ಅರೋಗ್ಯಕ್ಕೆ ಅನುಕೂಲವಿರುವ ನವಣೆ ಬಜ್ಜಿ ರುಚಿ ನೋಡಲು ರೆಡಿಯಾಗಿ
ನವಣೆ ಬಜ್ಜಿ ಮಾಡಲು ಬೇಕಾಗುವ ಪದಾರ್ಥಗಳು :
ಕಡಲೆ ಹಿಟ್ಟು – 1/4 ಕೆ.ಜಿ
ನವಣಕ್ಕಿ ಹಿಟ್ಟು – 1/2 ಕೆ.ಜಿ
ಜೀರಿಗೆ - 10 ಗ್ರಾಂ
ಕೆಂಪು ಮೆಣಸಿನ ಕಾಯಿ ಪುಡಿ – 25 ಗ್ರಾಂ
ಎಣ್ಣೆ ಕರಿಯಲು
ರುಚಿಗೆ ತಕ್ಕಷ್ಟು ಉಪ್ಪು
ನವಣೆ ಬಜ್ಜಿ ಮಾಡುವ ವಿಧಾನ :
ಕಡಲೆ ಹಿಟ್ಟು, ನವಣಕ್ಕಿ ಹಿಟ್ಟು, ಜೀರಿಗೆ ಕೆಂಪು ಮೆಣಸಿನ ಪುಡಿ, ಉಪ್ಪನ್ನು ಹಾಕಿ ಎಷ್ಟು ಬೇಕೋ ಅಷ್ಟು ನೀರನ್ನು ಹಾಕಿ ಕಲಸಿ, ಕಾದ ಎಣ್ಣೆಗೆ ಕಲಸಿದ ಹಿಟ್ಟನ್ನು ಉಂಡೆ ಮಾಡಿ ಹಾಕಿ ಹದವಾಗೆ ಬೇಯಿಸಿ, ಕೆಂಪು ಬಣ್ಣಕ್ಕೆ ತಿರುಗಿದ ನಂತರ ಬಜ್ಜಿಯನ್ನು ಹೊರ ತೆಗೆಯಿರಿ ನಂತರ ಎಲ್ಲರಿಗೂ ಚಟ್ನಿಯ ಜೊತೆ ಸವಿಯಲು ಕೊಡಿ.