ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿಗಳೂ ವಾಸ್ತು ನಿಯಮದ ಪ್ರಕಾರ ಇರಬೇಕೆಂದು ಕೆಲವರು ನಿರೀಕ್ಷೆ ಮಾಡುತ್ತಾರೆ. ಅಡುಗೆ ಮನೆಯಲ್ಲಿ ಪಂಚಭೂತಗಳಿಗೆ ಮಹತ್ವದ ಸ್ಥಾನ ನೀಡಲು ಮರೆಯಬೇಡಿ. ಆರೋಗ್ಯ ಮತ್ತು ದೈಹಿಕ ಶಕ್ತಿಗೆ ಆಹಾರ ಪ್ರಮುಖವಾದದ್ದು. ಇದರ ಜೊತೆಗೆ ನಮ್ಮ ಆರೋಗ್ಯ ಮತ್ತು ಮನೆಯ ಸಮೃದ್ಧಿಗೆ ಅಡುಗೆ ಮನೆಯ ವಾಸ್ತುವೂ ಉತ್ತಮವಾಗಿರಬೇಕು. ಹೀಗಾಗಿ ಮುಂದೆ ನೀವು ಹೊಸ ಮನೆ ಕಟ್ಟುವಾಗ ಅಡುಗೆಮನೆಯ ವಾಸ್ತುವಿನ ಕಡೆಗೂ ಗಮನ ಹರಿಸಿ. ಅಡುಗೆ ಮನೆಯ ವಾಸ್ತುವಿಗೆ ಸಂಬಂಧಪಟ್ಟಂತೆ ಹಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ.
- ಪೂರ್ವ ದಿಕ್ಕಿಗೆ ಅಭಿಮುಖವಾಗಿ ನಿಂತು ಅಡುಗೆ ಮಾಡುವಂತೆ ಗ್ಯಾಸ್ ಒಲೆ ಇಡಬೇಕು.
- ಮನೆಯ ಅಡುಗೆ ಕೋಣೆಯು ಪೂರ್ವ ಮತ್ತು ಆಗ್ನೇಯ ದಿಕ್ಕಿಗೆ ಆಗಿದ್ದರೆ ಅನುಕೂಲಕರ. ಯಾವುತ್ತೂ ಅಡುಗೆಮನೆ ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಇರಬಾರದು.
- ಹಸಿರು ಮರದ ಎಲೆಗಳ ಬಣ್ಣವು ಗಾಳಿಯ ಅಂಶವನ್ನು ಸಮತೋಲನಗೊಳಿಸುತ್ತದೆ. ಹೀಗಾಗಿ, ಅಡುಗೆ ಮನೆಯ ಚಪ್ಪಡಿ ಕಲ್ಲು ಹಸಿರು ಬಣ್ಣದಾಗಿದ್ದರೆ ಉತ್ತಮ.
- ನೀರಿನ ದಿಕ್ಕು ಉತ್ತರ. ಹೀಗಾಗಿ ಕುಡಿಯುವ ನೀರನ್ನು ಉತ್ತರ ದಿಕ್ಕಿನಲ್ಲಿಯೇ ಇಡಬೇಕು.
- ಸಿಂಕ್ ಕೂಡ ಉತ್ತರ ದಿಕ್ಕಿನಲ್ಲಿ ಇದ್ದರೆ ಉತ್ತಮ. ಸಿಂಕ್ ಯಾವಾಗಲೂ ಸ್ವಚ್ಛವಾಗಿರಬೇಕು. ಸಿಂಕ್ ಈಶಾನ್ಯ ದಿಕ್ಕಿನಲ್ಲಿ ಇದ್ದರೂ ಪರವಾಗಿಲ್ಲ.
- ಸಿಂಕ್ ಮತ್ತು ಅಡುಗೆ ಅನಿಲ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಇರಬಾರದು. ಇವೆರಡೂ ತುಂಬಾ ಹತ್ತಿರದಲ್ಲಿರುವುದೂ ಬೇಡ. ಇವೆರಡು ಅಕ್ಕಪಕ್ಕದಲ್ಲಿದ್ದರೆ ಮಧ್ಯದಲ್ಲಿ ಶಿಲಾ ಕಲ್ಲು ಇಡುವುದನ್ನು ಮರೆಯಬೇಡಿ.
- ಫ್ರಿಡ್ಜ್ ಅಡುಗೆ ಮನೆಯ ಪಶ್ಚಿಮ ದಿಕ್ಕಿನಲ್ಲಿ ಇರಲಿ.