Date: 14 Nov 2024 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜ್ಯೋತಿಷ್ಯ » ಆಧ್ಯಾತ್ಮಿಕ

ಕಾರ್ತೀಕ ಮಾಸದಲ್ಲಿ ದೀಪ ಹಚ್ಚಿದರೆ ಆಯುಸ್ಸು, ಆರೋಗ್ಯ, ಐಶ್ವರ್ಯ, ಜ್ಞಾನ, ಸೌಭಾಗ್ಯ, ಸಂಪತ್ತು ಪ್ರಾಪ್ತಿಯಾಗುತ್ತದೆ.


25 Nov 2020

ಸಂಜೆ ಹೊತ್ತು ದೇವರ ಮುಂದೆ ದೀಪ ಹಚ್ಚುವ ಪದ್ಧತಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದರಲ್ಲೂ ಕಾರ್ತೀಕ ಮಾಸದಲ್ಲಿ ದೀಪ ಹಚ್ಚಿ ಬೆಳಗುವುದಕ್ಕೆ ಹೆಚ್ಚು ಪ್ರಾಶಸ್ಯ ನೀಡಲಾಗಿದೆ. ಕಾರ್ತೀಕ ಮಾಸದಲ್ಲಿ ಕೃತ್ತಿಕಾ ನಕ್ಷತ್ರದಲ್ಲಿ ಸಾಯಂಕಾಲ ಚಿಕ್ಕ ಮತ್ತು ದೊಡ್ಡ ಅಣತೆ ದೀಪಗಳನ್ನು ಮನೆಯ ಒಳಗೂ, ಹೊರಗೂ ಮತ್ತು ಸುತ್ತಲೂ ಹಚ್ಚಬೇಕು ಎಂದು "ಜ್ಯೋತಿಸ್ಸಿದ್ಧಾಂತ"ದಿಂದ ತಿಳಿದುಬರುತ್ತದೆ. ಭಾರದ್ವಾಜ ಸ್ಮೃತಿಯಲ್ಲಿಯೂ ಕಾರ್ತೀಕ ಮಾಸದ ಹುಣ್ಣಿಮೆ ದಿನ, ದೀಪ ದಾನ ಮಾಡಬೇಕೆಂದು ಉಲ್ಲೇಖಿಸಿರುವುದರಿಂದ ಹುಣ್ಣಿಮೆ ತಿಥಿಯ ದಿನ ಸಾಯಂಕಾಲದಲ್ಲಿಯೇ ದೀಪೋತ್ಸವ ಆಚರಿಸಬೇಕೆಂದು ತಿಳಿದುಬರುತ್ತದೆ.

ದೀಪೋತ್ಸವ ರೀತಿಯನ್ನು "ಪಂಚರಾತ್ರ"ದಲ್ಲಿ ವಿಸ್ತಾರವಾಗಿ ಹೇಳಲಾಗಿದೆ. "ಜಗತ್ತಿಗೆ ಒಡೆಯನಾದ ಸರ್ವೋತ್ತಮನಾದ ಇಷ್ಟಾರ್ಥ ಕೊಡುವ ಸರ್ವ ಸಮರ್ಥನಾದ ಶ್ರೀ ಹರಿಯೇ! ದೀಪೋತ್ಸವ ಮಾಡುವ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನನಗೆ ಹೇಳುವ ಕೃಪೆ ಮಾಡು" ಎಂದು ಶ್ರೀ ಚತುರ್ಮುಖ ಬ್ರಹ್ಮದೇವರು ಪ್ರಾರ್ಥಿಸಿದಾಗ, ಶ್ರೀ ಹರಿ ಪರಮಾತ್ಮನು "ದೀಪೋತ್ಸವವು ಸಕಲ ಅಭೀಷ್ಟಗಳನ್ನೂ ಕೊಡುವಂತಹದ್ದಾಗಿದೆ. ಇಂತಹ ದೀಪೋತ್ಸವವನ್ನು ಯಾರು ಮಾಡುತ್ತಾರೋ ಅವರಿಗೆ ಜ್ಞಾನ ಅಭಿವೃದ್ಧಿಯಾಗುತ್ತದೆ. ಅವರ ಮನೆಯಲ್ಲಿ ನಿರಂತರವಾಗಿ ಸಕಲ ಸಂಪತ್ತು ಹೆಚ್ಚುತ್ತದೆ. ಯಾರು ದೀಪೋತ್ಸವವನ್ನು ಮಾಡುತ್ತಾರೋ ಅವರನ್ನು "ಯಮ"ನೂ ಕಣ್ಣೆತ್ತಿ ನೋಡುವುದಿಲ್ಲ. ಮಾನಸಿಕ ವ್ಯಥೆಯೂ ಅವರನ್ನು ಎಂದೂ ಪೀಡಿಸುವುದಿಲ್ಲ, ರೋಗಾದಿ ಉಪದ್ರವಗಳೂ ಕಾಡುವುದಿಲ್ಲ'' ಎಂದು ಹೇಳಿದ.

