ಹೊಸ ಮನೆ ಕಟ್ಟುವಾಗ ಅಥವಾ ಹೊಸ ಅಪಾರ್ಟ್ ಮೆಂಟ್ ನಲ್ಲಿ ಅಡುಗೆ ಮನೆಯ ವಿನ್ಯಾಸದ ಕಡೆಗೆ ಹೆಚ್ಚು ಗಮನಹರಿಸಿ, ಇಲ್ಲವಾದರೆ, ಜೀವನಪೂರ್ತಿ ಬೇಸರದ ಭಾವನೆ ಉಂಟಾಗಬಾರದು.
ಅಂದವಾದ ಅಡುಗೆಮನೆ ವಿನ್ಯಾಸಕ್ಕೆ ಕೆಲವು ಟಿಪ್ಸ್ ಗಳನ್ನು ನೀಡಲಾಗಿದೆ.
ಹಲವು ಬಾರಿ ಉಪಯೋಗಿಸುವ ವಸ್ತುಗಳಿಗೆ ಮೊದಲ ಆದ್ಯತೆ ನೀಡಿ:
ಅಡುಗೆ ಮನೆ ವಿನ್ಯಾಸ ಮಾಡುವಾಗ ಅಲ್ಲಿ ಕೆಲಸ ಮಾಡುವುದು ಸುಲಭವೇ ಎನ್ನುವುದನ್ನು ಮೊದಲಿಗೆ ಗಮನದಲ್ಲಿಟ್ಟುಕೊಳ್ಳಿ. ಅಡುಗೆಮನೆಯ ಆಕಾರ ಹೇಗೆ ಬೇಕಾದರೂ ಇರಲಿ. ಯು ಆಕಾರ, ಎಲ್ ಆಕಾರ ಅಥವಾ ಗ್ಯಾಲರಿ ಆಕಾರವಿರಲಿ. ಪಾತ್ರೆ ತೊಳೆಯುವ ಸಿಂಕ್, ಫ್ರಿಡ್ಜ್ ಇತ್ಯಾದಿಗಳಿಗೆ ಸಮರ್ಪಕ ಸ್ಥಳಾವಕಾಶವಿರುವುದನ್ನು ಖಚಿತಪಡಿಸಿ. ಇವೆಲ್ಲ ತುಂಬಾ ದೂರದಲ್ಲಿ ಅಥವಾ ತುಂಬಾ ಹತ್ತಿರದಲ್ಲಿ ಇರುವುದು ಬೇಡ.
ಸ್ಟೋರೇಜ್ ಗೆ ಸ್ಥಳಾವಕಾಶ ಮಿಸ್ ಮಾಡಿಬೇಡಿ :
ಅಡುಗೆ ಮನೆಯಲ್ಲಿ ಸಂಗ್ರಹ ಸ್ಥಳಕ್ಕೆ ಆದ್ಯತೆ ನೀಡದೆ ಇರುವ ತಪ್ಪನ್ನು ಹೆಚ್ಚಿನವರು ಮಾಡುತ್ತಾರೆ. ಇದಕ್ಕಾಗಿ ಸೂಕ್ತ ಕ್ಯಾಬಿನ್ ಗಳನ್ನು ಮಾಡಿಡಿ. ಇಲ್ಲವಾದರೆ ಅಡುಗೆ ಪಾತ್ರೆಗಳು, ಅಡುಗೆ ಮನೆ ಸಾಮಗ್ರಿಗಳನ್ನು ನೀಟಾಗಿ ಇಡಲು ಸ್ಥಳಾವಕಾಶ ಇಲ್ಲದೆ ಪರದಾಡಬೇಕಾಗುತ್ತದೆ.
ಅಡುಗೆ ಮನೆಗೆ ಬೆಳಕು ಅವಶ್ಯಕವಾಗಿ ಇರುವಂತೆ ನೋಡಿ ಕೊಳ್ಳಿ:
ಅಡುಗೆ ಮನೆಗೆ ಬೆಳಕಿದ್ದರೆ ಎಲ್ಲವೂ ಸರಾಗ, ಮನೆಯ ಇತರೆ ಕೆಲವು ಕೊಠಡಿಗಳು ಕತ್ತಲಲ್ಲಿ ಇದ್ದರೂ, ಅಡುಗೆ ಮನೆಗೆ ಬೆಳಕು ಅತ್ಯಂತ ಅಗತ್ಯ. ಜೊತೆಗೆ ಅಡುಗೆ ಮಾಡುವಾಗ ನಿಮ್ಮ ಹಿಂದಿನಿಂದ ಬೆಳಕು ಬೀಳುವುದು ಬೇಡ. ಈ ರೀತಿ ಇದ್ದರೆ ನೆರಳು ನಿಮ್ಮ ಅಡುಗೆ ಕೆಲಸಕ್ಕೆ ಅಡ್ಡಿ ಉಂಟು ಮಾಡಬಲ್ಲದು. ಸರಿಯಾದ ಸ್ಥಳದಲ್ಲಿ ಲೈಟ್ ಗಳನ್ನು ಅಳವಡಿಸಿ. ನೈಸರ್ಗಿಕ ಬೆಳಕು ಸಾಕಷ್ಟು ಒಳಬರುವಂತೆ ಮಾಡಿಕೊಳ್ಳಿ.
ಪವರ್ ಪ್ಲೇ :
ವಿವಿಧ ಅಪ್ಲಿಕೇಷನ್ ಗಳಿಗೆ ಸೂಕ್ತವಾಗುವಂತೆ ಸ್ವಿಚ್ ಪ್ಲಗ್ ಗಳನ್ನು, ವಿದ್ಯುತ್ ಕೊಂಡಿಗಳನ್ನು ಮೊದಲೇ ಅಳವಡಿಸಿರಿ. ಕೇವಲ ಮಿಕ್ಸಿಗೆ ಮತ್ತು ಫ್ರಿಡ್ಜ್ ಗಮನದಲ್ಲಿಟ್ಟುಕೊಂಡು ಒಂದು ಅಥವಾ ಎರಡು ಸಾಕೆಟ್ ಅಳವಡಿಸಬೇಡಿ. ಸರಿಯಾಗಿ ಪ್ಲಾನ್ ರೂಪಿಸಿಕೊಂಡು ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಮಾಡಿ. ಗ್ಯಾಸ್ ಸಿಲಿಂಡರ್ ಇಡಲು, ಗ್ಯಾಸ್ ಪೈಪ್ ಗಳಿಗೆ ಸೂಕ್ತ ವ್ಯವಸ್ಥೆ ಇರಲಿ. ಇದರೊಂದಿಗೆ ಸಿಂಕ್ ನೀರು ಸರಾಗವಾಗಿ ಹೋಗುವಂತೆ ಇರಲಿ. ಸಿಂಕ್ ಒಳಭಾಗದಲ್ಲಿ ಕೊಳೆ ತುಂಬಿದಾಗ ಸುಲಭವಾಗಿ ಸ್ವಚ್ಛ ಮಾಡುವಂತೆ ಇರಲಿ. ಒದ್ದೆಯಾದ ಸ್ಥಳವು ಸರಿಯಾಗಿ ಒಣಗುವಂತಹ ವ್ಯವಸ್ಥೆ ಇರಲಿ.
ಸ್ಥಳ ಮತ್ತು ಮೇಲ್ಮೈ :
ಅಡುಗೆ ಮನೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸ್ಥಳಾವಕಾಶ ಹೊಂದಿರಲಿ. ಆದರೆ, ಟೈಲ್ಸ್ ಇತ್ಯಾದಿಗಳಿಗೆ ಗೀರು, ಕಲೆ ಇತ್ಯಾದಿಗಳು ಆಗಬಹುದು. ಇದಕ್ಕಾಗಿ ಮೇಲ್ಮೈಗೆ ಯಾವ ಟೈಲ್ಸ್ ಹಾಕಬೇಕು ಇತ್ಯಾದಿಗಳನ್ನು ಮೊದಲೇ ಪ್ಲಾನ್ ಮಾಡಿಇಟ್ಟು ಕೊಳ್ಳಿ.
ಹೊಸ ಮನೆಗೆ ಆದಷ್ಟು ಹೊಸ ವಸ್ತುಗಳನ್ನು ತನ್ನಿ:
ಹಳೆಯ ಅಡುಗೆ ಮನೆಯ ವಸ್ತುಗಳನ್ನು ಹೊಸ ಮನೆಯ ಕಿಚನ್ ಗೆ ಅಳವಡಿಸಬೇಡಿ. ಹಣ ಉಳಿತಾಯಕ್ಕೆ ಇದು ನಿಮಗೆ ಸುಲಭವೆನಿಸಬಹುದು. ಅಂದರೆ ಹಳೆಯ ಡ್ರಾಯರ್ ಹ್ಯಾಂಡಲ್, ಅಡುಗೆ ಮನೆಯ ಹಳೆಯ ಕಪಾಟಿನ ಬಾಗಿಲುಗಳನ್ನು ಇಲ್ಲಿ ಬಳಸಬೇಡಿ. ಇದರಿಂದ ನಿಮ್ಮ ಹೊಸ ಮನೆಯ ಅಂದಗೆಡಬಹುದು.
ಸುರಕ್ಷತೆಗೆ ಹೆಚ್ಚಿನ ಗಮನ ನೀಡಿ :
ಅಡುಗೆ ಮನೆಯ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿ. ಅಡುಗೆ ಮನೆಯ ವಿನ್ಯಾಸದಲ್ಲಿ ಚೂಪಾಗಿರುವ ಅಂಚುಗಳ ವಿನ್ಯಾಸ ಬಳಸಬೇಡಿ. ಆದಷ್ಟು ರೌಂಡ್ ಮೇಲ್ಮೈ ಇರಲಿ. ಗ್ಯಾಸ್ ಇತ್ಯಾದಿಗಳು ಚಿಕ್ಕ ಮಕ್ಕಳಿಗೆ ಸುಲಭವಾಗಿ ಎಟಕುವಂತೆ ಇಡಬೇಡಿ. ಪುಟ್ಟ ಮಕ್ಕಳು ಬೆಂಕಿ ಅನಾಹುತ ಮಾಡದಂತೆ ಅಡುಗೆ ಮನೆ ಇರಲಿ. ಚಾಕು ಇತ್ಯಾದಿಗಳು ಪುಟ್ಟ ಮಕ್ಕಳ ಕೈಗೆ ಸುಲಭವಾಗಿ ಸಿಗದಂತೆ ಇರಲಿ.