ಬಹುತೇಕ ಅಭಿವೃದ್ಧಿ ಕಾರ್ಯ ಮೈಸೂರು ರಸ್ತೆ ಪ್ರದೇಶದಲ್ಲಿ ನಡೆಯುತ್ತಿರುವುದರಿಂದ ಮೈಸೂರು ರಸ್ತೆ ಹೆದ್ದಾರಿಯಿಂದ 4 -5 ಕಿಲೋಮೀಟರ್ ಗಳ ನೋಡುತ್ತಾ ಹೋದರೆ ನಿಮಗೆ ಅಭಿವೃದ್ಧಿ ಕಾರ್ಯ ಕಣ್ಣಿಗೆ ಕಾಣುವುದು
ಬೆಂಗಳೂರು-ಮೈಸೂರು ಹೆದ್ದಾರಿಯನ್ನು 10 ಪಥಗಳಾಗಿ ವಿಸ್ತರಿಸಿರುವದರಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಈ ಕಾರಣದಿಂದ ಈ ಎಕ್ಸ್ಪ್ರೆಸ್ ವೇ ಗೆ ಹೊಂದಿಕೊಂಡ ಭೂಮಿಯ ಬೆಲೆಗಳು ಹೆಚ್ಚಾದವು.
ದೊಡ್ಡ ಆಲದ ಮರದ ರಸ್ತೆಯ ಅಕ್ಕಪಕ್ಕದಲ್ಲಿ ಅಭಿವೃದ್ಧಿ ಕಾರ್ಯ ಬಹಳ ವೇಗವಾಗಿ ಸಾಗುತ್ತಿದೆ.
ಬೆಂಗಳೂರಿನ ಕಡೆಯಿಂದ ಮೈಸೂರು ರಸ್ತೆ ಹೋಗುವಾಗ ನೀವು ಬಲಕ್ಕೆ ತಿರುಗಿ ದೊಡ್ಡ ಆಲದಮರದ ಮುಖ್ಯರಸ್ತೆಯಲ್ಲಿ ಮುಂದೆ ಸಾಗಿದರೆ ರೈಲ್ವೇ ಕ್ರಾಸಿಂಗ್ ನ ಬಳಿಕ ರಸ್ತೆಯ ಅಕ್ಕ ಪಕ್ಕದಲ್ಲಿ ಹಲವಾರು ಉದ್ಯಮಗಳು, ಉತ್ಪಾದನಾ ಘಟಕಗಳು, ಉತ್ಪಾದನಾ ಕಂಪನಿಗಳು ಮತ್ತು ಫ್ಯಾಬ್ರಿಕೇಶನ್ ಸಂಸ್ಥೆಗಳು ಕಾಣಸಿಗುತ್ತವೆ. ಹಾಗೇ ಮುಂದೆ ಸಾಗಿದರೆ, ಸಣ್ಣ ಪುಟ್ಟ ಹಳ್ಳಿಗಳು ಮತ್ತು ರೈತರ ಜಮೀನುಗಳನ್ನು ನೋಡಬಹುದು. ಸುಮಾರು 6 ಕಿಲೋಮೀಟರ್ ಸಾಗಿದ ನಂತರ ರಾಮೋಹಳ್ಳಿ ಮತ್ತು ಕೇತೋಹಳ್ಳಿ ಎಂಬ ಎರಡು ಹಳ್ಳಿಗಳು ಸಿಗುತ್ತವೆ. ಇಲ್ಲಿ ಹಚ್ಚ ಹಸಿರಾದ ತಂಪಾದ ವಾತಾವರಣದ ಜೊತೆಗೆ ನರ್ಸರಿಗಳು ಇಲ್ಲಿವೆ. ನೋಡಲು ನಯನ ಮನೋಹರವಾಗಿ ಕಣ್ಣಿಗೆ ಇಂಪನ್ನು ನೀಡುವ ಹೆಚ್ಚಾಗಿ ಕೃಷಿ ವ್ಯವಹಾರದ ತಾಣಗಳಿವು. ಇವುಗಳ ನಂತರ ಸಿಗುವುದೇ ಪ್ರಸಿದ್ಧ ಪ್ರವಾಸಿ ತಾಣ ದೊಡ್ಡ ಆಲದಮರ.
