ನವಣಕ್ಕಿ ದೋಸೆ ಮಾಡಲು ಬೇಕಾಗುವ ಪದಾರ್ಥಗಳು :
ನವಣಕ್ಕಿ - 2 ಕಪ್
ಕಡಲೆಬೇಳೆ - 2 ಟೀ ಚಮಚ
ಮೆಂತ್ಯೆ ಕಾಳು - 1 ಚಮಚ
ಉದ್ದಿನ ಬೇಳೆ - 1 ಕಪ್
ಎಣ್ಣೆ - 1 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ನವಣಕ್ಕಿ ದೋಸೆ ಮಾಡುವ ವಿಧಾನ :
ಉದ್ದಿನ ಬೇಳೆ ಕಡಲೆ ಬೇಳೆ, ನವಣಕ್ಕಿ, ಮೆಂತ್ಯೆ ಕಾಳು ಇವೆಲ್ಲವನ್ನು ಬೇರೆ ಬೇರೆಯಾಗಿ ನಾಲ್ಕು ಗಂಟೆಗಳ ಕಾಲ ನೆನಸಿಡಿ. ಕಡಲೆ ಬೇಳೆ, ಉದ್ದಿನ ಬೇಳೆ ಮತ್ತು ಮೆಂತ್ಯ ಕಾಳನ್ನು ರುಬ್ಬಿಕೊಳ್ಳಿ. ನವಣಕ್ಕಿಯನ್ನು ಬೇರೆಯಾಗಿ ರುಬ್ಬಿಕೊಳ್ಳಿ, ಮಿಶ್ರಣಕ್ಕೆ ಉಪ್ಪನ್ನು ಬೆರೆಸಿ ಹುಳಿ ಬರಲು ಒಂದು ರಾತ್ರಿ ಇಡಿ, ಮಾರನೇ ದಿವಸ ಸ್ವಲ್ಪ ಎಣ್ಣೆ ಹಾಕಿ ದೋಸೆ ಮಾಡಿ ಬಿಸಿ ಬಿಸಿಯಾಗಿ ಚಟ್ನಿ ಜೊತೆ ಸವಿಯಲು ಶುರು ಮಾಡಿ.