ಮಜ್ಜಿಗೆ ಹುಳಿ ಕರ್ನಾಟಕದ ಅತ್ಯಂತ ಜನಪ್ರಿಯ ಖಾದ್ಯವಾಗಿದೆ, ಇದು ಎಲ್ಲಾ ಶುಭ ಕಾರ್ಯಗಳು ಮತ್ತು ಹಬ್ಬಗಳಿಗೆ ಅಗತ್ಯವಾಗಿ ಮಾಡುತ್ತಾರೆ. ಇದನ್ನು ತಯಾರಿಸುವುದು ತುಂಬಾ ಸುಲಭ ಮತ್ತು ಟೇಸ್ಟಿ ಕೂಡ.
ನಾಲ್ಕು ಚಮಚದಷ್ಟು ಕಡಲೆಬೇಳೆಯನ್ನು ಮೂರು ತಾಸಿನತನಕ ನೆನೆಸಿಡಿ. ಬೂದು ಗುಂಬಳವನ್ನು ಸಣ್ಣದಾಗಿ ಹೆಚ್ಚಿ ನೀರಿನಲ್ಲಿ ಬೇಯಿಸಿಕೊಳ್ಳಿ, ಮುಂಚೆಯೇ ನೆನೆಸಿಟ್ಟ ಕಡಲೆ ಬೇಳೆ ಜೊತೆ ಸ್ವಲ್ಪ ಕೊತ್ತಂಬರಿ ಸೊಪ್ಪು, ನಾಲ್ಕರಿಂದ ಐದು ಹಸಿ ಮೆಣಸಿನಕಾಯಿ, ಜೀರಿಗೆ, ಸ್ವಲ್ಪ ತೆಂಗಿನಕಾಯಿ ಹಾಕಿ ರುಬ್ಬಿಕೊಳ್ಳ ಬೇಕು.
ಬೇಯಿಸಿರೋ ಬೂದುಗುಂಬಳದ ಜೊತೆ ರುಬ್ಬಿರುವ ಮಿಶ್ರಣ ಹಾಕಿ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ಸ್ವಲ್ಪ ಹುಳಿ ಇರುವ ಮೊಸರನ್ನು ಹಾಕಿ ಕೆಲವು ಸೆಕೆಂಡುಗಳ ಬಳಿಕ ಗ್ಯಾಸ್ ಸ್ವಿಚ್ ಆಫ್ ಮಾಡಬೇಕು. ಮೊಸರು ಹಾಕಿದ ಬಳಿಕ ಹೆಚ್ಚು ಕುದಿಸಬಾರದು. ನಂತರ ಇಂಗು ಮತ್ತು ಒಗ್ಗರಣೆ ಹಾಕಿದರೆ ಬೂದುಗುಂಬಳ ಮಜ್ಜಿಗೆ ಹುಳಿ ಸವಿಯಲು ಸಿದ್ಧವಿದೆ, ನೀವೂ ಕೂಡ ರೆಡಿ ಇದ್ದಿರಲ್ಲಾ ಮಜ್ಜಿಗೆ ಹುಳಿಯನ್ನು ಅನ್ನದೊಂದಿಗೆ ಆನಂದಿಸಿ.