Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜ್ಯೋತಿಷ್ಯ » ವಾಸ್ತು

ಮನೆಯ ಎದುರಿಗೇ ರಸ್ತೆ ಇರಬಹುದಾ? ವಾಸ್ತು ಪ್ರಕಾರ ಶುಭವೋ ಅಥವಾ ಆಶುಭವೋ


25 Oct 2020

ನಮ್ಮ ವೈಯುಕ್ತಿಕ ಏರಿಳಿತಗಳ ಸಂಬಂಧವಾಗಿ ಮನೆ ಎದುರಿನ ಏಕ ಒಂದೇ ರಸ್ತೆಗಿಂತ ಎರಡು ರಸ್ತೆಗಳು ಒಂದು ಇನ್ನೊಂದನ್ನು ಕೂಡಿರುವುದು, ಛೇದಿಸಿರುವುದು ಸೂಕ್ತ. ಒಂದೇ ರಸ್ತೆಯಾದರೆ ಅದು ತನ್ನ ನಕಾರಾತ್ಮಕ ಭಾವವನ್ನು ಬೇರೆಡೆಗೆ ಎಸೆಯಲಾಗದೆ ನಿಮ್ಮ ಮನೆಗೇ ನೇರ ಹಾಕಬಹುದು.

ರಸ್ತೆಗಳು ಯಾವಾಗಲೂ ಸಾರ್ವಜನಿಕರು ಓಡಾಡುವ ಜಾಗವಾದರೂ ಓಡಾಡುವ ಜನರ ದೃಷ್ಟಿ ಚಿಂತನ ಸ್ವಭಾವಗಳು ಅಲ್ಲಿನ ಸಮೀಪದ ಮನೆಗಳ ಮೇಲೂ ಪ್ರಭಾವ ಬೀರುತ್ತವೆ. ರಸ್ತೆಗಳ ಸಂಖ್ಯೆಯು ತನ್ನದೇ ಆದ ಪ್ರಭಾವವನ್ನು ಮನೆಯ ಯಜಮಾನನ ಸಂಖ್ಯಾಭಾವಗಳ ಮೇಲೆ ತನ್ನದೇ ಆದ ಹಿಡಿತಗಳನ್ನು ಹೊಂದಿರುತ್ತದೆ. ರಸ್ತೆಗಳ ನಿರ್ಮಾಣದ ರೀತಿ ನೀತಿಗಳು ಪ್ರಮುಖವೇ ಆಗಿರುತ್ತವೆ. ಇದರಿಂದಾಗಿ ನಮ್ಮ ವೈಯುಕ್ತಿಕ ಏರಿಳಿತಗಳ ಸಂಬಂಧವಾಗಿ ಮನೆ ಎದುರಿನ ಏಕ ಒಂದೇ ರಸ್ತೆಗಿಂತ ಎರಡು ರಸ್ತೆಗಳು ಒಂದು ಇನ್ನೊಂದನ್ನು ಕೂಡಿರುವುದು ಛೇದಿಸುವುದು ಸೂಕ್ತ.

