ಮೃದುವಾದ ಚಪಾತಿ ಹಾಗೂ ಖಾರಾ ಚಪಾತಿ, ಈರುಳ್ಳಿ ಚಪಾತಿ ತಿನ್ನಲು ಬಹಳ ರುಚಿ
ಚಪಾತಿ ಮಾಡಲು ಬೇಕಾಗುವ ಸಾಮಾಗ್ರಿಗಳು :
1. ಗೋದಿ ಹಿಟ್ಟು - 2 ಪಾವು
2. ಎಣ್ಣೆ - 6 ಟೇಬಲ್ ಚಮಚ
3. ಪುಟಾಣಿ ಹಿಟ್ಟು - 4 ಟೇಬಲ್ ಚಮಚ
4. ಉಪ್ಪು - ರುಚಿಗೆ ತಕ್ಕಷ್ಟು
ಚಪಾತಿ ಮಾಡುವ ವಿಧಾನ:
ಗೋದಿ ಹಿಟ್ಟಿನಲ್ಲಿ ಸ್ವಲ್ಪ ಎಣ್ಣೆ, ಉಪ್ಪು ಹಾಕಿ ಹಿಟ್ಟನ್ನು ಚೆನ್ನಾಗಿ ನಾದಿಕೊಂಡು ಅರ್ಧ ಗಂಟೆ ನೆನಸಿ. ಚಪಾತಿ ಮಾಡುವಾಗ ಪ್ರತಿ ಉಳ್ಳೆಯ ಮಧ್ಯದಲ್ಲಿ ಎಣ್ಣೆ ಪುಟಾಣೆ ಹಿಟ್ಟು ಹಾಕಿ ಸವಿರಿಸಿದರೆ ಚಪಾತಿ ಮಾಡುವಾಗ ಪ್ರತಿ ಉಳ್ಳೆಯ ಮಧ್ಯದಲ್ಲಿ ಎಣ್ಣೆ ಪುಟಾಣೆ ಹಿಟ್ಟು ಹಾಕಿ ಸವಿಸಿದರೆ ಚಪಾತಿ ಮೃದುವಾಗಿ ಉಬ್ಬಿಕೊಂಡು ಬರುತ್ತವೆ. ನಂತರ ಚಪಾತಿ ತರಹ ವತ್ತಿ ಎಣ್ಣೆ ಹಾಕಿ ಸುಡುವುದು.
ಖಾರಾ ಚಪಾತಿ ಮಾಡುವ ವಿಧಾನ :
ಇದೇ ಹಿಟ್ಟಿನ ಖಾರ (ಹಸಿಖಾರಾ ಅಥವಾ ಒಣಖಾರ ಯಾವುದಾದರು), ಉಪ್ಪು ಜೀರಿಗೆಪುಡಿ, ಕೊತ್ತಂಬರಿ, ಎಳ್ಳು ಹಾಕಿ ಚೆನ್ನಾಗಿ ನಾದಿ ಚಪಾತಿ ತರಹ ಲಟ್ಟಿಸಿ ಎಣ್ಣೆ ಹಾಕಿ ಸುಡಿ.
ಈರುಳ್ಳಿ ಚಪಾತಿ ಮಾಡುವ ವಿಧಾನ :
ಒಂದು ಬಟ್ಟಲಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಮಸಾಲೆಪುಡಿ, ಒಣಕಾರ, ಕರಿಬೇವು, ಕೊತ್ತಂಬರಿ, ಜೀರಿಗೆಪುಡಿ, ಎಲ್ಲಾ ಕಲಿಸಿ ಎಣ್ಣೆಯಲ್ಲಿ ಬೆರೆಸಿ ಚಪಾತಿಯ ಮಧ್ಯದಲ್ಲಿ ಇಟ್ಟು ಒತ್ತಿಸುಡಬೇಕು.
ಖಾರದ ಚಪಾತಿಗಳನ್ನು ಮೊಸರಿನಲ್ಲಿ ಅದ್ದಿಕೊಂಡು ತಿಂದರೆ ಇನ್ನು ಬಹಳಷ್ಟು ರುಚಿ ಬರುತ್ತದೆ.
- ಒಂದು ಪಾವು ಹಿಟ್ಟಿಗೆ ಸುಮಾರು ಆರು ಚಪಾತಿ ಆಗುತ್ತದೆ.
- ಚಪಾತಿ ಹಿಟ್ಟನ್ನು ತೋಯಿಸುವಾಗ ಒಡೆದ ಹಾಲು, ತಿಳಿಮಜ್ಜಿಗೆ, ಅಥವಾ ಬೆಣ್ಣೆ ಮಜ್ಜಿಗೆ ಮುಂತಾದುವುಗಳನ್ನು ಹಾಕಿ ತೋಯಿಸಿದರೆ ಚಪಾತಿ ತುಂಬಾ ಮೃದುವಾಗಿರುತ್ತವೆ.