ಕೇರಳದಲ್ಲಿ ಪ್ರಕೃತಿಯಂತೆಯೇ ಅಲ್ಲಿನ ತಿನಿಸುಗಳೂ ಬಲು ಸೊಗಸು. ಕೇರಳೀಯರ ವಿಶಿಷ್ಟ ವಿಶೇಷ ರೆಸಿಪಿ ಉನ್ನಿ ಅಪ್ಪಂ
ಮಾಡಲು ಬೇಕಾಗುವ ಸಾಮಗ್ರಿಗಳು :
ಅಕ್ಕಿ ಹಿಟ್ಟು - 2 ಕಪ್
ಮೈದಾ ಹಿಟ್ಟು - 1/2 ಕಪ್
ಬಾಳೆಹಣ್ಣು - 2
ಬೆಲ್ಲದ ಪುಡಿ - 1 1/2 ಕಪ್
ತುಪ್ಪ - 4 ಚಮಚ
ಏಲಕ್ಕಿ ಪುಡಿ - 1 ಚಮಚ
ಚಕ್ಕೆ ಪುಡಿ - 2 ಚಮಚ
ತೆಂಗಿನ ಚೂರು, ಎಣ್ಣೆ
ಉನ್ನಿ ಅಪ್ಪಂ ಮಾಡುವ ವಿಧಾನ :
ಪಾತ್ರೆಯಲ್ಲಿ ಒಂದು ಕಪ್ ನೀರು ಹಾಕಿ ಕುದಿಯಲು ಆರಂಭಿಸಿದ ನಂತರ ಬೆಲ್ಲದ ಪುಡಿ ಬೆರೆಸಬೇಕು. ಬೆಲ್ಲಕರಗಿ ಪಾಕದಂತೆ ಆಗುವ ತನಕ ಕಾಯಿಸಿ ನಂತರ ತೆಂಗಿನ ಕಾಯಿಯನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ ತುಪ್ಪದಲ್ಲಿ ಹುರಿಯಬೇಕು. ನಂತರ ಅದನ್ನು ಬೆಲ್ಲದ ಪಾಕಕ್ಕೆ ಬೆರೆಸಿ ಸಣ್ಣ ಉರಿಯಲ್ಲಿ ಕಾಯಿಸಬೇಕು.
ಇದೇ ಸಮಯದಲ್ಲಿ ಅಕ್ಕಿ ಹಿಟ್ಟುಮತ್ತು ಮೈದಾ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಕಲೆಸಿಟ್ಟು ಕೊಳ್ಳಬೇಕು. ನಂತರ ಬಾಳೆಹಣ್ಣನ್ನು ಚೆನ್ನಾಗಿ ಹಿಸುಕಿ ಅದನ್ನು ಬೇಯುತ್ತಿರುವ ಬೆಲ್ಲದ ಪಾಕಕ್ಕೆ ಹಾಕಿ 2 ನಿಮಿಷ ಕಾಯಿಸಿ ಕೆಳಗಿಳಿಸಬೇಕು. ಈಗ ಬೆಲ್ಲದ ಮಿಶ್ರ ಣವನ್ನು ಅಕ್ಕಿ ಹಿಟ್ಟಿನೊಂದಿಗೆ ಬೆರೆಸಿ ಚೆನ್ನಾಗಿ ಕಲೆಸಬೇಕು. ಏಲಕ್ಕಿ ಮತ್ತು ಚೆಕ್ಕೆ ಪುಡಿಯನ್ನೂ ಮಿಶ್ರಣ ಮಾಡಿ ಕಲೆಸಬೇಕು.
ನಂತರ ಸ್ವಲ್ಪ ಗಟ್ಟಿಯಾಗಿರುವ ಈ ಮಿಶ್ರಣವನ್ನು ಅಪ್ಪಂ ಮೇಕರ್ ನಿಂದ ಆಕಾರ ಕೂಟ್ಟು ಒಂದು ಗಂಟೆ ಹಾಗೇ ಬಿಡಬೇಕು. ಈಗ ಅಪ್ಪಂಗಳನ್ನು ಎಣ್ಣೆ ಅಥವಾ ತುಪ್ಪದಲ್ಲಿ ಎರಡೂ ಕಡೆ ಕರೆದರೆ ಉನ್ನಿ ಅಪ್ಪಂ ತಿನ್ನಲು ಸಿದ್ಧ.