- OC, CC ಮತ್ತು RERA ಅನುಮೋದನೆ ಆಗಿರುವುದನ್ನು ಖಚಿತ ಪಡಿಸಿಕೊಳ್ಳಿ.
- ಅಪಾರ್ಟ್ ಮೆಂಟ್ ಬುಕ್ ಮಾಡುವ ಮೊದಲೇ ಕಡ್ಡಾಯವಾಗಿ ಕಾನೂತ್ಮಕ ದಾಖಲೆಗಳನ್ನು ವಕೀಲರ ಬಳಿ ಪರಿಶೀಲನೆ ನಡೆಸಬೇಕು.
- ಅಪಾರ್ಟ್ ಮೆಂಟ್ ಗೆ ಬ್ಯಾಂಕಿನಿಂದ ಪ್ರಾಜೆಕ್ಟ್ ಅನುಮೋದಿಸಲಾಗಿದೆಯೇ ಎಂದು ತಿಳಿದುಕೊಳ್ಳಿ.
- ನೀವು ಖರೀದಿ ಮಾಡುವ ರಿಯಲ್ ಎಸ್ಟೇಟ್ ಸಂಸ್ಥೆ ನಂಬಿಕೆ, ವಿಶ್ವಾಸ, ಪೂರ್ವಾಪರವನ್ನು google, youtube ನಲ್ಲಿ ವಿಮರ್ಶೆ ಚೆಕ್ ಮಾಡಿ ಹಾಗೇ quora, facebook ನಲ್ಲೂ ಚೆಕ್ ಮಾಡಿ, ಹಿಂದೆ ಖರೀದಿ ಮಾಡಿದ ಇತರೆ ಗ್ರಾಹಕರ ಏನಾದರೂ ಸಿಕ್ಕರೆ ಅವರಲ್ಲೂ ಒಮ್ಮೆ ತಿಳಿದುಕೊಳ್ಳಿ
- ರಿಯಲ್ ಎಸ್ಟೇಟ್ ಸಂಸ್ಥೆಯ ಆರ್ಥಿಕ ಸ್ಥಿತಿಗತಿ ತಿಳಿದುಕೊಳ್ಳಿ
- ಅಪಾರ್ಟ್ ಮೆಂಟ್ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಾಗ ಭೇಟಿ ನೀಡಿ ಪರಿಶೀಲನೆ ಮಾಡಬೇಕು
- ನಿಗದಿತ ಸಮಯಕ್ಕೆ ಅಪಾರ್ಟ್ ಮೆಂಟ್ ಸಿಗಬೇಕೆಂದು ಒತ್ತಡ ಹೇರಬೇಕು
- ಸಮಯಕ್ಕೆ ಸರಿಯಾಗಿ ಪ್ಲಾಟ್ ದೊರೆಯದೆ, ಕಾನೂತ್ಮಕ ಎಡವಟ್ಟು ಕಂಡುಬಂದರೆ ಕೂಡಲೇ ಕೋರ್ಟ್ ಮೆಟ್ಟಿಲೇರಬೇಕು
- ಸಮಸ್ಯೆ ಬಂದಾಗ ಅದೇ ಅಪಾರ್ಟ್ ಮೆಂಟ್ ಖರೀದಿ ಮಾಡುತ್ತಿರುವ ಇತರ ಗ್ರಾಹಕರನ್ನು ಒಟ್ಟಾಗಿ ಸೇರಿಸಿಕೊಂಡು ಎದುರಿಸಬೇಕು.