ಮನೆ ಖರೀದಿ ಸಮಯದಲ್ಲಿ ವಾಸ್ತು ಪ್ರಕಾರ ಮನೆಯ ಮುಖ್ಯದ್ವಾರ ಪ್ರವೇಶವಿರುವುದು ಸೂಕ್ತ. ಮನೆಗೆ ಪಾಸಿಟೀವ್ ಶಕ್ತಿ ತುಂಬುವಲ್ಲಿ ಮುಖ್ಯದ್ವಾರದ ಪಾತ್ರ ಮಹತ್ತರ ಎಂದು ವಾಸ್ತುತಜ್ಞರ ಅಭಿಪ್ರಾಯ. ಮನೆಯ ದ್ವಾರವಿರುವುದು ಕೇವಲ ನಿಮ್ಮ, ನಿಮ್ಮ ಮನೆ ಮಂದಿ ಅಥವಾ ಇತರೆ ಜನರ ಪ್ರವೇಶಕ್ಕಾಗಿ ಅಲ್ಲ. ಅದು ನಿಮ್ಮ ಮನೆಗೆ ಸಂತೋಷ ಮತ್ತು ಅದೃಷ್ಟ ಪ್ರವೇಶಿಸಲು ಇರುವ ದಾರಿಯೂ ಹೌದು.
ಮನೆಯ ಮುಖ್ಯದ್ವಾರವು ಉತ್ತರ, ಈಶಾನ್ಯ, ಪೂರ್ವ ಅಥವಾ ಪಶ್ಚಿಮದಲ್ಲಿ ಇರುವುದು ಮಂಗಳಕರ ಎಂದು ಪರಿಗಣಿಸಲ್ಪಟ್ಟಿದೆ.
ದಕ್ಷಿಣ, ನೈಋತ್ಯ, ವಾಯುವ್ಯ (ಉತ್ತರ ಭಾಗ ಮತ್ತು ಪೂರ್ವ ಭಾಗ)ದಲ್ಲಿ ಮುಖ್ಯದ್ವಾರ ಬರದಂತೆ ನೋಡಿಕೊಳ್ಳಬೇಕು. ನೈರುತ್ಯ ಮತ್ತು ದಕ್ಷಿಣ ಭಾಗದ ಬಾಗಿಲನ್ನು ಲೋಹ ಅಥವಾ ಸೀಸದ ಹೆಲಿಕ್ಸ್ ಬಳಸಿ ಸರಿಪಡಿಸಬಹುದು. ವಾಯುವ್ಯದ ದಿಕ್ಕಿನಲ್ಲಿ ಬಾಗಿಲಿದ್ದರೆ ಹಿತ್ತಾಳೆ ಮತ್ತು ಹಿತ್ತಾಳೆ ಹೆಲಿಕ್ಸ್ ಬಳಸಿ ಸರಿಪಡಿಸಬಹುದು. ಆಗ್ನೇಯ ಭಾಗದಲ್ಲಿರುವ ಬಾಗಿಲನ್ನು ತಾಮ್ರದ ಹೆಲಿಕ್ಸ್ ಬಳಸಿ ಸರಿಪಡಿಸಲು ಸಾಧ್ಯವಿದೆ.
ಮುಖ್ಯದ್ವಾರವು ಮನೆಯಲ್ಲಿರುವ ಇತರ ಎಲ್ಲಾ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು.
ಮುಖ್ಯದ್ವಾರವನ್ನು ಕ್ಲಾಕ್ ವೈಸ್ ಅಥವಾ ಪ್ರದಕ್ಷಿಣೆ ರೀತಿಯಲ್ಲಿ ತೆರೆಯುವಂತೆ ಇರಬೇಕು.
ಮುಖ್ಯದ್ವಾರಕ್ಕೆ ಸಮಾಂತರವಾಗಿ ಮೂರು ಬಾಗಿಲು ಇಡುವುದು ಅಧಿಕ ವಾಸ್ತುದೋಷ ಎನ್ನಲಾಗಿದೆ. ಇದರಿಂದ ಮನೆಯ ಸುಖ ಶಾಂತಿ ಹಾಳಾಗಬಹುದು. ಮರದ ಬಾಗಿಲು ಮುಖ್ಯದ್ವಾರಕ್ಕೆ ಅತ್ಯಂತ ಮಂಗಳಕರ. ಪೂರ್ವ ದಿಕ್ಕಿನಲ್ಲಿರುವ ಮನೆಯ ಮುಖ್ಯದ್ವಾರಕ್ಕೆ ಮರದ ಮತ್ತು ಲೋಹದ ಬಿಡಿಭಾಗಗಳಿಂದ ಅಲಂಕರಿಸಬೇಕು. ದಕ್ಷಿಣ ದಿಕ್ಕಿನಲ್ಲಿ ಬಾಗಿಲಿದ್ದರೆ ಮರ ಮತ್ತು ಲೋಹದ ಸಂಯೋಜನೆ ಇರಲಿ. ಪಶ್ಚಿಮ ದಿಕ್ಕಿನಲ್ಲಿದ್ದರೆ ಲೋಹದ ಕೆತ್ತನೆ ಮಾಡಿರಬೇಕು. ಉತ್ತರ ದಿಕ್ಕಿನಲ್ಲಿ ಬಾಗಿಲಿದ್ದರೆ ಬೆಳ್ಳಿ ಬಣ್ಣ ಬಳಸಬೇಕು.