- ನೀವು ನಿವೇಶನ ಬುಕ್ ಮಾಡಲು ನೋಡಿರುವ ಲೇಔಟ್ನಲ್ಲಿ ಅಕ್ಕ ಪಕ್ಕ ಕೆರೆ, ಒತ್ತುವರೆ ಪ್ರದೇಶ ಇದ್ದರೆ ಗಮನಿಸಿ.
- ಲೇಔಟ್ ಎತ್ತರ, ತಗ್ಗು ಪ್ರದೇಶ ಇದ್ದರೆ ಮಳೆ ಕಾಲದಲ್ಲಿ ಸಮಸ್ಯೆಯಾಗುತ್ತದೆ. ಸಮತಟ್ಟಾಗಿದ್ದರೆ ಒಳ್ಳೆಯದು.
- ಸೈಟಿನ ಜಾಗ ಯಾರ ಹೆಸರಿನಲ್ಲಿ ಇದೆ, ಭೂಮಿಯ ಒರಿಜಿನಲ್ ಮಾಲೀಕರು ಯಾರು ತಿಳಿದುಕೊಳ್ಳಿ.
- ಲೇಔಟ್ ಪ್ಲಾನ್ ಅಂಗೀಕೃತವಾಗಿದೆಯೇ ಚೆಕ್ ಮಾಡಿ.
- ಬಿಎಂಆರ್ ಡಿಎದಿಂದ ಮಾನ್ಯತೆ ಪಡೆದಿದ್ದರೆ ಪರಿಶೀಲನೆ ಮಾಡಿಸಿ.
- ನೋಂದಣಿ ಆಗುವುದಿದ್ದರೆ ಇ-ಖಾತಾ ಸಿಗುತ್ತಾ ನೋಡಬೇಕು.
- ಬ್ಯಾಂಕಿನಲ್ಲಿ ಈ ಲೇಔಟ್ಗೆ ಹೋಮ್ ಲೋನ್ ದೊರೆಯುತ್ತಾ ಕೇಳಬೇಕು.
- ಮುನ್ನೇಚ್ಚರಿಕೆ ಕ್ರಮವಾಗಿ ಕಾನೂನಾತ್ಮಕವಾಗಿ ದಾಖಲೆಗಳನ್ನು ಪರಿಶೀಲನೆ ಮಾಡಿಸಿ.