ನಿಮ್ಮ ಮನೆಗೆ ಉತ್ತರಕ್ಕೋ ಪೂರ್ವಕ್ಕೋ ಇರುವ ರಸ್ತೆಗಳು ಉತ್ತಮ ಹಾಗೂ ಅದೃಷ್ಟವೇ ಸರಿ. ನೀವು ಪೂರ್ವದಿಂದ ಸಂಚರಿಸಿ ಆಗ್ನೇಯಕ್ಕೆ ಹೊರಳಿಕೊಳ್ಳುವಂತಿದ್ದರೆ ಇದು ಮನಸ್ಸಿನ ಸಮಾಧಾನಕ್ಕೆ ಯೋಗ್ಯ. ನಿಮ್ಮ ಮನೆಯ ಭಾಗದಿಂದ ನೇರವಾಗಿ ಈಶಾನ್ಯ ಪೂರ್ವ ಉತ್ತರ ದಿಕ್ಕುಗಳನ್ನು ಕ್ರಮಿಸುವ ರೀತಿಯ ರಸ್ತೆ ಇದ್ದರೆ ಅದು ಚೆಂದ ಹಾಗೂ ಅಪೇಕ್ಷಣೀಯ. ರಸ್ತೆಯಲ್ಲಿ ಜನನಿಬಿಡ ದಟ್ಟಣೆ ಉಪಯುಕ್ತ. ಮನೆಯೆದುರು ಇರುವ ಪೂರ್ವ ರಸ್ತೆಗೆ ಪೂರ್ವದ ಕಡೆಯನ್ನು ಒಳಗೊಳ್ಳುವ ಈಶಾನ್ಯ ದಿಕ್ಕಿಗೆ ಗೇಟ್‌ ಇಡುವುದು ಉತ್ತಮ. ಕೇವಲ ಪೂರ್ವಕ್ಕೇ ನೇರ ದಟ್ಟ ಸಾಂದ್ರ ಗೇಟು ರಚಿಸುವುದೂ ಒಳ್ಳೆಯದೇ.

ದಕ್ಷಿಣದ ಕಡೆಯ ರಸ್ತೆ ಇದ್ದರೆ ದಕ್ಷಿಣವೂ ದಕ್ಷಿಣ ಭಾಗವೂ ಹೆಚ್ಚಿನಂಶ ಸಿಗುವಂತ ಆಗ್ನೇಯ ದಿಕ್ಕಲ್ಲಿ ಗೇಟ್‌ ಉತ್ತಮ. ದಕ್ಷಿಣವನ್ನೇ ಪೂರ್ತಿ ಬಳಸಿಕೊಳ್ಳುವುದಾದರೆ ನಡುವೆ ದಕ್ಷಿಣದ ಸಾಂದ್ರತೆ ಉತ್ತಮ. ಪಶ್ಚಿಮದ ರಸ್ತೆ ಇದ್ದಲ್ಲಿ ನೇರ ಪಶ್ಚಿಮದ ನಡುಭಾಗದ ಗೇಟು ಉತ್ತಮ. ಇಲ್ಲವೇ ಪಶ್ಚಿಮವು ಅಧಿಕವಾಗಿ ದೊರಕುವ ವಾಯವ್ಯ ಭಾಗದಲ್ಲಿ ಗೇಟು ಇರುವಂತಾಗಲಿ. ಉತ್ತರದ ಕಡೆಯ ರಸ್ತೆ ಇದ್ದರೆ ನೇರ ಉತ್ತರದ ನಡುಭಾಗದಲ್ಲಿ ಗೇಟು ಇರಲಿ. ಇಲ್ಲವೇ ಉತ್ತರ ವಿಸ್ತಾರಕ್ಕೆ ಒಳಗೊಳ್ಳುವಂತೆ ಈಶಾನ್ಯದಲ್ಲಿ ಗೇಟು ಕೂಡಿಬರಲಿ.
ಗೇಟುಗಳು ಯಾವಾಗಲೂ ಸಂರಕ್ಷಣಾ ಘಟಕಗಳಾಗಿ ತಮ್ಮ ಕಾರ್ಯ ನಿರ್ವಹಿಸುತ್ತವೆ. ಇವುಗಳ ಬಣ್ಣ, ದಪ್ಪ ಎತ್ತರ ಅಗಲಗಳು ಮನೆಯ ವಿಸ್ತಾರವನ್ನೂ ಒಟ್ಟೂ ವಿಸ್ತೀರ್ಣವನ್ನು ಅವಲೋಕಿಸಿ ಅಳತೆಗಳನ್ನು ಹೊಂದಿರಬೇಕಾದ್ದು ಜರೂರಾಗಿದೆ.

