ಟೇಸ್ಟಿ ಅಣಬೆ ಖಾದ್ಯಗಳು ಬಹುತೇಕರು ಇಷ್ಟಪಡುತ್ತಾರೆ. ಕಡಿಮೆ ಕ್ಯಾಲೊರಿ ಅಂಶ ಹೊಂದಿರುವ, ಕೊಲೆಸ್ಟ್ರಾಲ್ ಹಾಗೂ ಕೊಬ್ಬಿನಂಶ ಹೊಂದಿರದ ಅಣಬೆ ಡಯೆಟ್ ಪ್ರಿಯರಿಗೂ ಬಹಳ ಅಚ್ಚುಮೆಚ್ಚು. ಇದರಲ್ಲಿ ಪ್ರೊಟೀನ್ ಅಂಶವು ಅಧಿಕವಿದ್ದು ಇದರ ಸೇವನೆಯಿಂದ ಆರೋಗ್ಯವನ್ನು ಉತ್ತಮವಾಗಿ ಇಡಬಹುದು.
ಅಣಬೆ ಸೂಪ್ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಬೆಣ್ಣೆ – 2
ಚಮಚ, ಈರುಳ್ಳಿ - 1 ಮಧ್ಯಮ ಗಾತ್ರದ್ದು
ಅಣಬೆ - 200 ಗ್ರಾಂ
ಉಪ್ಪು- ರುಚಿಗೆ
ನೀರು, ಸೊಪ್ಪು - 1/2 ಕಪ್
ಕಾಳುಮೆಣಸು - ಚಿಟಿಕೆ
ಪಾಸ್ತಾ ಮತ್ತು ಪಾಸ್ತಾ ಕ್ರೀಮ್. ಚಿಲ್ಲಿ ಸಾಸ್ - ಸ್ವಲ್ಪ
ಈರುಳ್ಳಿ ದಂಟು - 1/4 ಕಪ್
ಶುಂಠಿ - 1/4 ಇಂಚು
ಅಣಬೆ ಸೂಪ್ ತಯಾರಿಸುವ ವಿಧಾನ :
ಪಾತ್ರೆಯೊಂದರಲ್ಲಿ ಬೆಣ್ಣೆಯನ್ನು ಬಿಸಿ ಮಾಡಿ ಮೊದಲೇ ಕತ್ತರಿಸಿಕೊಂಡ ಈರುಳ್ಳಿ ಸೇರಿಸಿ ಸಣ್ಣ ಉರಿಯಲ್ಲಿ ಹುರಿಯಿರಿ. ಅನಂತರ ಕತ್ತರಿಸಿದ ಅಣಬೆ ಸೇರಿಸಿ 10 ನಿಮಿಷ ಬೇಯಿಸಿ. ನೀರು ಸೇರಿಸಿ ಅದರ ಜೊತೆಗೆ ಉಪ್ಪು, ನಿಮಗೆ ಬೇಕಾದ ಗಿಡಮೂಲಿಕೆಯನ್ನು ಕತ್ತರಿಸಿ ಹಾಕಿ ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ. ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿ. ತಣ್ಣಗಾದ ಮೇಲೆ ರುಬ್ಬಿಕೊಳ್ಳಿ. ಅದನ್ನು ಪಾತ್ರೆಯೊಂದಕ್ಕೆ ಹಾಕಿ. ಅದಕ್ಕೆ ಬೇಯಿಸಿದ ಪಾಸ್ತಾ ಹಾಗೂ ಸ್ವಲ್ಪ ಕ್ರೀಮ್ ಸೇರಿಸಿ. ಅದರ ಮೇಲೆ ಚಿಲ್ಲಿ ಸಾಸ್, ಉದ್ದಕ್ಕೆ ತೆಳ್ಳಗೆ ಹೆಚ್ಚಿದ ಶುಂಠಿ ಹಾಗೂ ಈರುಳ್ಳಿ ದಂಟನ್ನು ಕತ್ತರಿಸಿ ಹಾಕಿ. ಮಿಶ್ರಣ ಮಾಡಿ ರುಚಿ ರುಚಿಯಾದ ನೋಡಲು ಅಣಬೆ ಸೂಪ್ ಸವಿಯಲು ಕೊಡಿ.