- ತಾವು ಸೈಟು ಖರೀದಿ ಮಾಡುವ ಡೆವೆಲಪರ್ ರ ಅಥವಾ ಲ್ಯಾಂಡ್ ಓನರ್ ಬಳಿ ಎಲ್ಲಾ ಸಂಬಂಧಪಟ್ಟ ಎನ್ಒಸಿ ಗಳು ಲಭ್ಯವಿದೆಯೇ ?
- ನಿವೇಶನಗಳ ಅಂಗೀಕೃತ ಯೋಜನೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (BMRDA) ಡಿಸಿ ಅವರಿಂದ ಅನುಮೋದಿಸಲ್ಪಟ್ಟಿದೆಯೇ?
- ಸ್ಥಳೀಯ ಯೋಜನಾ ಪ್ರಾಧಿಕಾರದಿಂದ (Town Planning) ಲೇಔಟ್ ನ ಅಭಿವೃದ್ಧಿಗೆ ಒಪ್ಪಿಗೆ ಸೂಚಿಸಿದ್ದಾರೆಯೇ?
- ನಿಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆ ಇದೊಂದು ಹೆಚ್ಚಿನ ಹೊರೆ ಎಂದು ನಿರ್ಲಕ್ಷವಹಿಸಿದೆ ಒಂದು ದಿವಸ ಶ್ರಮಪಟ್ಟು ದಾಖಲೆಗಳನ್ನು ಸಂಗ್ರಹಿಸಿದರೆ ನಿಮಗೆ ಮುಂದಿನ ಭವಿಷ್ಯದ ದಿನಗಳಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸುವ ಸಮಸ್ಯೆ ಇರುವುದಿಲ್ಲ.
ಇದರ ಜೊತೆಗೆ ಯಾವುದೇ ಖಾಸಗಿಯಾಗಿ ಅಭಿವೃದ್ಧಿಗೊಂಡ ಲೇಔಟಿನಲ್ಲಿ ನೀವು ತೆಗೆದುಕೊಳ್ಳುವ ಜಾಗದಲ್ಲಿ ಶೇಕಡ 55% ಜಾಗ ಮಾತ್ರ ಮಾರಲು ಅವಕಾಶವಿರುತ್ತದೆ, ಶೇಕಡ 25 ರಷ್ಟು ಜಾಗ ರಸ್ತೆಗಳಿಗಾಗಿ, ಸಿಎ ನಿವೇಶನಕ್ಕಾಗಿ ಶೇಕಡ 10 ರಷ್ಟು ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ ಶೇಕಡ 10ರಷ್ಟು ಜಾಗ ಮೀಸಲಿರುತ್ತದೆ.
ಈ ಮೇಲಿನ ಮಾಹಿತಿಗಳನ್ನು ಮರೆಯದೆ ಮುಖ್ಯವಾಗಿ ನಿಮ್ಮ ಗಮನದಲ್ಲಿರಲಿ.