ಈಗಿನ ಹೊಸ ಟ್ರೆಂಡ್ ಎಂಬ ಹೆಸರಿನಲ್ಲಿ ಚಿತ್ರ ರೀತಿಯ ಪಟ್ಟಿ ವರ್ತುಲಗಳ ಚೌಕಗಳನ್ನೊಳಗೊಂಡ ಗೇಟುಗಳನ್ನು ಬಳಸುವ ಹೊಸ ಹೊಸ ವಿನ್ಯಾಸಗಳನ್ನು ಹುಟ್ಟು ಹಾಕುತ್ತಿದೆ. ಗೇಟು ಎಂಬುದು ನಮ್ಮ ಧನಶಕ್ತಿಯನ್ನು ತೋರಿಸುವ ಆಡಂಬರ ಹೊಂದಿರುವುದು ಅವಶ್ಯಕವಾಗಿಲ್ಲ. ಗೇಟುಗಳು ಹೊರಭಾಗದ ಸುರಕ್ಷಿತ ದೂರವಾದ ಸ್ಪಂದನಗಳನ್ನು ತಡೆಗಟ್ಟುವಂತಿರಬೇಕು. ಪೂರ್ತಿ ಗೇಟು ದಪ್ಪ ಒಂದೇ ಮರದ ಪಟ್ಟಿಯಿಂದಾಗಲೀ ಕಬ್ಬಿಣದ ಫ್ರೆಮ್‌ ನಿಂದಾಗಲೀ ಇರುವುದು ಸೂಕ್ತವಲ್ಲ. ಮನೆಯೊಳಗಿನಿಂದಲೇ ಗೇಟಿನಾಚೆಗೆ ಕಾಣುವ ಹಾಗೆ ನಡುನಡುವೆ ಖಾಲಿಯಾಗಿ ಸರಳು ಪಟ್ಟಿಗಳಿಂದ ರಚನೆಗೊಂಡಿರಲಿ. ಇಲ್ಲಿನ ಪಟ್ಟಿಗಳು ಡೈಮಂಡ್‌, ಸ್ವಸ್ತಿಕ್‌, ಮಂಡಲಾಕೃತಿಗಳನ್ನು ತ್ರಿಶೂಲ, ಸುಭ್ರಮ್ಯಣ್ಯ ಕರಶೂಲ ಇತ್ಯಾದಿ ಆಕೃತಿಗಳನ್ನು ಹೊಂದಿದ್ದರೆ ಶುಭ.

ಮನೆಯ ಎದುರಿಗೆ ರಸ್ತೆ ಎಡಬಲಕ್ಕೆ ಇರದೆ ನೇರವಾಗಿ ಇದ್ದರೆ ವಾಸ್ತು ಗಣಪತಿಯನ್ನು ಗೇಟಿನ ಇಕ್ಕೆಲದ ಒಂದು ಭಾಗ ಮುಖ್ಯವಾಗಿ ಬಲಗಡೆಗೆ ಇಡುವುದು ಸೂಕ್ತವಾಗಿದೆ. ವಾಸ್ತು ಪುರುಷನ ಮಂಡಲ ಕಾಂತಿ ರಚನಾ ಶೈಲಿಯ ಬಣ್ಣಗಳ ಚಿತ್ರ ಇರುವುದೂ ಉತ್ತಮವೇ. ಒಟ್ಟಿನಲ್ಲಿ ಈ ಚಿತ್ರಗಳು ಗಣಪನ ಉಪಸ್ಥಿತಿಗಳು ಅಶುಭವನ್ನು ನಿಯಂತ್ರಿಸಿ ವಾಸ್ತವಕ್ಕೆ ಅನಿವಾರ್ಯವಾದ ಜೀವನದ ಅಭಿವೃದ್ಧಿಗೆ ಯಶಸ್ಸಿನ ಆವರಣ ಒದಗಿಸಲು ಕ್ಷಿಪ್ರ ಒಳದಾರಿಗಳಾಗಿ ಪರಿವರ್ತನೆ ಆಗುತ್ತದೆ.

Share on:

City Information

(Private)