ಅವರೆಕಾಳು ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು :
ಹಿತಕವರೆ ಕಾಳು - 3 ಮೂರು ಕಪ್
ಬನ್ಸೀರವೆ ಅಥವಾ ಸಣ್ಣ ರವೆ - 1 ಕಪ್
ಎಣ್ಣೆ - 6 ಚಮಚ,
ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಜೀರಿಗೆ - ಒಂದೊಂದು ಚಮಚ
ಹಸಿಮೆಣಸಿನಕಾಯಿ, ಜಜ್ಜಿದ ಶುಂಠಿ ರುಚಿಗೆ ತಕ್ಕಷ್ಟು
ಕಾಳುಮೆಣಸು - 4
ತೆಂಗಿನ ತುರಿ - 1 ಬಟ್ಟಲು
ಕೊತ್ತಂಬರಿ ಸೊಪ್ಪು ಸ್ವಲ್ಪ
ಅವರೆಕಾಳು ಉಪ್ಪಿಟ್ಟು ಮಾಡುವ ವಿಧಾನ :
ರವೆಯನ್ನು ಒಂದು ಚಮಚ ತುಪ್ಪದಲ್ಲೋ ಅಥವಾ ಎಣ್ಣೆಯಲ್ಲೋ ಘಮ್ಮೆನ್ನುವ ತನಕ ಹುರಿದುಕೊಳ್ಳಿ. ಅವರೆಕಾಳನ್ನು ಒಂಚೂರು ಉಪ್ಪು ಸೇರಿಸಿ ಬೇಯಿಸಿ ಇಟ್ಟುಕೊಳ್ಳಿ, ನಂತರ ದಪ್ಪ ತಳದ ಬಾಣಲೆಗೆ ಆರು ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಹಾಕಿ ಸಿಡಿಸಿ. ನಂತರ ಸೀಳಿದ ಆರು ಹಸಿಮೆಣಸಿನಕಾಯಿ ಹಾಕಿ ಬಾಡಿಸಿ. ನಂತರ ಶುಂಠಿ, ಒಂಚೂರು ಮೆಣಸಿನ ಪುಡಿ, ಬೇಯಿಸಿಟ್ಟ ಅವರೆಕಾಳು, ನೀರು, ಉಪ್ಪು ಹಾಕಿ ಕುದಿಸಿ. ನಂತರ ಹುರಿದ ರವೆಯನ್ನು ನಿಧಾನವಾಗಿ ಹಾಕುತ್ತಾ ಕದಡುತ್ತಿರಿ.
ರವೆ ಬೆಂದ ನಂತರ ಒಂದು ಚಮಚ ತುಪ್ಪ ಹಾಕಿ ಮುಗುಚಿ. ತೆಂಗಿನಕಾಯಿ ತುರಿ ಹಾಕಿ ಬೆರೆಸಿ. ನಂತರ ಕೊತ್ತಂಬರಿ ಸೊಪ್ಪು ಚಿಮುಕಿಸಿ ನಂತರ ಎಲ್ಲರಿಗೂ ಅವರೆಕಾಳು ಉಪ್ಪಿಟ್ಟು ಸವಿಯಲು ಕೊಡಿ.