ಕಾರ್ತೀಕ ಶುಕ್ಲ ಹುಣ್ಣಿಮೆ ದಿನ ಸ್ನಾನಾದಿ ಕಾರ್ಯಕ್ರಮಗಳನ್ನು ಪೂರೈಸಿ ಶುಚಿಯಾಗಿ ಈ ಮಂತ್ರವನ್ನು ಉಚ್ಛರಿಸಬೇಕು. ಆ ಮಂತ್ರ ಹೀಗಿದೆ.
"ಆದ್ಯ ದೀಪೋತ್ಸವಂ ದೇವ ಕರಿಷ್ಯೆ ತ್ವತ್ಪ್ರಸಾದತಃ |
*ನಿರ್ವಿಘ್ನ೦  ಸಿದ್ಧಮಾಯಾತು ಯಥೋಕ್ತ ಫಲದೋ ಭವ ||

ಪರಮಾತ್ಮನೇ! ಈ ದಿನ ನಿನ್ನ ಅನುಗ್ರಹದಿಂದ ದೀಪೋತ್ಸವವನ್ನು ಮಾಡಲಿದ್ದೇನೆ. ದೀಪೋತ್ಸವವು ವಿಘ್ನವಿಲ್ಲದೇ ನಡೆಯುವಂತಾಗಲಿ. ನನಗೆ ನಿನ್ನ ಅನುಗ್ರಹದಿಂದ ದೀಪೋತ್ಸವದ ಶಾಸ್ತ್ರೋಕ್ತವಾದ ಫಲಗಳು ಉಂಟಾಗಲಿ. ಈ ಅಭಿಪ್ರಾಯದ ಮಂತ್ರವನ್ನು ಹೇಳಿ ಸಂಕಲ್ಪ ಮಾಡಬೇಕು.
ದೀಪವನ್ನು ಯಾವ ಪಾತ್ರೆಯಲ್ಲಿ ಹಚ್ಚಿ ದೇವರಿಗೆ ಸಮರ್ಪಿಸಿದರೆ ಅದರಿಂದ ಯಾವ ಫಲ ಸಿಗುತ್ತದೆ ಎಂಬ ಬಗ್ಗೆಯೂ ಇಲ್ಲಿ ಉಲ್ಲೇಖಿಸಲಾಗಿದೆ. ಕಬ್ಬಿಣ, ತಾಮ್ರ, ಕಂಚು ಮತ್ತು ಬಂಗಾರ ಮುಂತಾದವುಗಳಿಂದ ನಿರ್ಮಿತವಾಗಿರುವಂತಹ ಅಣತೆಗಳಿಂದ ದೀಪ ಬೆಳಗಬಹುದಾಗಿರುತ್ತದೆ.
ಪಾತ್ರಾ ವಿಶೇಷೇ - ಫಲ ವಿಶೇಷ
ದೇವತೆಗಳಿಗೆ ಅಧಿಪತಿಯಾದ ಬ್ರಹ್ಮನೇ !

