ಮೊಳಕೆ ಸಾರು ಮಾಡಲು ಬೇಕಾಗುವ ಸಾಮಗ್ರಿಗಳು :
ಮೊಳಕೆ ಕಟ್ಟಿದ ಹುರುಳಿ - 1 ಕಪ್
ತೆಂಗಿನ ತುರಿ -1 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
ಹುಣಸೆಹಣ್ಣು - ಅಡಿಕೆ ಗಾತ್ರ
ಕರಿಬೇವು - 5 ಎಲೆ
ಕೆಂಪು ಮೆಣಸು - 5-6
ಕೊತ್ತಂಬರಿ ಬೀಜ - 2 ಚಮಚ
ಈರುಳ್ಳಿ - 1
ದಾಲ್ಚಿನ್ನಿ - 1
ಬೆಲ್ಲ - 1/2 ಚಮಚ
ಅರಿಶಿಣ, ಸಾಸಿವೆ, ಉಪ್ಪು, ಎಣ್ಣೆ
ಮೊಳಕೆ ಸಾರು ಮಾಡುವ ವಿಧಾನ:
ಹುರುಳಿಯನ್ನು 1 ದಿನ ನೆನಸಿ ಬಟ್ಟೆಯಲ್ಲಿ ಅಥವಾ ಜಾಳಿಗೆಯಲ್ಲಿ ಹಾಕಿ ಇಡಿ. ಅದು ಮೊಳಕೆ ಕಟ್ಟಿದನಂತರ ಬೇಯಿಸಿಟ್ಟುಕೊಳ್ಳಿ. ನಂತರ ದಾಲ್ಚಿನ್ನಿ, ತೆಂಗಿನ ತುರಿ, ಮೆಣಸಿನಕಾಯಿ, ಕೊತ್ತಂಬರಿ ಬೀಜ, ಶುಂಠಿ ಅಥವಾ ಬೆಳ್ಳುಳ್ಳಿ ಪೇಸ್ಟ್ ರುಬ್ಬಿಕೊಳ್ಳಿ. ಬಾಣಲೆಗೆ ಎಣ್ಣೆ, ಸಾಸಿವೆ ಹಾಕಿ ಒಗ್ಗರಣೆ ಮಾಡಿ. ಇದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿದನಂತರ ಹಸಿ ವಾಸನೆ ಹೋಗುವಂತೆ ಬೇಯಿಸಿ. 5-8 ನಿಮಿಷ ಸಣ್ಣ ಉರಿಯಲ್ಲೇ ಇಡಿ. ಇದಕ್ಕೆ ಬೇಯಿಸಿದ ಹುರುಳಿ, ಹುಣಿಸೆ ರಸ, ಬೆಲ್ಲ, ಉಪ್ಪು, ಕರಿಬೇವು, ಅರಿಷಿಣ ಹಾಕಿ 4-5 ನಿಮಿಷ ಕುದಿಸಿ ನಂತರ ಮೊಳಕೆ ಸಾರಿನ ರುಚಿ ಸವಿಯಿರಿ.