ದೊಡ್ಡ ಆಲದಮರ ತಾವರೆಕೆರೆ ಹೋಬಳಿಯ ಒಂದು ಭಾಗವಾಗಿದ್ದು ಬೆಂಗಳೂರು ಮಧ್ಯಭಾಗದಿಂದ ಅಂದಾಜು 25 ಕಿಲೋಮೀಟರ್ ದೂರದಲ್ಲಿದೆ. ಮೈಸೂರು ರಸ್ತೆಯಲ್ಲಿ ಇದಕ್ಕೆ ಹತ್ತಿರವಿರುವ ಮೆಟ್ರೋ ನಿಲ್ದಾಣ 19 ಕಿಲೋಮೀಟರ್ ದೂರದಲ್ಲಿದೆ. ಎರಡನೇ ಹಂತದ ನಮ್ಮ ಮೆಟ್ರೋ ಪೂರ್ಣಗೊಂಡ ಬಳಿಕ ಮೆಟ್ರೋ ಪ್ರಯಾಣ ಇನ್ನೂ ಹತ್ತಿರವಾಗಲಿದೆ. ನಿಜವಾದ ಅಭಿವೃದ್ಧಿ ಹೊಂದಿದ ಪ್ರದೇಶ ಶುರುವಾಗುವುದೇ ದೊಡ್ಡ ಆಲದಮರ ಪ್ರದೇಶದ ನಂತರ. ಹೀಗೆ ಮುಂದೆ ಸಾಗಿದರೆ, ಕೃಷಿ ಭೂಮಿಯ ಜಾಗಗಳಿಂದ ಹಲವಾರು ಖಾಸಗಿ ಲೇಔಟ್ ಗಳು ತಲೆಯೆತ್ತಿ ನಿಂತಿವೆ.
ಚುಂಚನಗುಪ್ಪೆ, ದೊಡ್ಡಮಾರನಹಳ್ಳಿ, ಗಣಪತಿಹಳ್ಳಿ, ಅಜ್ಜನಹಳ್ಳಿ, ಬ್ಯಾಲಾಳು ಮತ್ತು ಇತರ ಗ್ರಾಮ ಪಂಚಾಯಿತಿ ಮಿತಿಗಳಲ್ಲಿ ಲೇಔಟ್ ಗಳು ಪ್ರಾರಂಭಗೊಂಡಿವೆ.
ಬ್ಯಾಲಾಳು ಹಳ್ಳಿಯಲ್ಲಿನ ಇಸ್ರೋ ಕೇಂದ್ರ, ರುಪ್ಪೀಸ್ ರೆಸಾರ್ಟ್ ಮತ್ತು ಅಂದವಾದ ರಸ್ತೆಗಳು ಈ ಹಳ್ಳಿಯಲ್ಲಿನ ಅಭಿವೃದ್ಧಿಯನ್ನು ತೋರಿಸುವ ಕೆಲವು ಮುಖ್ಯವಾದ ಅಂಶಗಳು. ಇನ್ನು ರಸ್ತೆಗಳ ಬಗ್ಗೆ ಹೇಳಬೇಕೆಂದರೆ, ಪ್ರಸ್ತುತ ದೊಡ್ಡ ಆಲದ ಮರದ ರಸ್ತೆ ವಿಸ್ತೀರ್ಣಗೊಳ್ಳುವ ಸಮೀಕ್ಷೆ ಕೂಡ ಈಗಾಗಲೇ ಪೂರ್ಣಗೊಂಡಿದೆ.