  • ಯಾವನು ಮಣ್ಣಿನ ಪಾತ್ರೆಯಲ್ಲಿ ಹಸುವಿನ ತುಪ್ಪದಿಂದ ದೀಪ ಹಚ್ಚಿ ದಾನ ಮಾಡುತ್ತಾನೋ ಅಥವಾ ನನಗೆ ಅರ್ಪಿಸುತ್ತಾನೋ ಅವನು ಜ್ಞಾನಿಯೂ, ಯೋಗಿಯೂ, ಸುಖವಂತನೂ ಆಗುತ್ತಾನೆ.
  • ಕಬ್ಬಿಣದಿಂದ ನಿರ್ಮಿತವಾದ ಪಾತ್ರೆಯಿಂದ ಶ್ರೀಹರಿಗೆ ದೀಪವನ್ನು ಸಮರ್ಪಿಸಿದವನಿಗೆ ಅಂತಹ 100 ದೀಪಗಳನ್ನು ಅರ್ಪಿಸಿದರೆ ಮಾತ್ರವೇ ಫಲ ಸಿದ್ಧಿಯಾಗುತ್ತದೆ.
  • ಕಂಚಿನ ಪಾತ್ರೆಯಲ್ಲಿ ದೀಪವನ್ನು ಹಚ್ಚಿ ಯಾರು ಶ್ರೀಹರಿಯನ್ನು ಪೂಜಿಸುತ್ತಾರೋ ಅವರಿಗೆ ಒಳ್ಳೆಯ ತೇಜಸ್ಸು, ಉತ್ತಮವಾದ ಸೌಭಾಗ್ಯವೂ ಸಿಗುತ್ತದೆ.
  • ಯಾರು ತಾಮ್ರದ ಪಾತ್ರೆಯಲ್ಲಿ ದೀಪವನ್ನು ಹಚ್ಚಿ ಭಕ್ತಿಯಿಂದ ದಾನ ಮಾಡುತ್ತಾರೋ ಅಂತಹವರು 1000 ದೀಪಗಳನ್ನು ಹಚ್ಚಿ ಸಮರ್ಪಿಸಿದಾಗ ಉತ್ತಮ ಫಲಗಳನ್ನು ಪಡೆಯುತ್ತಾರೆ.
  • ಬೆಳ್ಳಿಯ ಪಾತ್ರೆಯಲ್ಲಿ ಯಾರು ದೀಪವನ್ನು ಹಚ್ಚಿ ಸಮರ್ಪಿಸುತ್ತಾರೋ ಅಂತಹವರಿಗೆ ಪುಣ್ಯವು ಲಕ್ಷ ಪಾಲು ಹೆಚ್ಚುತ್ತದೆ.
  • ಯಾರು ಬಂಗಾರದ ಪಾತ್ರೆಯಲ್ಲಿ ದೀಪವನ್ನು ಉರಿಸಿ ಶ್ರೀಹರಿಗೆ ಸಮರ್ಪಿಸುತ್ತಾರೋ ಅವರಿಗೆ ಅನಂತಾನಂತ ಫಲವು ಉಂಟಾಗುತ್ತದೆ.

    ದೇವಪಾರ್ಶ್ವೇ ಸ್ವರ್ಣರೌಪ್ಯತಾಮ್ರಕಾಂಸ್ಯಸಾಪಿಷ್ಟಕೈ: |
    ಅಲಾಭೇ ಮೃನ್ಮ ಯೇನಾಪಿ ದೀಪಾ ದೇಯಾ ವಿಚಕ್ಷನೈ ||

    ಅಂದರೆ, ದೇವರ ಪಾರ್ಶ್ವದಲ್ಲಿ ದೀಪ ಹಚ್ಚಲು ಬಂಗಾರ, ಬೆಳ್ಳಿ, ತಾಮ್ರ, ಕಂಚು ಅಥವಾ ಹಿಟ್ಟು ಇವುಗಳಿಂದ ದೀಪದ ಪಾತ್ರೆಯನ್ನು ಮಾಡಬೇಕು. ಹೀಗೆ ಮಾಡಲು ಸಾಧ್ಯವಾಗದಿದ್ದರೆ ಮಣ್ಣಿನಿಂದ ಮಾಡಿದ ದೀಪದ ಪಾತ್ರೆಯನ್ನು ಸಂಗ್ರಹಿಸಬೇಕು. ಆಯಾ ದೀಪದ ಪಾತ್ರೆಗಳಲ್ಲಿ ಶ್ರೀಹರಿಯನ್ನು ನೆನೆದು ದೀಪಗಳನ್ನು ಹಚ್ಚಿ ಅವನಿಗೆ ಸಮರ್ಪಿಸಬೇಕು.

