ಬಾದಾಮ್ ಪೂರಿ ಮಾಡಲು ಬೇಕಾಗುವ ಸಾಮಗ್ರಿಗಳು :
ಮೈದಾ ಹಿಟ್ಟು – 1 ಕಪ್
ಚಿರೋಟಿ ರವೆ – ಅರ್ಧ ಕಪ್
ಅಕ್ಕಿ ಹಿಟ್ಟು – 2 ಚಮಚ
ತುಪ್ಪ – ಅರ್ಧ ಕಪ್ಪ
ಸಕ್ಕರೆ – 1 ಕಪ್
ಏಲಕ್ಕಿ ಪುಡಿ – ಅರ್ಧ ಚಮಚ
ಕೇಸರಿ ಬಣ್ಣ – ಕಾಲು ಚಮಚ
ಜಾಕಾಯಿ ಪುಡಿ – ಕಾಲು ಚಮಚ
ಲವಂಗದ ಪುಡಿ – ಅರ್ಧ ಚಮಚ
ಬಾದಾಮ್ ಪೂರಿ ಮಾಡುವ ವಿಧಾನ:
ಮೈದಾ ಹಿಟ್ಟು, ಚಿರೋಟಿ ರವೆ, ಅಕ್ಕಿ ಹಿಟ್ಟುಗಳಿಗೆ ಸ್ವಲ್ಪ ತುಪ್ಪ ಹಾಕಿ ನೀರಿನೊಂದಿಗೆ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿ ಅರ್ಧ ಗಂಟೆ ನೆನೆಸಿಡಿ. ಬಾಣಲೆಯಲ್ಲಿ ಸಕ್ಕರೆ, ಅರ್ಧ ಕಪ್ ನೀರು ಹಾಕಿ ಕುದಿಯಲು ಬಿಡಿ. ಸಕ್ಕರೆ ಕರಗಿ ಎಳೆ ಪಾಕ ಬರುತ್ತಿದ್ದಂತೆಯೇ ಕೇಸರಿ ಬಣ್ಣ, ಏಲಕ್ಕಿ ಪುಡಿ, ಜಾಕಾಯಿ ಪುಡಿ, ಲವಂಗದ ಪುಡಿ ಹಾಕಿ ಕಲಕಿ ಒಲೆಯಿಂದ ಕೆಳಗಿರಿಸಿ. ಈಗ ಮೊದಲೇ ಕಲಸಿದ ಹಿಟ್ಟಿನ ಮಿಶ್ರಣದಿಂದ ತೆಳುವಾದ ಪೂರಿಗಳನ್ನು ಲಟ್ಟಿಸಿ ತ್ರಿಕೋನಾಕಾರ ಬರುವಂತೆ ಮಡಚಿ, ಅಂಚುಗಳನ್ನು ಸಮನಾಗಿ ಒತ್ತಿ ರೆಡಿ ಮಾಡಿ ಕೊಳ್ಳಿ ನಂತರ ಕಾಯಿಸಿದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ನ್ಯಾಪ್ಕಿನ್ ಮೇಲೆ ಹರಡಿ ಹೆಚ್ಚಾಗಿರುವ ಎಣ್ಣೆಯನ್ನು ತೆಗೆದು ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದರೆ ರುಚಿಯಾದ ಬಾದಾಮ್ ಪೂರಿ ತಿನ್ನಲು ರೆಡಿ.