(5 ಜನರಿಗೆ)
ಕಡಲೆಪುರಿ ಉಸಲಿ ಬೇಕಾದ ಸಾಮಗ್ರಿಗಳು :
ತೆಳು ಕಡಲೆಪುರಿ 8 ಲೀಟರ್
ಕ್ಯಾರೆಟ್ ತುರಿ, ತೆಂಗಿನ ತುರಿ
ಕೊತ್ತಂಬರಿ ಸೊಪ್ಪು, ನಿಂಬೆರಸ
ಹುರುಗಡ್ಲೆ ಪುಡಿ 1/4 ಬಟ್ಟಲು
ಕಡಲೆಪುರಿ ಉಸಲಿ ಮಾಡುವ ವಿಧಾನ :
- ಅಗಲವಾದ ಪಾತ್ರೆಯಲ್ಲಿ ಕಡಲೆಪುರಿ 3 ನಿಮಿಷ ನೆನೆಸಿ ಹಿಂಡಿ ತಟ್ಟೆಯಲ್ಲಿ ಇಡುವುದು.
- ಬಾಂಡ್ಲಿಯಲ್ಲಿ 2 ಟೇಬಲ್ ಸ್ಪೂನ್ ಎಣ್ಣೆ ಬಿಸಿಮಾಡಿ ಸಾಸಿವೆ, ಕರಿಬೇವು ಈರುಳ್ಳಿ 2 ಹೆಚ್ಚಿದ್ದು, ಹಸಿಮೆಣಸಿನಕಾಯಿ 8 ಹೆಚ್ಚಿದ್ದು, ಅರಿಶಿಣ ಅರ್ಧ ಟೀ ಸ್ಪೂನ್, ಟೊಮೆಟೊ 2 ಹೆಚ್ಚಿದ್ದು ಸೇರಿಸಿ ಚೆನ್ನಾಗಿ ಬೇಯಿಸುವುದು ನಂತರ
- ನೀರು ಹಿಂಡಿದ ಕಡಲೆಪುರಿ ಸೇರಿಸಿ 2 ನಿಮಿಷ ಮಿಕ್ಸ್ ಮಾಡಿ ಕೆಳಗಿಳಿಸಿ.
- ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಕ್ಯಾರೆಟ್ ನಿಂಬೆರಸ, ಹುರಿಗಡಲೆ ಹಿಟ್ಟು ಸೇರಿಸಿ ಮಿಶ್ರಣ ಮಾಡುವುದು.
ಸೂಚನೆ : ಕಡಲೆಪುರಿಯನ್ನು ಜಾಸ್ತಿ ಹೊತ್ತು ನೆನೆಸಿ ಮಾಡಿದರೆ ರುಚಿ ಇರುವುದಿಲ್ಲ