ಮನೆ ಮಂದಿಗೆಲ್ಲಾ ನವಣೆ ಉಂಡೆಯ ಸಿಹಿ ಹಂಚಿ
ನವಣೆ ಉಂಡೆ ಮಾಡಲು ಬೇಕಾಗುವ ಪದಾರ್ಥಗಳು:
ನವಣೆ - 1 ಕಪ್
ಪುಟಾಣೆ - 1 ಕಪ್
ಕೆಂಪಕ್ಕಿ – 1/2 ಕಪ್
ಹುರಿದ ಶೇಂಗಾ - 1 ಕಪ್
ಸಣ್ಣಗೆ ಹೆಚ್ಚಿದ ಕೊಬ್ಬರಿ - 1/2 ಕಪ್
ಬೆಲ್ಲ - ಸ್ವಲ್ಪ
ತುಪ್ಪ - 1 ಚಮಚ
ನವಣೆ ಉಂಡೆ ಮಾಡುವ ವಿಧಾನ:
ನವಣೆ ಮತ್ತು ಕೆಂಪಕ್ಕಿ ಚೆನ್ನಾಗಿ ತೊಳೆದು ಒಂದು ದಿವಸ ನೆರಳಿನಲ್ಲಿ ಒಣಗಿಸಿ ನಂತರ ಹಿಟ್ಟು ಮಾಡಿಕೊಂಡು ತುಪ್ಪ ಹಾಕಿ ಪರಿಮಳ ಬರುವಂತೆ ಕೆಂಪಗೆ ಹುರಿಯಿರಿ. ಪುಟಾಣೆಹಿಟ್ಟು ಮಾಡಿಕೊಳ್ಳಿ ಒಂದು ಪಾತ್ರೆಗೆ ಹಿಟ್ಟುಗಳು, ಶೇಂಗಾ, ಕೊಬ್ಬರಿ, ಎಳ್ಳು ಹಾಕಿ, ಬೆಲ್ಲಕ್ಕೆ ನೀರು ಹಾಕಿ ಕುದಿಸಿ ಎಳೆ ಪಾಕ ಬಂದಾಗ ಹಿಟ್ಟಿಗೆ ಹಾಕಿ ಕಲಸಿ ಉಂಡೆ ಕಟ್ಟಿ.