(ಪ್ರಮಾಣ 5 ಜನರಿಗೆ) :
ತರಕಾರಿ ಸಾಗು ಮಾಡಲು ಬೇಕಾಗುವ ಸಾಮಗ್ರಿಗಳು :
ಹೆಚ್ಚಿದ ತರಕಾರಿಗಳು 3 ಬಟ್ಟಲು
ಆಲೂಗೆಡ್ಡೆ ಹುರಳಿಕಾಯಿ, ಹೂಕೋಸು, ಕ್ಯಾರೆಟ್ 2 ಬಟ್ಟಲು
ಟೊಮೆಟೊ 2 ಹೆಚ್ಚಿರುವುದು
ಬಟಾಣಿ 1/2 ಬಟ್ಟಲು
1/4 ಬಟ್ಟಲು ಹಾಲು
ಕೊತ್ತಂಬರಿ ಸೊಪ್ಪು
ರುಬ್ಬಿಕೊಳ್ಳಬೇಕಾದ ಸಾಮಗ್ರಿ :
ತೆಂಗಿನಕಾಯಿ ತುರಿ 1 ಬಟ್ಟಲು, ಹಸಿ ಮೆಣಸಿನಕಾಯಿ 10 ಸ್ವಲ್ಪ ಎಣ್ಣೆಯಲ್ಲಿ ಹುರಿದಿದ್ದು, ಶುಂಠಿ 1 ಇಂಚು,
ಬೆಳ್ಳುಳ್ಳಿ 6 ಎಸಳು, ಚಕ್ಕೆ 1 ಲವಂಗ 2, ಸೋಂಪು 1 ಟೀ ಸ್ಪೂನು, ಗಸಗಸೆ 1 ಟೀ ಸ್ಪೂನ್, ಅರಿಶಿಣ 1 ಟೀ ಸ್ಪೂನ್, ಕೊತ್ತಂಬರಿ ಬೀಜದ ಪುಡಿ1 ಟೀ ಸ್ಪೂನ್, ಹುರುಗಡ್ಲೆ 1 ಟೇಬಲ್ ಸ್ಪೂನ್ ಎಲ್ಲವನ್ನೂ ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳುವುದು, ಬೇಕಾದರೆ 10 ಗೋಡಂಬಿ ಸೇರಿಸಿಕೊಳ್ಳಬಹುದು.
ಒಗ್ಗರಣೆಗೆ ಬೇಕಾದ ಸಾಮಗ್ರಿ :
ಎಣ್ಣೆ 2 ಟೇಬಲ್ ಸ್ಪೂನ್, ಸಾಸಿವೆ ಸ್ವಲ್ಪ, ಈರುಳ್ಳಿ 1 ಹೆಚ್ಚಿದ್ದು, ಒಣಮೆಣಸಿನಕಾಯಿ 2, ಕರಿಬೇವು ಸ್ವಲ್ಪ ಇವೆಲ್ಲವನ್ನು ಒಗ್ಗರಣೆ ಹಾಕುವುದು.
ಮಾಡುವ ವಿಧಾನ :
ಕುಕ್ಕರಿನಲ್ಲಿ ಒಗ್ಗರಣೆ ಸಾಮಗ್ರಿಗಳನ್ನು ಸೇರಿಸಿ ಸ್ವಲ್ಪ ಬೆಂದ ನಂತರ ಟೊಮೆಟೊ, ತರಕಾರಿಗಳು ರುಬ್ಬಿದ ಮಿಶ್ರಣ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಬೇಯಿಸಿ ನಂತರ 2 ರಿಂದ 3 ಬಟ್ಟಲು ನೀರು ಹಾಕಿ ಒಂದು ಸಲ ಕೂಗಿಸುವುದು.
ಬಿಸಿ ಆರಿದ ನಂತರ 1/4 ಬಟ್ಟಲು ಹಾಲು ಮತ್ತು ಕೊತ್ತಂಬರಿ ಸೊಪ್ಪು ಹಾಕುವುದು.