ಈಕೆಯಲ್ಲಿ ನರಹಿಂಹ ಸ್ವಾಮಿಯ ಗುಣ ಲಕ್ಷಣಗಳಿವೆ. ಸಿಂಹದ ತಲೆ, ನಾಲ್ಕು ಕೈಗಳು ಹಾಗೂ ಮೊನಚಾಚ ಉಗುರುಗಳನ್ನು ಹೊಂದಿದ್ದಾಳೆ. ತನ್ನ ಕೈಗಳಲ್ಲಿ ಕಪಾಲ, ತ್ರಿಶೂಲ, ಢಮರು ಮತ್ತು ನಾಗಪಾಶವನ್ನು ಹಿಡಿದುಕೊಂಡಿದ್ದಾಳೆ. ನಾರಸಿಂಹಿಯನ್ನು ಹೃದಯ ಸ್ವರೂಪಿಣಿ ಎಂತಲೂ ಕರೆಯುವುದುಂಟು. ವೈಷ್ಣವ ಸಂಪ್ರದಾಯಸ್ಥರು ಈಕೆಯನ್ನು ಮಹಾಲಕ್ಷ್ಮಿಯ ಸ್ವರೂಪದಲ್ಲೇ ಕಾಣುತ್ತಾರೆ.
ದೇವಿ ಮಹಾತ್ಮೆಯ ಪ್ರಕಾರ ನಾರಸಿಂಹಿ ದೇವಿಯು ಶುಂಭ ಮತ್ತು ಸಿಶುಂಭಾಸುರರನ್ನು ದಮನ ಮಾಡುತ್ತಾಳೆ. ಈಕೆ ಅಪ್ರತಿಮ ವೀರಾಗ್ರಣಿ. ಈಕೆಯ ಘರ್ಜನೆ ರಣಘೋರ. ಒಮ್ಮೆ ಹೂಂಕರಿಸಿದರೆ ಸಾಕಲು ಆಗಸದಾದ್ಯಂತ ಗುಡುಗು, ಮಿಂಚುಗಳು ಮಾರ್ಧನಿಸುತ್ತವೆ ಎನ್ನುತ್ತದೆ. ದೇವಿ ಪುರಾಣ. ನಾರಸಿಂಹಿಯನ್ನು ಕೆಲವರು ಪ್ರತ್ಯಂಗಿರ ಎಂತಲೂ ಗುರುತಿಸುತ್ತಾರೆ. ಶೈವರು ಈಕೆ ಆದಿಪರಾಶಕ್ತಿಯ ಅವತಾರಿಣಿಯಾಗಿದ್ದಾಳೆ. ಹಿರಣ್ಯಕಶಿಪುವನ್ನು ಕೊಂದ ನಂತರ ನರಸಿಂಹ ಸ್ವಾಮಿಯ ಉಗ್ರತ್ವವನ್ನ ಕಡಿಮೆ ಮಾಡಲು ಶಿವನು ಶರಭ ಪಕ್ಷಿಯಾಗಿ ರೂಪ ತಾಳುತ್ತಾನೆ. ಶರಭ ಪಕ್ಷಿಯ ರೆಕ್ಕೆಗಳಿಂದ ಜನಿಸಿದವಳೇ ನಾರಸಿಂಹಿಯಾಗಿದ್ದಾಳೆ ಎನ್ನುತ್ತಾರೆ.
ಈಕೆ ಸಿಂಹವಾಹಿನಿಯಾಗಿದ್ದು, ಶತ್ರು ಸಂಹಾರಿಣಿ ಆಗಿದ್ದಾಳೆ. ಶ್ರೀಚಕ್ರಾರ್ಚನೆಯಲ್ಲಿ ನೈಋತ್ಯ ದಿಕ್ಕನ್ನು ಪ್ರತಿನಿಧಿಸುತ್ತಾಳೆ. ಪುಣ್ಯ ಸ್ವರೂಪಿಣಿಯಾಗಿ ಶೋಭಿಸುತ್ತಾಳೆ. ಮಹಾಲಕ್ಷ್ಮಿ ಸ್ವರೂಪಿಣಿಯಾದ ನಾರಸಿಂಹಿಣಿಯನ್ನು ಕಮಲ ಪುಷ್ಪಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ನಾರಸಿಂಹಿಣಿಗೆಂದೇ ಕುಂಭಕೋಣಂನಲ್ಲಿ ಐವಾರ ಪಾಡಿ ಎಂಬ ಆಲಯವೊಂದಿದೆ.
ಮಂತ್ರ :
ಓಂ ಮಹಾಲಕ್ಷ್ಮೀಚ ವಿದ್ಮಹೇ / ವಿಷ್ಣು ಪತ್ನೀಶ್ಚ
ಧೀಮಹಿ / ತನ್ನೋ ಲಕ್ಷ್ಮಿ ಪ್ರಚೋದಯಾತ್ //
ಪುಷ್ಪ: ಕೆಂದಾವರೆ
ತಾಮರ ಎಂದು ಕರೆಸಿಕೊಳ್ಳುವ ತಾವರೆ ಹೂವನ್ನು ಎಲ್ಲ ದೇವಸ್ಥಾನಗಳಲ್ಲಿ ಪೂಜೆಗೆ ಬಳಕೆ ಮಾಡುತ್ತಾರೆ. ಇದನ್ನು ಹೆಚ್ಚಾಗಿ ಸಹಸ್ರಕಲಶ, ಅಷ್ಟಬಂಧ ಹಾಗೂ ಲಕ್ಷಾರ್ಚನೆಯಂತಹ ವಿಶೇಷ ಪೂಜೆಗೆ ಬಳಸುತ್ತಾರೆ. ತಾವರೆಯನ್ನು ಸಂಸ್ಕೃತದಲ್ಲಿ ಪದ್ಮ, ನಳಿನ, ಅರವಿಂದ, ಕಮಲ ಹಾಗೂ ಪಂಕಜ ಎಂದೂ ಕರೆಯುತ್ತಾರೆ. ಭಗವಾನ್ ಶ್ರೀಕೃಷ್ಣನನ್ನು ತಾವರೆ ಕಣ್ಣಿನವನು ಎಂದು ಬಣ್ಣಿಸುತ್ತಾರೆ. ಬ್ರಹ್ಮ ಮತ್ತು ಲಕ್ಷ್ಮೀ ಸೃಷ್ಟಿ ಮತ್ತು ಸಂಪತ್ತಿನ ದೇವತೆಯಂದೇ ಗರುತಿಸಲಾಗುವ ಪ್ರಜಾಪತಿ ಬ್ರಹ್ಮ ಮತ್ತು ಲಕ್ಷ್ಮಿ ಕಮಲ ಪುಷ್ಪದ ಮೇಲೆ ಆಸೀನರಾಗಿದ್ದಾರೆ. ತಾವರೆಯ ವಿಶೇಷತೆ ಎಂದರೆ ಅದು ಶಾಶ್ವತ ಬೆಳಕಿನೆಡೆಗೆ ಮುಖಮಾಡಿ ಅರಳುತ್ತದೆ.