ಮನೆಯಲ್ಲಿ ಸುಖ-ಸಂತೋಷ ತಾನೇ ತಾನಾಗಿ ಸೇರುವುದಿಲ್ಲ. ನಮ್ಮ ಮನಸ್ಥಿತಿಯ ಜತೆಗೆ ಮನೆಯಲ್ಲಿ ವಾಸ್ತು ನಿಯಮವನ್ನು ಅಳವಡಿಸಿಕೊಂಡರೆ ಸೂಕ್ತವಾಗಿರುವುದು.
ಕೇವಲ ನಿವೇಶನ ಖರೀದಿಸಿದ ಕೂಡಲೇ ಎಲ್ಲವೂ ಮುಗಿಯುವುದಿಲ್ಲ. ಅಲ್ಲಿ ಕಟ್ಟುವ ಮನೆ ಯಾವ ರೀತಿ ಇರಬೇಕು ಮತ್ತು ನೀರಿನ ಸೌಕರ್ಯ, ರಸ್ತೆ ಇದೆಯೇ ಎಂದು ಪರಿಶೀಲನೆ ನಡೆಸಿಯೇ ಮುಂದುವರಿಯಬೇಕು. ಅದರಲ್ಲೂ ಕಡಿಮೆ ಬೆಲೆಗೆ ನಿವೇಶನ ಸಿಕ್ಕಿತು ಎಂದು ಖರೀದಿಗೆ ಮುಂದಾಗಬಾರದು. ಬಹುತೇಕ ಜನರು, ಆ ಸಂದರ್ಭದಲ್ಲಿ ಲೇಔಟ್ ಮತ್ತು ಮನೆಯ ಬಗ್ಗೆ ಇರುವ ವಾಸ್ತು ನಿಯಮಗಳನ್ನು ಪಾಲಿಸಲಾಗಿದೆಯಾ ಎಂದು ಪರಿಶೀಲನೆ ಮಾಡಿಸಿ ಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆದರೆ ಸೂಕ್ತ ವಾಸ್ತು ನಿಯಮ ಪಾಲಿಸಿದರೆ ಮಾತ್ರ ನಿವಾಸಿಗಳು ನೆಮ್ಮದಿಯಿಂದ ಸುಖ ಜೀವನ ನಡೆಸಬಹುದು.
- ಯಾವುದೇ ನಿವೇಶನ ಇರಲಿ ಅದರ ನೈಋತ್ಯ ಭಾಗದಲ್ಲಿ ಮನೆಯನ್ನು ಕಟ್ಟಿದರೆ ಉತ್ತಮ.
- ಎತ್ತರದ ಸೇರ್ಪಡೆಯನ್ನು ಕಟ್ಟಡಕ್ಕೆ ಮಾಡಬೇಕಾದರೆ ಅದು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿದ್ದರೆ ಸೂಕ್ತ.
- ಮನೆಯ ಪೂರ್ವ ಭಾಗ ಯಾವ ಕಾರಣಕ್ಕೂ ಇತರ ಭಾಗಕ್ಕಿಂತ ಎತ್ತರ ಇರಲೇ ಬಾರದು.
- ಮಳೆ ನೀರು ಮನೆಯ ಉತ್ತರ ಮೂಲೆಯಿಂದ ಪೂರ್ವ ಮೂಲೆಗೆ ಹರಿದು ಹೋಗುವಂತಿರಬೇಕು.
- ನೇರವಾಗಿ ಮೂರು ಬಾಗಿಲು ಅಥವಾ ಒಂದಕ್ಕೊಂದು ತದ್ವಿರುದ್ಧವಾಗಿ ಬಾಗಿಲು ಇರಬಾರದು.