ಈ ಪರಿಸರ ಪ್ರದೇಶದಲ್ಲಿ ವಾಸಕ್ಕೆ ಯೋಗ್ಯವಾದಂತಹ ಸೈಟ್ ಗಳು ಜನರ ಅನುಕೂಲಕ್ಕೆ ತಕ್ಕಂತಹ ಅಳತೆಗಳಲ್ಲಿ ಲಭ್ಯವಿವೆ. 30*40, 30*60, 40*60 ಮತ್ತು 80*100 ಚದುರ ಅಡಿಗಳ ಸೈಟ್ ಗಳು ಇಲ್ಲಿ ಲಭ್ಯವಿವೆ. ಇಲ್ಲಿನ ಕೆಲವೊಂದು ಅಂಶಗಳಾದ, ಸೈಟ್ ಇರುವ ಜಾಗ, ಸೈಟ್ ಮುಖ ಮಾಡಿರುವ ದಿಕ್ಕು, ಸೈಟಿನ ಬಳಿ ಲಭ್ಯವಿರುವ ಸೌಲಭ್ಯಗಳು ಮತ್ತು ಲೇಔಟ್ ನ ಸುತ್ತಮುತ್ತಲಿನ ಜನದಟ್ಟಣೆಯ ಅನುಸಾರವಾಗಿ ಇಲ್ಲಿನ ಜಾಗದ ಬೆಲೆ ಪ್ರತಿ ಚದರ ಅಡಿಗೆ 999 ರೂಪಾಯಿಗಳಿಂದ 2500 ರೂಪಾಯಿಗಳಷ್ಟು ಇದೆ.
ಮೈಸೂರು ರಸ್ತೆ ಹೆದ್ದಾರಿಯಿಂದ ವಸತಿ ನಿವೇಶನಕ್ಕೆ ಸಾಗಲು ಕೇವಲ 15 - 20 ನಿಮಿಷಗಳು ತಗಲುತ್ತವೆ. ತಾವರೆಕೆರೆಯ ಒಳಗಿನಿಂದ ಕೂಡ ದೊಡ್ಡ ಆಲದ ಮರ ತಲುಪಬಹುದು.
ಬಿಎಂಟಿಸಿ ಸಹ ಇಲ್ಲಿನ ಪ್ರದೇಶಗಳಿಗೆ ಹಲವಾರು ಬಸ್ಸುಗಳನ್ನು 15 ನಿಮಿಷಗಳಿಗೆ ಒಂದರಂತೆ ಸಿಗುತ್ತವೆ. ದೊಡ್ಡ ಆಲದಮರ ಅಥವಾ ಸುತ್ತಲಿನ ಪ್ರದೇಶಗಳಿಗೆ ಬರಲು ಬಯಸುವವರಿಗೆ ಮೆಜೆಸ್ಟಿಕ್ ಅಥವಾ ಕೆಆರ್ ಮಾರ್ಕೆಟ್ ನಿಂದ ಬಸ್ಸುಗಳ ಸೌಲಭ್ಯವಿದೆ.
ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿನ ಅಭಿವೃದ್ಧಿ ಕಾರ್ಯ ಚುರುಕುಗೊಂಡಿದೆ. ಸಿಟಿ ಜೀವನದ ಜಂಜಾಟದಿಂದ ಬೇಸತ್ತು ಹೋಗಿರುವವರಿಗೆ ಕೇಂದ್ರ ವ್ಯಾಪಾರ ಜಿಲ್ಲೆಯ ಸಮೀಪವಿರುವ ಈ ಜಾಗ ಹೇಳಿ ಮಾಡಿಸಿದಂತಿದೆ.
ಮುಂದಿನ ದಿನಗಳಲ್ಲಿ ಸರ್ಕಾರ ಈ ಪ್ರದೇಶಕ್ಕೆ ಹತ್ತಿರದ ಮಂಚನಬೆಲೆ ಡ್ಯಾಮ್ ಮತ್ತು ಟಿ ಜಿ ಹಳ್ಳಿ ಡ್ಯಾಮಿನಿಂದ ನೀರನ್ನು ಒದಗಿಸುವ ಯೋಜನೆ ರೂಪಿಸಿದೆ.
