(ಅಕ್ಕಿ ಶ್ಯಾವಿಗೆ 5 ಜನರಿಗೆ ಆಗುವ ಹಾಗೆ) :
ಅಕ್ಕಿಶಾವಿಗೆ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು :
ಅಕ್ಕಿ ಶ್ಯಾವಿಗೆ - 200 ಗ್ರಾಂ
ಉಪ್ಪು - 1 ಟೀ ಸ್ಪೂನ್
ಸಕ್ಕರೆ - 1 ಟೀ ಸ್ಪೂನ್
ಬಟಾಣಿ ಬೇಯಿಸಿದ್ದು - 1/4 ಬಟ್ಟಲು
ಕೊತ್ತಂಬರಿ ಸೊಪ್ಪು - 1/2 ಕಟ್ಟು
ತೆಂಗಿನತುರಿ - 1 ಬಟ್ಟಲು
ನಿಂಬೆ ರಸ - 2 ಟೀ ಸ್ಪೂನ್
ಅಕ್ಕಿಶಾವಿಗೆ ಉಪ್ಪಿಟ್ಟು ಮಾಡುವ ವಿಧಾನ :
ಬಾಂಡ್ಲಿಯಲ್ಲಿ 2 ಟೇಬಲ್ ಸ್ಪೂನ್ ಎಣ್ಣೆ ಬಿಸಿಮಾಡಿ ಸ್ವಲ್ಪ ಉದ್ದಿನ ಬೇಳೆ, ಕಡ್ಲೆಬೇಳೆ, ಹಸಿ ಮೆಣಸಿನಕಾಯಿ ಸೀಳಿದ್ದು 4, ಹಸಿ ಮೆಣಸಿನಕಾಯಿ ಹೆಚ್ಚಿದ್ದು 2, ಈರುಳ್ಳಿ ಉದ್ದಕ್ಕೆ ಹೆಚ್ಚಿದ್ದು 2, ಗೋಡಂಬಿ 25 ಗ್ರಾಂ ಅರಿಶಿಣ ಅರ್ಧ ಟೀ ಸ್ಪೂನ್ ಸೇರಿಸಿ ಚೆನ್ನಾಗಿ ಹುರಿಯಿರಿ
ನಂತರ ಇದಕ್ಕೆ ಬೇಯಿಸಿದ ಬಟಾಣಿ, ಉಪ್ಪು, ಸಕ್ಕರೆ, 1 ಟೀ ಸ್ಪೂನ್ ಬೆಂದ ಶ್ಯಾವಿಗೆ ಸೇರಿಸಿ ಚೆನ್ನಾಗಿ ಹುರಿಯಿರಿ ನಂತರ ಇದಕ್ಕೆ ಬೇಯಿಸಿದ ಬಟಾಣಿ, ಉಪ್ಪು, ಸಕ್ಕರೆ 1 ಟೀ ಸ್ಪೂನ್ ಬೆಂದ ಶ್ಯಾವಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿರಿ
ನಂತರ ನಿಂಬೆರಸ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಸೇರಿಸಿ ಮನೆ ಮಂದಿಗೆಲ್ಲಾ ಸವಿಯಲು ಕೊಡಿ.