ಕನ್ನಡಕ್ಕೆ ಜಗತ್ತಿನ ಎಲ್ಲ ಜ್ಞಾನಧಾರೆಗಳು ಬರಬೇಕು ಎನ್ನುವ ಆಶಯವನ್ನು ಆಗುಮಾಡುವ ಒಂದು ಪ್ರಯತ್ನ: ‘‘ಋತ’ ಮಾಸಿಕ.
ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಪರಿಸರ-ಜೀವಶಾಸ್ತ್ರ, ಆಟೋಟ, ಕಲೆ-ಸಂಸ್ಕೃತಿ, ಶಿಕ್ಷಣ ಸೇರಿದಂತೆ ನಮ್ಮ ದೈನಂದಿನ ಬದುಕನ್ನು ಪ್ರಭಾವಿಸುವ-ಭಾಗವಾಗಿರುವ ಎಲ್ಲ ಜ್ಞಾನಶಾಖೆಗಳ ಕುರಿತು ಚರ್ಚೆ-ಸಂವಾದ ನಮ್ಮ ಉದ್ದೇಶ. ಕಾಲಕ್ಕೆ ತಕ್ಕ ಹೊಸ ಪರಿಭಾಷೆ - ನುಡಿಗಟ್ಟುಗಳನ್ನು ಕಟ್ಟಿಕೊಳ್ಳುವುದು,
ಆ ಮೂಲಕ ಜಗತ್ತನ್ನು ಅರ್ಥೈಸುವುದು ಮತ್ತು ಬದುಕನ್ನು ಪ್ರೀತಿಸುವುದು, ಬರೆಯುವ ಹಂಬಲ ಇರುವ ಹೊಸ ಲೇಖಕರು ಹಾಗೂ ಜ್ಞಾನದ ಹಸಿವು ಇರುವ ಓದುಗರನ್ನು ತಲುಪುವುದು ನಮ್ಮ ಗುರಿ. ಅಸಹನೆ ದೈನಂದಿನ ಭಾಗವಾಗಿರುವ ಇಂದಿನ ಜಗತ್ತಿನಲ್ಲಿ ಸಂವಾದವನ್ನು ಆರಂಭಿಸುವ ಹಾಗೂ ಮುನ್ನಡೆಸುವ ವೇದಿಕೆ - ಮನಸ್ಸುಗಳನ್ನು ಸೃಷ್ಟಿಸಲು ನಾವು ಗೆಳೆಯರು ನೀಡುತ್ತಿರುವ ಕಿರು ಕಾಣೆಕೆ ‘‘ಋತ’ ಮಾಸಿಕ.
ನಮ್ಮದು ಬಹು ಧರ್ಮ, ಭಾಷೆ, ಜನಾಂಗಗಳು, ನಂಬಿಕೆಗಳು ಮತ್ತು ಸಂಸ್ಕೃತಿಗಳು ಇರುವ ದೇಶ. ಇಲ್ಲಿ ಹಲವು ಧರ್ಮಗಳು ಉದಯಿಸಿವೆ, ಜ್ಞಾನ ಪರಂಪರೆಗಳು ಪಲ್ಲವಿಸಿವೆ. ಸಾರ್ವಜನಿಕ ಹಿತಾಸಕ್ತಿ ಮತ್ತು ಪ್ರಜಾಸತ್ತಾತ್ಮಕ ಆಶಯಗಳನ್ನು ಎತ್ತಿಹಿಡಿಯುವುದು ನಮ್ಮ ಧ್ಯೇಯ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ನಮ್ಮ ಆದರ್ಶ. ನಮಗೆ ಯಾವುದೇ ಧರ್ಮ, ಜಾತಿ, ಪಂಗಡ, ಭಾಷೆ ಇಲ್ಲವೇ ರಾಜಕೀಯ ಸಿದ್ಧಾಂತದ ಹಂಗು ಇಲ್ಲ. ಎಲ್ಲ ನಂಬಿಕೆಗಳು, ವಾದಗಳು, ಸಿದ್ಧಾಂತಗಳು ಮತ್ತು ನಿಲುವುಗಳ ಕುರಿತು ಚರ್ಚೆ ಹಾಗೂ ಸಂವಾದಕ್ಕೆ ವೇದಿಕೆಯಾಗುವುದು ನಮ್ಮ ಉದ್ದೇಶ. ಸಂವಾದವನ್ನು ಗಾಂಭೀರ‌್ಯದಿಂದ ಘನತೆಯನ್ನು ಕಳೆದುಕೊಳ್ಳದೆ ನಡೆಸಬೇಕು ಎನ್ನುವುದು ನಮ್ಮ ನಿಲುವು.
ಪ್ರತಿ ಸಂಚಿಕೆ ಒಬ್ಬ ಚಿಂತಕ, ಒಂದು ಸಮಸ್ಯೆ ಇಲ್ಲವೇ ಒಂದು ತತ್ತ್ವ-ಸಿದ್ಧಾಂತದ ಬಗ್ಗೆ ಇರಲಿದೆ, ಈ ಕುರಿತು ಎಲ್ಲ ದೃಷ್ಟಿಕೋನಗಳನ್ನು ಪರಿಚಯಿಸುವುದು, ಸಂವಾದ ಹಾಗೂ ಚರ್ಚೆಗೆ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ. ಋತ ನಿಮ್ಮ ಪತ್ರಿಕೆ.
ನಿಮಗೆ ನಮ್ಮ ಪ್ರಯತ್ನಗಳಲ್ಲಿ ಕೈ ಜೋಡಿಸಬೇಕು ಎನಿಸಿದಲ್ಲಿ ನಿಮ್ಮ ಸಂಸ್ಥೆ/ ಉತ್ಪನ್ನಗಳ ಕುರಿತು ಜಾಹೀರಾತು ನೀಡುವ ಮೂಲಕ ಗುಣಮಟ್ಟದ ಓದುಗರನ್ನು ತಲುಪಬಹುದು. ಚಂದಾದಾರರಾಗುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬಹುದು. ನೀವು ಚಂದಾದಾರರಾಗುವ/ಜಾಹೀರಾತು ನೀಡುವ ಮೂಲಕ ಬೆಳೆಸಬೇಕು ಎಂದು ಮನವಿ.