  • ಯಾರು ಪರಿಶುದ್ಧವಾದ ಮನಸ್ಸುಳ್ಳವರಾಗಿ ನನಗೆ (ಶ್ರೀಹರಿಗೆ) "ಕರ್ಪೂರದ ದೀಪ" ಸಮರ್ಪಿಸುತ್ತಾರೋ 100 ವರ್ಷದವರೆಗೂ ಅವರ ಪುಣ್ಯದ ಕೊಡ ತುಂಬಿಯೇ ಇರುತ್ತದೆ.
  • "ಹಸುವಿನ ತುಪ್ಪ"ದಿಂದ ದೀಪವನ್ನು ಹಚ್ಚಿದರೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ.
  • "ಕುಸುಬೆ ಎಣ್ಣೆ"ಯಿಂದ ದೀಪವನ್ನು ಬೆಳಗಿಸಿದರೆ ಅಮಂಗಲ ಪರಿಹಾರವಾಗುತ್ತದೆ ಮತ್ತು ಕೀರ್ತಿಯೂ ಹೆಚ್ಚುತ್ತದೆ.
  • "ಕೊಬ್ಬರಿ ಎಣ್ಣೆ"ಯಿಂದ ದೀಪವನ್ನು ಹಚ್ಚಿದರೆ ಸೌಖ್ಯವು ಹೆಚ್ಚಾಗುತ್ತದೆ.

ಇದು ನಿಷಿದ್ಧ:
ಹರಳೆಣ್ಣೆ ಮತ್ತು ಎಮ್ಮೆಯ ತುಪ್ಪವನ್ನು ದೀಪ ಹಚ್ಚಲು ಸರ್ವಥಾ ಉಪಯೋಗಿಸಬಾರದು.

ದೀಪದ ಬತ್ತಿಯ ಮಹತ್ವ

  • ತಾವರೆ ನಾರಿನಿಂದ ಬತ್ತಿಯನ್ನು ಮಾಡಿ ದೀಪ ಉರಿಸಿದರೆ ಸಾರ್ವಭೌಮತ್ವವೂ, ಎಲ್ಲಾ ಅಭಿಲಾಷೆಗಳೂ ಸಿದ್ಧಿಯಾಗುತ್ತವೆ.
  • ಅಗಸೆ ನಾರಿನಿಂದ ಬತ್ತಿಯನ್ನು ಮಾಡಿ ದೀಪ ಹಚ್ಚಿದರೆ ಆಯಾಸ ದೂರವಾಗಿ ನಿತ್ಯ ಯೌವನ ಪ್ರಾಪ್ತವಾಗುತ್ತದೆ.
  • ಹತ್ತಿಯ ದೀಪವನ್ನು ಹಚ್ಚಿದರೆ ಪಾಪವು ನಾಶವಾಗಿ ಪುಣ್ಯ ಅಭಿವೃದ್ಧಿಯಾಗುತ್ತದೆ. ಹೀಗೆ ನಾರಿನಿಂದ ಮಾಡಿದ ಬತ್ತಿಯಿಂದ ದೀಪ ಹಚ್ಚಿದರೆ ಭಕ್ತಿಯ ಸಂಪೂರ್ಣ ಫಲ ಸಿಗುತ್ತದೆ. ಅಂತಹವರಿಗೆ "ಅಶ್ವಮೇಧ ಯಾಗ"ದ ಫಲವೂ ಉಂಟಾಗುತ್ತದೆ.

ಒಟ್ಟಿನಲ್ಲಿ ಯಾರು ಕಾರ್ತೀಕ ಮಾಸದಲ್ಲಿ ಶ್ರೇಷ್ಠವಾದ ದೀಪೋತ್ಸವವನ್ನು ಮಾಡುವುದಿಲ್ಲವೋ ಅಂತಹವರು ಒಂದು ವರ್ಷ ಮಾಡಿದ ಪೂಜೆಯು ಖಂಡಿತವಾಗಿಯೂ ನಿಷ್ಫಲವಾಗುತ್ತದೆ. ಆದ್ದರಿಂದ ಮಂತ್ರ - ತಂತ್ರ ವಿಧಿಗಳಿಂದ ದೀಪೋತ್ಸವ ಮಾಡಬೇಕು. ಇದರಿಂದ ಆಯುಸ್ಸು, ಆರೋಗ್ಯ, ಐಶ್ವರ್ಯ, ಜ್ಞಾನ, ಸೌಭಾಗ್ಯ, ಸಂಪತ್ತು ಪ್ರಾಪ್ತಿಯಾಗುತ್ತದೆ. ಮಹಾಲಕ್ಷ್ಮೀ ಪತಿಯಾದ ಶ್ರೀಮನ್ನಾರಾಯಣನ ಪರಮಾನುಗ್ರಹ ನಿತ್ಯವೂ ದೊರೆಯುತ್ತದೆ.

Share on:

City Information

(Private)