ಜನರು ಹೂಡಿಕೆಗಳಿಗಾಗಿ ಇಲ್ಲಿನ ನಿವೇಶನಗಳನ್ನು ಖರೀದಿ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 30*40 ಅಳತೆಯ ಸೈಟ್ ಬೆಲೆ ಸರಾಸರಿ 50 ಲಕ್ಷ ಗಳಷ್ಟಿದ್ದರೆ, ಇಲ್ಲಿ ಅದೇ ಅಳತೆಯ ಸೈಟಿನ ಬೆಲೆ ಕೇವಲ 15 - 20 ಲಕ್ಷ ರೂಗಳಿಗೆ ಲಭ್ಯವಿದೆ.
ಒಂದು ವೇಳೆ ನೀವು ಇಲ್ಲಿ ಸೈಟು ಪ್ಲಾಟ್ ಖರೀದಿಸುವ ಬಗ್ಗೆ ಯೋಚಿಸಿದ್ದರೆ ಮೂಲಭೂತ ಸೌಕರ್ಯಗಳ ಬಗ್ಗೆ ನೀವು ಯಾವುದೇ ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ, ಇಲ್ಲಿ ಅತ್ಯುತ್ತಮ ಶಾಲಾ - ಕಾಲೇಜುಗಳು ಮತ್ತು ಆಸ್ಪತ್ರೆಗಳು ಮೈಸೂರು ಹೆದ್ದಾರಿಯ ಅಕ್ಕಪಕ್ಕದಲ್ಲಿ ಸ್ಥಾಪನೆಗೊಂಡಿವೆ. ಜೊತೆಗೆ ಸಿಎನ್ಆರ್, ಸೆಂಟ್ ಕ್ಲೇರ್ ಮತ್ತು ವಿಆರ್ ಇಂಟರ್ ನ್ಯಾಷನಲ್ ನಂತಹ ಅನೇಕ ಶಾಲೆಗಳು ಸಹ ಇಲ್ಲಿನ ಒಳಾಂಗಣ ಪ್ರದೇಶದಲ್ಲಿ ಇವೆ.
ಬಹಳಷ್ಟು ಜನರು ತಮ್ಮ ಭವಿಷ್ಯದ ಹೂಡಿಕೆಗಾಗಿ ಮೈಸೂರು ರಸ್ತೆಯಲ್ಲಿ ಜಾಗ ಖರೀದಿ ಮಾಡಿದ್ದಾರೆ ಮತ್ತು ಖರೀದಿ ಮಾಡಲು ಬಯಸಿದ್ದಾರೆ. ರಿಯಲ್ ಎಸ್ಟೇಟ್ ತಜ್ಞರ ಪ್ರಕಾರ, ಮೈಸೂರು ರಸ್ತೆ ಜಾಗ ಖರೀದಿಗಾಗಿ ಈಗ ಉತ್ತಮ ಸಮಯ. ಏಕೆಂದರೆ ಮುಂದಿನ ಒಂದೆರಡು ವರ್ಷಗಳಲ್ಲಿ ಇಲ್ಲಿ ಸಾಗುವ ಅಭಿವೃದ್ಧಿ ಕಾರ್ಯಗಳಿಗೆ ಹೋಲಿಸಿ ನೋಡಿದರೆ ಪ್ರಸ್ತುತ ದರಗಳು ತುಂಬಾ ಹೆಚ್ಚೇನಿಲ್ಲ. ಹಚ್ಚ ಹಸಿರಾದ ಸುಂದರವಾದ ಪ್ರಶಾಂತ ವಾತಾವರಣದಲ್ಲಿ ನೆಲೆಸಲು ನೀವು ಮನಸ್ಸು ಮಾಡಿದ್ದರೆ, ಮೈಸೂರು ರಸ್ತೆ ನಿಮಗಾಗಿ ಕೈಬೀಸಿ ಕರೆಯುತ್ತಿದೆ. ನಗರದ ಕಿರಿಕಿರಿ ತಲೆ ಬಿಸಿಯಿಂದ ಪಾರಾಗಲು ಇಲ್ಲಿನ ಪ್ರಶಾಂತ ವಾತಾವರಣದಲ್ಲಿ, ಸರಳವಾದ ಹಳ್ಳಿ ಜೀವನಕ್ಕೆ ನಿಮ್ಮನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ.