ಸಿಹಿ ಪೊಂಗಲ್ ಮಾಡಲು ಬೇಕಾಗುವ ಸಾಮಗ್ರಿಗಳು :
ಅಕ್ಕಿ - 1/2 ಕಪ್
ಹೆಸರು ಬೇಳೆ - 1/2 ಕಪ್
ನೀರು - 2 ಕಪ್
ಹಾಲು - 2 ಕಪ್
ಏಲಕ್ಕಿ ಪುಡಿ - 1 ಚಮಚ
ಬೆಲ್ಲದ ಪುಡಿ - 1/2 ಕಪ್
ತುಪ್ಪ - 2 ಚಮಚ
ದ್ರಾಕ್ಷಿ - ಸ್ವಲ್ಪ
ಗೋಡಂಬಿ - ಸ್ವಲ್ಪ
ತೆಂಗಿನಕಾಯಿ ತುರಿ - ಸ್ವಲ್ಪ
ಸಿಹಿ ಪೊಂಗಲ್ ತಯಾರಿಸುವ ವಿಧಾನ :
ಹೆಸರು ಬೇಳೆಯನ್ನು ಘಮ್ಮೆನ್ನುವ ಪರಿಮಳ ಬರುವ ತನಕ ಹುರಿದು, ಅಕ್ಕಿಯ ಜೊತೆ ಸೇರಿಸಿ ಕುಕ್ಕರಿನಲ್ಲಿ ನೀರು ಸೇರಿಸಿ ಕೂಗಿಸಿ. ಅಕ್ಕಿ ಮತ್ತು ಬೇಳೆ ಬೆಂದ ನಂತರ, ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ. ಬೆಲ್ಲವನ್ನು ಕರಗಲು ಬಿಡಿ. ಬೆಲ್ಲಕ್ಕೆ ತುರಿದ ತೆಂಗಿನ ಕಾಯಿಯನ್ನು ಹಾಕಿ 10 ನಿಮಿಷ ಬೇಯಿಸಿ. ನಂತರ ಬೆಲ್ಲದ ಪಾಕಕ್ಕೆ ಹಾಲು ಸೇರಿಸಿ. ಬೇಯಿಸಿದ ಅಕ್ಕಿ, ಬೇಳೆಯನ್ನು ಹಾಕಿ, ಸಣ್ಣ ಉರಿಯಲ್ಲಿಟ್ಟು ಚೆನ್ನಾಗಿ ಬೆರೆಸಿರಿ. ಏಲಕ್ಕಿಯನ್ನು ಹಾಕಿ, ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಸೇರಿಸಿದರೆ, ಸಿಹಿ ಪೊಂಗಲ್ ಸವಿಯಲು ರೆಡಿಯಿರುತ್ತದೆ.