ಮಂಡಕ್ಕಿ ಲಾಡು ಮಾಡಲು ಬೇಕಾಗುವ ಸಾಮಾಗ್ರಿಗಳು :
- ಮಂಡಕ್ಕಿ - 1 ಕಪ್
- ಬೆಲ್ಲ - 1 ಕಪ್
- ಒಣಕೊಬ್ಬರಿ ತುರಿ - 1/2 ಕಪ್
- ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ತುಪ್ಪ
ಮಂಡಕ್ಕಿ ಲಾಡು ತಯಾರಿಸುವ ವಿಧಾನ:
ಬಾಣಲೆಯಲ್ಲಿ ಒಂದು ಚಮಚ ತುಪ್ಪವನ್ನು ಹಾಕಿ ದ್ರಾಕ್ಷಿ, ಗೋಡಂಬಿ ಹಾಗೂ ಒಣಕೊಬ್ಬರಿ ತುರಿಯನ್ನು ಹುರಿದಿಟ್ಟುಕೊಂಡು. ಮಂಡಕ್ಕಿಯನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗುವಂತೆ ಪುಡಿಮಾಡಿಟ್ಟುಕೊಳ್ಳಬೇಕು. ಒಂದು ಕಪ್ ಬೆಲ್ಲಕ್ಕೆ ಕಾಲು ಕಪ್ ನೀರು ಸೇರಿಸಿ ಏರು ಪಾಕ ಬರಿಸಿಕೊಳ್ಳಬೇಕು. ನಂತರ ಮೊದಲೇ ಹುರಿದಿಟ್ಟಿರುವ ಕೊಬ್ಬರಿ ಮಿಶ್ರಣವನ್ನು ಇದಕ್ಕೆ ಸೇರಿಸಿಕೊಳ್ಳಬೇಕು. ಪುಡಿಮಾಡಿಟ್ಟುಕೊಂಡಿರುವ ಮಂಡಕ್ಕಿಗೆ ಪಾಕ ಹಾಕುತ್ತಾ ಉಂಡೆ ಕಟ್ಟಬೇಕು,
ಈ ಉಂಡೆಗಳು ಆರೋಗ್ಯಕರವಾಗಿದೆ ಮತ್ತು ತಿನ್ನಲು ಬಲುರುಚಿಕರವಾಗಿರುತ್ತದೆ. ಅಲ್ಲದೇ ಬೆಲ್ಲದಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ ಅಧಿಕವಾಗಿದ್ದು, ಗ್ಲೂಕೋಸ್ ನ ಬದಲಿಗೆ ಬೆಲ್ಲ ಸೇವಿಸಬಹುದಾಗಿರುವುದರಿಂದ ಆರೋಗ್ಯಕ್ಕೂ ತೊಂದರೆ ಇಲ್ಲಾ.