂರಿಮೇಥಿ ಉದುರಿಸಿ ನಂತರ ರೊಟ್ಟಿ, ಪರೋಟ ಜೊತೆ ಮನೆಯವರೆಲ್ಲರಿಗೂ ತಿನ್ನಲು ಕೊಡಿ.