ಡ್ರೈ ಫ್ರೂಟ್ಸ್ ಅಂಟಿನ ಉಂಡೆ ಮಾಡಲು ಬೇಕಾಗುವ ಸಾಮಾಗ್ರಿಗಳು :
ಪುಡಿ ಬೆಲ್ಲ - 1 ಕಪ್,
ಉತ್ತುತ್ತೆ - ½ ಕಪ್,
ಖರ್ಜೂರ - ½ ಕಪ್,
ಗೋಡಂಬಿ - ¼ ಕಪ್,
ಒಣದ್ರಾಕ್ಷಿ - ¼ ಕಪ್,
ಬಾದಾಮಿ - ¼ ಕಪ್,
ತುರಿದ ಕೊಬ್ಬರಿ - ¼ ಕಪ್,
ಅಂಟು - 2 ಚಮಚ,
ಗಸಗಸೆ - 1 ಚಮಚ, ಏಲಕ್ಕಿ ಪುಡಿ,
ತುಪ್ಪ – ¼ ಕಪ್
ಡ್ರೈ ಫ್ರೂಟ್ಸ್ ಅಂಟಿನ ಉಂಡೆ ತಯಾರಿಸುವ ವಿಧಾನ :
ಒಂದು ಬಾಣಲೆಯಲ್ಲಿ ಗಸಗಸೆ, ಕೊಬ್ಬರಿಯನ್ನು ಬೇರೆ ಬೇರೆ ಹುರಿದುಕೊಳ್ಳಬೇಕು. ನಂತರ ಅವೆರಡನ್ನು ಒಟ್ಟಿಗೆ ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಂಡು ಅದೇ ಬಾಣಲೆಗೆ 2 ಚಮಚದಷ್ಟು ತುಪ್ಪ ಹಾಕಿ ಬಾದಾಮಿ, ಗೋಡಂಬಿ, ದ್ರಾಕ್ಷಿ, ಖರ್ಜೂರ, ಉತ್ತುತ್ತೆ ಹಾಕಿ ಹುರಿದುಕೊಳ್ಳಬೇಕು. ಇದನ್ನು ಮೊದಲೇ ಹುರಿದಿಟ್ಟುಕೊಂಡಿರುವ, ಗಸಗಸೆ ಹಾಗೂ ಕೊಬ್ಬರಿಯೊಂದಿಗೆ ಸೇರಿಸಿ, ಖಾಲಿ ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಪುಡಿಮಾಡಿಟ್ಟುಕೊಂಡಿರುವ ಅಂಟು ಹಾಕಿ ಅದು ಉಬ್ಬುವವರೆಗೆ ಹುರಿಯಬೇಕು. ಅದನ್ನು ಡ್ರೈ ಫ್ರೂಟ್ಸ್ ನೊಂದಿಗೆ ಸೇರಿಸಿ ನಂತರ ಬಾಣಲೆಗೆ ಬೆಲ್ಲ ಹಾಗೂ ಸ್ವಲ್ಪ ನೀರನ್ನು ಹಾಕಿ ಬೆಲ್ಲ ಕರಗುವವರೆಗೆ ಕೈಯ್ಯಾಡಿಸಬೇಕು. ಎಳಪಾಕ ಬರುವವರೆಗೂ ಕುದಿಸಿದ ನಂತರ ಏಲಕ್ಕಿ ಪುಡಿ ಹಾಕಿ ಕೂಡಲೇ ಮೊದಲೇ ಹುರಿದಿಟ್ಟುಕೊಂಡಿರುವ ಡ್ರೈ ಫ್ರೂಟ್ಸ್ ಗಳ ಮಿಶ್ರಣವನ್ನು ಸೇರಿಸಿ ಬಿಸಿ ಇರುವಾಗಲೇ ಉಂಡೆ ಕಟ್ಟಬೇಕು.
ದಿನಕ್ಕೊಂದರಂತೆ ಈ ಉಂಡೆಗಳನ್ನು ತಿನ್ನುವುದರಿಂದ :
- ಜೀರ್ಣಶಕ್ತಿಗೂ ಸಹಾಯಕವಾಗುತ್ತದೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು.
- ಪ್ರತಿರೋಧಕ ಶಕ್ತಿ ಹೆಚ್ಚಿಸುವುದು.
- ರಕ್ತಹೀನತೆ ತಡೆಗಟ್ಟುತ್ತದೆ.
- ಮಕ್ಕಳು ಮತ್ತು ಶಿಶುಗಳಿಗೆ ಆರೋಗ್ಯಕರ ತೂಕವನ್ನು ಪಡೆಯಲು ಸಹಾಯ ಮಾಡುವುದು.
- ಮಲಬದ್ಧತೆಗೆ ಪರಿಹಾರವನ್ನು ಒದಗಿಸುತ್ತದೆ.
- ಕ್ಯಾಲ್ಸಿಯಂ ಮತ್ತು ವಿಟಮಿನ್ ಎ ಒಳಗೊಂಡಿರುತ್ತದೆ, ಮೂಳೆಗಳನ್ನು ಗಟ್ಟಿಯಾಗಲು ಸಹಾಯಕ.
- ಆರೋಗ್ಯಕರ ದೃಷ್ಟಿ ಪಡೆಯಬಹುದು.
- ಪುಟ್ಟ ಮಿದುಳಿನ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ.